Advertisement

ಮತ್ತೆ ತೊಗರಿ ಖರೀದಿಗೆ ನಿರ್ಧಾರ: ರೈತರ ವಿಜಯೋತ್ಸವ

11:09 AM Mar 08, 2018 | Team Udayavani |

ಕಲಬುರಗಿ: ಮೂರನೇ ಹಂತದಲ್ಲಿ ಕೇಂದ್ರ ಸರ್ಕಾರ ಮತ್ತೆ 10 ಲಕ್ಷ ಕ್ವಿಂಟಲ್‌ತೊಗರಿ ಖರೀದಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಿಂದಕ್ಕೆ ಪಡೆದ ರೈತರು ವಿಜಯೋತ್ಸವ ಆಚರಿಸಿದರು.

Advertisement

ತೊಗರಿ ಖರೀದಿ ಪುನರಾರಂಭಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕಳೆದ 12 ದಿನಗಳಿಂದ ಜಗತ್‌ ವೃತ್ತದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಕೇಂದ್ರ ಸರಕಾರ ಬುಧವಾರ ಆದೇಶ ನೀಡಿದ್ದರಿಂದ ರೈತರು ವಿಜಯೋತ್ಸವ ಆಚರಿಸಿದದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ರೈತರ ಹೋರಾಟಕ್ಕೆ
ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸ್ಪಂದಿಸಿದೆ. ನೋಂದಣಿಯಾಗದೇ ಉಳಿದಿರುವ ರೈತರ ತೊಗರಿ ಖರೀದಿಸುವಂತೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.

ಶ್ರೀಶೈಲ ಸಾರಂಗಮಠದ ಜಗದ್ಗುರು ಸಾರಂಗಧರ ಮಹಾಸ್ವಾಮಿಗಳು, ಮಾಜಿ ಸಚಿವ ಎಸ್‌.ಕೆ. ಕಾಂತಾ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಶರಣಬಸಪ್ಪ ಮಮಶೆಟ್ಟಿ, ಶಿವಾನಂದ ಅಂಕಲಗಿ, ಶಿವಾನಂದ ಗರೂರ ಗುಡೂರ ಹಾಗೂ
ವಿವಿಧ ರೈತ ಸಂಘಟನೆ ಪದಾಧಿಕಾರಿಗಳು ಇದ್ದರು .

Advertisement

Udayavani is now on Telegram. Click here to join our channel and stay updated with the latest news.

Next