ಮೈಸೂರು: ನಗರದ ದೇವರಾಜ ಮಾರುಕಟ್ಟೆ ಕಟ್ಟಡ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ನೆಲಸಮಗೊಳಿಸಿ, ಹಿಂದಿನ ಶೈಲಿಯಲ್ಲಿಯೇ ಅಭಿವೃದ್ಧಿಗೆ ಚಿಂತನೆ ನಡೆದಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಶುಕ್ರವಾರ ಬೆಳಗ್ಗೆ ದೇವರಾಜ ಮಾರುಕಟ್ಟೆ ಕಟ್ಟಡ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ವೀಕ್ಷಿಸಿ ಮಾತನಾಡಿದ ಅವರು, ಎರಡು ಪಾರಂಪರಿಕ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದೆ. ಕಟ್ಟಡ ಯಥಾಸ್ಥಿತಿ ಉಳಿಸಿಕೊಳ್ಳುವುದು ಕಷ್ಟ ಪಾರಂಪರಿಕ ಶೈಲಿಯಲ್ಲಿ ಎರಡು ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದರು.
ಇದನ್ನೂ ಓದಿ:ಈ ವರ್ಷ ಜಿ.ಪಂ., ತಾ.ಪಂ. ಚುನಾವಣೆ ಇಲ್ಲ
ಮಾರುಕಟ್ಟೆಯಲ್ಲಿರುವ ವ್ಯಾಪರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಟ್ಟಡ ನೆಲಸಮ ಮಾಡಲಾಗುವುದು. ಸದ್ಯ ಇರುವ ವ್ಯಾಪಾರಸ್ಥರಿಗೆ ತಾತ್ಕಾಲಿಕ ಮಳಿಗೆ ನೀಡುತ್ತೇವೆ ಎಂದರು.
ಹಾಗೆಯೇ 15 ದಿನಗಳೊಳಗೆ ಪುರಭವನದ ಆವರಣದಲ್ಲಿರುವ ಮಲ್ಟಿಲೆವಲ್ ಪಾರ್ಕಿಂಗ್ ಚಾಲನೆ ನೀಡಲಾಗುತ್ತದೆ. ಸದ್ಯದಲ್ಲೇ ಕ್ಲೀನಿಂಗ್ ಕಾರ್ಯ ನಡೆಸಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದರು.