Advertisement

ಭಾರತ ವಿತ್ತ ಸಚಿವೆಯ ನಿರ್ಧಾರ ಸ್ವಾಗತರ್ಹ : ಐಎಂಎಫ್

10:23 AM Oct 20, 2019 | sudhir |

ವಾಷಿಂಗ್‌ಟನ್‌ : ಕಾರ್ಪೊರೇಟ್‌ ವಲಯದಲ್ಲಿನ ಆದಾಯ ತೆರಿಗೆಯ ದರ ಕಡಿತಗೊಳಿಸುವಲ್ಲಿ ಭಾರತ ತೆಗೆದುಕೊಂಡಿರುವ ನಿರ್ಧಾರಕ್ಕೆ ನಮ್ಮ ಬೆಂಬಲಿವಿದೆ ಎಂದು ಹೇಳಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ, ಈ ನಿರ್ಧಾರದಿಂದ ಹೂಡಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

Advertisement

ಭಾರತ ಸದ್ಯ ಸೀಮಿತ ಹಣಕಾಸಿನ ಪರಿಸ್ಥಿತಿಯನ್ನು ಹೊಂದಿದ್ದು, ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಹಾಗಾಗಿ ಭಾರತ ಕೆಲ ದಿನಗಳ ಹಿಂದೆ ಜಾರಿ ಮಾಡಿರುವ ಆದಾಯ ತೆರಿಗೆ ಕಡಿತ ನೀತಿಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಇದರಿಂದ ಹೂಡಿಕೆಯ ವಲಯದಲ್ಲಿ ಬಂಡವಾಳದ ಮಟ್ಟ ಏರಿಕೆಯಾಗಲಿದೆ ಎಂದು ಐಎಂಎಫ್ನ ಏಷ್ಯಾ ಮತ್ತು ಪೆಸಿಫಿಕ್‌ ವಿಭಾಗದ ನಿರ್ದೇಶಕ ಚಾಂಗ್ಯಾಂಗ್‌ ರೀ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಳೆದ ಎರಡು ತ್ತೈಮಾಸಿಕಗಳಲ್ಲಿ ಭಾರತ ಆಟೋಮೊಬೈಲ್‌ ವಲಯದಲ್ಲಿ ಗಮನಾರ್ಹ ಕುಸಿತ ಕಂಡರೂ ಅನಂತರದ ದಿನಗಳಲ್ಲಿ ಸುಧಾರಿತ ಕ್ರಮಗಳನ್ನು ಕೈಗೊಂಡಿದ್ದು, ಆರ್ಥಿಕ ವಲಯದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಈ ಆರ್ಥಿಕ ವರ್ಷದಲ್ಲಿ ಆರ್ಥಿಕತೆ ಬೆಳವಣಿಗೆಯಲ್ಲಿ ಶೇ.6.1 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದ್ದು, 2020 ರಲ್ಲಿ ಇದು ಶೇ.7.0 ರಷ್ಟು ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಐಎಂಎಫ್ ಉನ್ನತ ಅಧಿಕಾರಿ ಮಾತನಾಡಿದ್ದು, ಪ್ರಚೋದನಕಾರಿ ವಿತ್ತೀಯ ನೀತಿ ಮತ್ತು ಘೋಷಿತ ಕಾರ್ಪೊರೇಟ್‌ ಆದಾಯ ತೆರಿಗೆ ಕಡಿತವು ಹೂಡಿಕೆಯನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next