Advertisement

ವಧು-ವರ ಬಯಸಿದ ಮುಹೂರ್ತದಲ್ಲೂ ಸಪ್ತಪದಿ ನಡೆಸಲು ಧಾರ್ಮಿಕ ದತ್ತಿ ಇಲಾಖೆ ತೀರ್ಮಾನ

11:58 PM Feb 06, 2021 | Team Udayavani |

ಬೆಂಗಳೂರು: ಸರಕಾರಿ ಸಾಮೂಹಿಕ ವಿವಾಹದ ಮಾನ ದಂಡಗಳನ್ನು ಸಡಿಲಗೊಳಿಸಲಾಗಿದ್ದು, ವಧು-ವರ ಅಥವಾ ಅವರ ಕುಟುಂಬ ಬಯಸುವ ಮುಹೂರ್ತದಲ್ಲಿಯೂ ಸಪ್ತಪದಿ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಮುಂದಾಗಿದೆ.

Advertisement

ಈವರೆಗೆ ನಿರ್ದಿಷ್ಟ ದಿನಾಂಕದಂದು ಸಪ್ತಪದಿ ಸಾಮೂಹಿಕ ವಿವಾಹ ನೆರವೇರಿಸಲಾಗುತ್ತಿತ್ತು. ಈಗ ಮಾನದಂಡ ಗಳನ್ನು ಸಡಿಲಗೊಳಿಸಲಾಗಿದೆ. ಇಲಾಖೆ ನಿಗದಿಪಡಿಸಿರುವ ದಿನಾಂಕವಲ್ಲದೆ, ವಧು – ವರ ಅಥವಾ ಅವರ ಕುಟುಂಬ ಇಚ್ಛಿಸುವ ದಿನಾಂಕ, ಮುಹೂರ್ತದಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಇಲಾಖೆ ಸಿದ್ಧವಾಗಿದೆ.

ಸಿದ್ಧ ಮುಹೂರ್ತ
ಇಲಾಖೆಯು ಜುಲೈ ತಿಂಗಳ ವರೆಗಿನ ಮುಹೂರ್ತವನ್ನು ಸಿದ್ಧಪಡಿಸಿ, ಬಿಡುಗಡೆ ಮಾಡಿದೆ.

ಫೆಬ್ರವರಿ: 17, 25
ಮಾರ್ಚ್‌: 5, 8, 15, 26, 31
ಎಪ್ರಿಲ್‌: 2, 4, 19, 22, 25, 29
ಮೇ: 3, 6, 9, 13, 21, 30
ಜೂನ್‌: 4, 13, 17, 27
ಜುಲೈ: 1, 4, 7

ವಧು-ವರ ಹೇಳುವ ಮುಹೂರ್ತದ ದಿನದಂದೇ ಬೇಕಾದರೂ ಸಪ್ತಪದಿ ಮಾಡುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ದತ್ತಿ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next