Advertisement
2018ರಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 650 ರೂ. ಸಿಇಟಿ ನೋಂದಣಿ ಶುಲ್ಕ ನಿಗದಿ ಮಾಡ ಲಾಗಿತ್ತು. ಈ ವರ್ಷ ಅದನ್ನು 500 ರೂಪಾಯಿಗಳಿಗೆ ನಿಗದಿ ಪಡಿಸಲಾಗಿದೆ. ಕಳೆದ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 500 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಈ ವರ್ಷ ಸಿಇಟಿ ಬರೆಯಲಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 250 ರೂ. ಶುಲ್ಕ ನಿಗದಿ ಮಾಡಲಾಗುವುದು ಎಂದು ಪ್ರಾಧಿಕಾರದ ಮೂಲಗಳು ಖಚಿತಪಡಿಸಿವೆ.
ಸಿಇಟಿ ಬರೆದು, ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆಯ ಮೊದಲು ಮೂಲ ದಾಖಲೆಗಳ ಪರಿ ಶೀಲನೆ ಮಾಡಲಾಗುತ್ತದೆ. ಬೆಂಗ ಳೂರಿನ ಮಲ್ಲೇಶ್ವರದ 18ನೇ ಕ್ರಾಸ್ ನಲ್ಲಿರುವ ಪ್ರಾಧಿಕಾರದ ಕೇಂದ್ರ ಕಚೇರಿ ಸಹಿತವಾಗಿ ರಾಜ್ಯದ 14 ಕಡೆ ಗಳಲ್ಲಿ ದಾಖಲಾತಿ ಪರಿಶೀಲನೆ ಮಾಡ ಲಾಗುತಿತ್ತು. ಉಳಿದ 16 ಜಿಲ್ಲೆಗಳಲ್ಲೂ ದಾಖ ಲಾತಿ ಪರಿಶೀಲನೆ ಕೇಂದ್ರ ತೆರೆಯುವ ಬಗ್ಗೆಯೂ ಪ್ರಾಧಿಕಾರ ಗಂಭೀರ ಚಿಂತನೆ ನಡೆಸಿದೆ.