Advertisement

ಗಂಗೊಳ್ಳಿ : ದುರಸ್ತಿಯಾಗದ ಜೆಟ್ಟಿ

01:05 AM Dec 21, 2018 | Team Udayavani |

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿದು ಹಲವು ಸಮಯಾವದರೂ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ರೋಸಿ ಹೋಗಿರುವ ಗಂಗೊಳ್ಳಿ ಬಂದರಿನ ಮೀನುಗಾರರು ಇನ್ನು 10 ದಿನದಲ್ಲಿ ದುರಸ್ತಿಗೆ ಮುಂದಾಗದಿದ್ದರೆ ಮೀನುಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Advertisement

ಅ. 13ರಂದು ಬಂದರಿನ ಎರಡನೇ ಹರಾಜು ಪ್ರಾಂಗಣದಲ್ಲಿ ಜೆಟ್ಟಿಯ ಸ್ಲ್ಯಾಬ್‌ ಕುಸಿದಿತ್ತು. ಅದರ ದುರಸ್ತಿ ಯನ್ನೇ ಇನ್ನೂ ಮಾಡಿಲ್ಲ. ಅದರ ಮಧ್ಯೆ ಡಿ. 7 ರಂದು ಅದೇ ಎರಡನೇ ಹರಾಜು ಪ್ರಾಂಗಣದ ಸಮೀಪದಲ್ಲೇ ಸ್ಲ್ಯಾಬ್‌ ಕುಸಿದಿತ್ತು. ಈಗ ಎರಡೆರಡು ಕಡೆಗಳಲ್ಲಿ ಸ್ಲ್ಯಾಬ್‌ ಕುಸಿದಿರುವುದರಿಂದ ಬಂದರಿನಲ್ಲಿ ಮೀನುಗಾರರಿಗೆ ಸ್ಥಳದ ಅಭಾವ ಕಾಣಿಸಿಕೊಳ್ಳುತ್ತಿದೆ. ನೂರಾರು ಮಂದಿ ನಾಡದೋಣಿ, ಬೋಟುಗಳ ಮೀನುಗಾರರು ಇರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದ ಪ್ರತಿಭಟನೆ ಮೂಲಕ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಕಠಿನ ಸಂದೇಶ ರವಾನಿಸಲು ಮೀನುಗಾರರು ಸಜ್ಜಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next