Advertisement
ಸ್ಥಳೀಯ ವ್ಯಾಪಾರಿಗಳ ಬಡ್ಡಿ ಹಾವಳಿಯಿಂದ ತಪ್ಪಿಸಲು ರಾಜ್ಯ ಸರ್ಕಾರ ನಗರ ಮತ್ತು ಗ್ರಾಮೀಣ ಪ್ರದೇಶದ ಸಣ್ಣ ಬೀದಿ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕ್, ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಮಹಿಳಾ ಸಹಕಾರ ಬ್ಯಾಂಕ್‌ಗಳ ಮೂಲಕ ಕಿರು ಸಾಲ ನೀಡುವ ಉದ್ದೇಶದಿಂದ 2018 ರ ನವೆಂಬರ್‌ನಲ್ಲಿ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಗೆ ಸಾಕಷ್ಟು ಬೇಡಿಕೆ ಇದ್ದರೂ, ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತಗಳಿಂದ ಗುರುತಿನ ಚೀಟಿ ನೀಡದೇ ಇರುವುದರಿಂದ ಸಾವಿರಾರು ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.
Related Articles
Advertisement
ಫಲಾನುಭವಿಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಿಸ ಲಾಗುತ್ತಿದ್ದು, ಸಾಲ ಮರುಪಾವತಿಗೆ 3 ತಿಂಗಳು ಸಮಯಾವಕಾಶ ನೀಡಲಾಗುತ್ತಿದೆ. ಸಾಲ ಪಡೆಯಲು ಫಲಾನುಭವಿಗಳು ಶೂನ್ಯ ಠೇವಣಿಯಲ್ಲಿ ಖಾತೆ ತೆರಯಬಹುದು. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸುವ ಫಲಾನುಭವಿಗಳಿಗೆ ಶೇ.10 ರಷ್ಟು ಹೆಚ್ಚಳ ಮಾಡಿ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ ಸಾಲದ ಮೇಲಿನ ಬಡ್ಡಿ ಹಣ ನೀಡಲು 1.10 ಕೋಟಿ ರೂ. ಅನ್ನು ಸರ್ಕಾರ ಬಜೆಟ್‌ನಲ್ಲಿ ತೆರೆದಿಟ್ಟಿದೆ.
ಸಾಲ ಪಡೆಯಲು ಮಾಡಬೇಕಿರುವುದು: ಫಲಾನುಭವಿಗಳು ಸಾಲ ಪಡೆಯಲು ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಹಾಗೂ ತಾವು ವ್ಯಾಪಾರ ನಡೆಸುತ್ತಿರುವ ಸ್ಥಳದ ಫೋಟೋ ಮತ್ತು ಸ್ಥಳೀಯ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿಯನ್ನು ಸಹಕಾರಿ ಬ್ಯಾಂಕ್ ನಿಗದಿ ಪಡಿಸಿದ ಅರ್ಜಿ ನಮೂನೆಯಲ್ಲಿ ಸಂಬಂಧಿಸಿದ ಬ್ಯಾಂಕ್‌ನಲ್ಲಿ ಸಲ್ಲಿಸಲು ಸೂಚಿಸಲಾಗಿದೆ.
ಬಡವರ ಬಂಧು ಯೋಜನೆಗೆ ಬೀದಿ ಬದಿ ವ್ಯಾಪಾರಿಗಳಿಂದ ಹೆಚ್ಚಿನ ಬೇಡಿಕೆ ಇದೆ. ಆದರೆ, ಅವರಿಗೆ ಗುರುತಿನ ಚೀಟಿ ಇಲ್ಲದೆ ಸಹಕಾರ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಮೂಲಕ ಗುರುತಿನ ಚೀಟಿ ನೀಡುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.-ಶಿವಪ್ರಕಾಶ್, ಸಹಕಾರ ಸಂಘಗಳ ಅಪರ ನಿಬಂಧಕರು * ಶಂಕರ ಪಾಗೋಜಿ