ಚಿಕ್ಕಬಳ್ಳಾಪುರ: ಬಡತನ ರೇಖೆಗಿಂತ ಕೆಳಗಿರುವಕುಟುಂಬಗಳಲ್ಲಿ ಕೋವಿಡ್‌ನಿಂದ ಮೃತಪಟ್ಟರೆ ಒಂದು ಲಕ್ಷರೂ. ಪರಿಹಾರ ನೀಡುವ ನಿರ್ಧಾರ ಕೈಗೊಂಡಿರುವುದು ಸರ್ಕಾರದ ಇಚ್ಛಾ ಶಕ್ತಿಯನ್ನು ತೋರಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪೆರೇಸಂದ್ರಆರೂರು ಮತ್ತು ದೊಡ್ಡಪೈಲಗುರ್ಕಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀಸಾಯಿಕೃಷ್ಣಚಾರಿಟಬಲ್ ಟ್ರಸ್ಟ್‌ನಿಂದ ಆಶಾ ಕಾರ್ಯಕರ್ತೆಯರಿಗೆಐದು ಸಾವಿರ ಆರ್ಥಿಕ ನೆರವು ಮತ್ತು ಆಹಾರ ಸಾಮಗ್ರಿವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಾಸನ ಜಿಲ್ಲಾ ಪ್ರವಾಸದ ವೇಳೆ ಸಿಎಂ ನಮ್ಮ ಜತೆಸಮಾಲೋಚಿಸಿ ಪರಿಹಾರ ನೀಡುವ ಒಂದು ಹಂತದನಿರ್ಣಯ ಕೈಗೊಂಡಿದ್ದರು. ಭಾನುವಾರ ರಾತ್ರಿ ತಾವುಅವರನ್ನು ಭೇಟಿ ಮಾಡಿದಾಗ ಪರಿಹಾರಕ್ಕೆ ಎಷ್ಟು ಹಣಬೇಕಾಗಬಹುದು ಎಂದು ಲೆಕ್ಕಾ ಹಾಕಿದಾಗ 150 ರಿಂದ200 ಕೋಟಿ ರೂ. ನಿರೀಕ್ಷೆ ಮಾಡಲಾಯಿತು. ಕಷ್ಟಕಾಲದಲ್ಲಿ ಜನರ ಪರ ನಿಲ್ಲಬೇಕು ಎಂಬ ಕಾರಣಕ್ಕೆ ಈನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಪ್ರತ್ಯೇಕವಾಗಿ ಲಕ್ಷ ರೂ. ಪರಿಹಾರ: ರಾಜ್ಯ ಸರ್ಕಾರಕೋವಿಡ್‌ನಿಂದ ಮೃತಪಟ್ಟವರಿಗೆ ತಲಾ 1 ಲಕ್ಷ ರೂ.ಪರಿಹಾರ ನೀಡಲು ನಿರ್ಧರಿಸಿದೆ. ಅದರ ಜೊತೆಗೆಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತಮ್ಮ ಶ್ರೀಸಾಯಿ ಕೃಷ್ಣ ಚಾರಿಟಬಲ್ ಟ್ರಸ್ಟ್ ಮೂಲಕ ತಲಾ 1 ಲಕ್ಷ ರೂ. ಪ್ರತ್ಯೇಕವಾಗಿನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಕಿಟ್ ವಿತರಣೆಗೆ ಕ್ರಮ: ಕೊರೊನಾ ಸಂಕಷ್ಟದಲ್ಲಿರುವಜನರ ಸೇವೆ ಮಾಡಲು ಬದ್ಧನಾಗಿದ್ದೇನೆ. ಜೊತೆಗೆಕೊರೊನಾ ಸೋಂಕು ನಿಯಂತ್ರಿಸಲು ಶ್ರಮಿಸುತ್ತಿರುವಸಮಾಜದ ಮೆಚ್ಚುಗೆ ಪಾತ್ರರಾಗಿರುವ ಆರೋಗ್ಯಸಿಬ್ಬಂದಿ-ಆಶಾ ಕಾರ್ಯಕರ್ತರಿಗೆ ಸರ್ಕಾರದಿಂದದೊರೆಯುವ ಹೆಚ್ಚುವರಿ ಪೊÅàತ್ಸಾಹಧನದ ಜೊತೆಗೆತಮ್ಮ ನೇತೃತ್ವದ ಟ್ರಸ್ಟ್‌ನಿಂದಲೂ ತಲಾ 5 ಸಾವಿರ ರೂ.ನಗದು, ಆಹಾರದ ಕಿಟ್ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಟ್ರಸ್ಟ್‌ನಿಂದ ಈಗಾಗಲೇ ಮಂಚೇನಹಳ್ಳಿ ತಾಲೂಕಿನಲ್ಲಿ ಊಚಿತ ಆಹಾರ ಧಾನ್ಯದ ಜತೆ ತಲಾ ಐದುಸಾವಿರ ರೂ. ನೀಡಲಾಗುತ್ತಿದೆ. ಅದನ್ನು ಮಂಡಿಕಲ್ಲುಭಾಗದಲ್ಲಿರುವ 44 ಮಂದಿಗೂ ವಿಸ್ತರಿಸಲಾಗುವುದುಎಂದೂ ಸಚಿವರು ತಿಳಿಸಿದರು. ಕಾರ್ಯಕ್ರಮದಲ್ಲಿಜಿಲ್ಲಾ ಮಟ್ಟದ ಹಿರಿಯ ಅಧಿ ಕಾರಿಗಳು, ಚುನಾಯಿತಪ್ರತಿನಿ ಧಿಗಳು, ಸ್ಥಳೀಯರು ಪಾಲ್ಗೊಂಡಿದ್ದರು.