Advertisement

ನಿರ್ಧಾರ ಮುಂದೂಡಿಕೆ

12:30 AM Feb 21, 2019 | |

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ ಸಮಿತಿ ಬುಧವಾರ ನಡೆಸಿದ ಸಭೆಯಲ್ಲಿ ರಿಯಲ್‌ ಎಸ್ಟೇಟ್‌ ಹಾಗೂ ಲಾಟರಿ ತೆರಿಗೆ ದರಗಳ ಪರಿಷ್ಕರಣೆ ನಿರ್ಧಾರವನ್ನು ರವಿವಾರದ ವರೆಗೆ ಮುಂದೂಡಲಾಗಿದೆ. ವಿಪಕ್ಷದ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರು ಇಂತಹ ಮಹತ್ವದ ವಿಷಯಗಳ ಚರ್ಚೆಗೆ ಖುದ್ದಾಗಿ ಹಾಜರಾಗ ಬೇಕು ಎಂದು ಬಯಸಿದ್ದರಿಂದ ಜಿಎಸ್‌ಟಿ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಈ ಸಭೆಯನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಲಾಗಿದ್ದು, ಜಿಎಸ್‌ಟಿಆರ್‌ 3ಬಿ ಸಲ್ಲಿಕೆ ಸಮಯವನ್ನು ಎರಡು ದಿನಗಳವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಜನವರಿಯ ಸೇಲ್ಸ್‌ ರಿಟರ್ನ್ ಸಾರಾಂಶವನ್ನು ಫೆಬ್ರವರಿ 22 ರವರೆಗೆ ಸಲ್ಲಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next