Advertisement

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ: ಬಾಬಾ ರಾಮದೇವ್

08:39 AM Nov 01, 2021 | Team Udayavani |

ತಿರುಪತಿ: ಯೋಗ ಗುರು, ಪತಂಜಲಿ ಪೀಠ ಮುಖ್ಯಸ್ಥ ಬಾಬಾ ರಾಮದೇವ್ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಆಂಧ್ರಪ್ರದೇಶದ ತಿರುಪತಿಯ ಮಹತಿ ಆಡಿಟೋರಿಯಂನಲ್ಲಿ ಟಿಟಿಡಿ ಆಯೋಜಿಸಿದ್ದ ಎರಡು ದಿನಗಳ ‘ಗೋ ಮಹಾ ಸಮ್ಮೇಳನ’ದ ಕೊನೆಯ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಾಬಾ ರಾಮ್‌ದೇವ್, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಕಾನೂನು ತರಬೇಕು ಎಂದು ಹೇಳಿದರು.

ಇದನ್ನೂ ಓದಿ:500 ಕೋಟಿ ಲಸಿಕೆ ವಾಗ್ಧಾನ; ವಿಶ್ವ ಸಮುದಾಯಕ್ಕೆ ಪ್ರಧಾನಿ ಮೋದಿ ಘೋಷಣೆ

ಪತಂಜಲಿ ಪೀಠವು ಗೋ ಸಂರಕ್ಷಣೆ ಅಭಿಯಾನದಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದರು. “ಗೋ ಮಹಾ ಸಮ್ಮೇಳನದ ನಿರ್ಣಯಗಳು ಎಲ್ಲಾ ಗೋ ಪ್ರೇಮಿಗಳಲ್ಲಿ ಪ್ರತಿಧ್ವನಿಸುತ್ತವೆ” ಎಂದು ಬಾಬಾ ರಾಮದೇವ್ ವಿಶ್ವಾಸ ವ್ಯಕ್ತಪಡಿಸಿದರು.

ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಟಿಟಿಡಿ ಗೋ ಮಹಾ ಸಮ್ಮೇಳನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಯೋಗ ಗುರು ಹೇಳಿದ್ದಾರೆ.

Advertisement

ಅವರು “ಹಿಂದೂ ಧಾರ್ವಿುಕ ಪ್ರಚಾರಕ್ಕಾಗಿ” ಇತರ ಟಿಟಿಡಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು ಮತ್ತು ವಿಶೇಷವಾಗಿ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿಯವರ ಪ್ರಯತ್ನಗಳನ್ನು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next