Advertisement

ಜಂಕ್ಷನ್‌ಗಳಲ್ಲಿ ಅಳವಡಿಸಿದ್ದ ರಬ್ಬರ್‌ ಕೋನ್‌ ಬದಲಾವಣೆಗೆ ನಿರ್ಧಾರ

11:07 PM Sep 22, 2020 | mahesh |

ಮಹಾನಗರ: ಸುಗಮ ವಾಹನ ಸಂಚಾರ ಮತ್ತು ವಾಹನಗಳ ಚಾಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ವಿವಿಧ ಜಂಕ್ಷನ್‌ಗಳಲ್ಲಿ ಈಗಾಗಲೇ ಅಳವಡಿಸಿ ಕಿತ್ತು ಹೋದ ರಬ್ಬರ್‌ ಕೋನ್‌ಗಳನ್ನು ಬದಲಾವಣೆ ಮಾಡಲು ಪೊಲೀಸ್‌ ಇಲಾಖೆಯು ನಿರ್ಧರಿಸಿದೆ.

Advertisement

ಅಡ್ಡಾದಿಡ್ಡಿ ವಾಹನ ಸಂಚಾರ ತಡೆಯುವ ಉದ್ದೇಶದಿಂದ ನಗರದ ವಿವಿಧ ಜಂಕ್ಷನ್‌ಗಳು, ಬಸ್‌ ಬೇಗಳಲ್ಲಿ ಈಗಾಗಲೇ ರಬ್ಬರ್‌ ಕೋನ್‌ಗಳನ್ನು ಅಳವಡಿಸಲಾಗಿತ್ತು. ಬಸ್‌ಗಳ ಚಕ್ರಗಳಿಗೆ ಸಿಲುಕಿ ಬಹುತೇಕ ಕೋನ್‌ಗಳು ಕಿತ್ತು ಹೋಗಿದ್ದವು. ಇದರಿಂದಾಗಿ ವಾಹನಗಳು ಅಪಘಾತವಾಗುವ ಸಾಧ್ಯತೆ ಹೆಚ್ಚಿತ್ತು. ಈ ಬಗ್ಗೆ “ಉದಯವಾಣಿ ಸುದಿನ’ ಕೆಲವು ತಿಂಗಳ ಹಿಂದೆ ರಿಯಾಲಿಟಿ ಚೆಕ್‌ ನಡೆಸಿ, ವಾಸ್ತವವನ್ನು ಸಾರ್ವಜನಿಕರ ಮುಂದಿಟ್ಟಿತ್ತು. ಪರ್ಯಾಯ ಯೋಜನೆ ಬಗ್ಗೆ ಪೊಲೀಸ್‌ ಇಲಾಖೆ ಭರವಸೆ ನೀಡಿತ್ತು. ಅದರಂತೆ ಇದೀಗ ಕಿತ್ತು ಹೋದ ರಬ್ಬರ್‌ ಕೋನ್‌ ತೆಗೆದು ಹೊಸ ಕೋನ್‌ ಅಳವಡಿಸಲು ಮುಂದಾಗಿದೆ. ನಗರದ ಕರಂಗಲ್ಪಾಡಿ ಜಂಕ್ಷನ್‌ ಬಳಿ ಜೈಲ್‌ ರೋಡ್‌ಗೆ

ತೆರಳುವಲ್ಲಿ ಸುಗಮ ಸಂಚಾರದ ನಿಟ್ಟಿನಲ್ಲಿ ಅಳವಡಿಸಲಾಗಿದ್ದ ರಬ್ಬರ್‌ ಕೋನ್‌ಗಳ ಮೇಲೆ ಬಸ್‌ ಚಲಾಯಿಸಿ ಹಾನಿಗೊಳಿಸಿದ ಕಾರಣಕ್ಕೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕನೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೇ, ಇದಾದ ಕೆಲ ದಿನಗಳ ಹಿಂದೆ, ನಗರದ ಜ್ಯೋತಿ ಚಿತ್ರಮಂದಿರ ಬಳಿ ಕೋನ್‌ಗಳಿಗೆ ಹಾನಿ ಎಸಗಿದ ಮೂರು ಕರ್ನಾಟಕ ಸಾರಿಗೆ ಬಸ್‌ ಮತ್ತು ಎರಡು ಖಾಸಗಿ ಬಸ್‌ ಚಾಲಕರ ವಿರುದ್ಧ ಇದೇ ರೀತಿ ಕ್ರಮ ಜರಗಿಸಲಾಗಿತ್ತು.

ಪ್ರತ್ಯೇಕ ಮಾರ್ಕಿಂಗ್‌
ರಸ್ತೆಗಳಲ್ಲಿ ರಬ್ಬರ್‌ ಕೋನ್‌ಗಳನ್ನು ತೆರವು ಮಾಡಿದ ಕಾರಣ ಬಸ್‌ ಬೇಗಳಲ್ಲಿ ಸದ್ಯ ತೊಂದರೆ ಉಂಟಾಗಿದೆ. ಬಸ್‌ ಬೇ ಗಳಲ್ಲಿ ಬಸ್‌ಗಳಲ್ಲದೆ ಇತರ ವಾಹನಗಳು ಕೂಡ ಸಂಚರಿಸುತ್ತಿವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್‌ ಇಲಾಖೆ ಮುಂದಾಗಿದೆ. ಹೊಸತಾದ ರಬ್ಬರ್‌ ಕೋನ್‌ ಅಳವಡಿಸುವವರೆಗೆ ಬಸ್‌ ಬೇಗಳಲ್ಲಿ ಪ್ರತ್ಯೇಕ ಮಾರ್ಕಿಂಗ್‌ ಮಾಡಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ.

ಹೊಸ ಕೋನ್‌ ಅಳವಡಿಕೆ
ಕೆಲ ಸಮಯದ ಹಿಂದೆ ನಗರದಲ್ಲಿ ಕೆಲವೊಂದು ಕಡೆಗಳಲ್ಲಿ ಅಳವಡಿಸಿದ್ದ ರಸ್ತೆ ಕೋನ್‌ಗಳು ಎದ್ದು ಹೋಗಿದ್ದವು. ಅವುಗಳನ್ನು ಗುರುತಿಸಿ, ಇದೀಗ ತೆಗೆಯ ಲಾಗಿದ್ದು, ಅಲ್ಲಿ ಮತ್ತೆ ಹೊಸ ಕೋನ್‌ಗಳನ್ನು ಅಳವಡಿಸಲಾಗುವುದು. ಅಲ್ಲಿಯವರೆಗೆ ಬಸ್‌ ಬೇಗಳಲ್ಲಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಲೈನ್‌ ಅಳವಡಿಸಲಾಗುವುದು.
-ನಟರಾಜ್‌, ಮಂಗಳೂರು ಟ್ರಾಫಿಕ್‌ ಎಸಿಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next