Advertisement

ಪಿಒಕೆ ಕುರಿತು 1971ರಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ರಾಜನಾಥ್ ಸಿಂಗ್

06:22 PM Sep 26, 2022 | Team Udayavani |

ಹಮೀರ್‌ಪುರ : 1971ರಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವಿನ ಯುದ್ಧದ ವೇಳೆ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.

Advertisement

ಇದನ್ನೂ ಓದಿ : ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ : ಮಹಾರಾಷ್ಟ್ರ ಸಿಎಂ ಶಿಂಧೆ

ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ನಾದೌನ್‌ನಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಕ್ಷಣಾ ಸಚಿವರು,”ನಾವು ಇತ್ತೀಚೆಗೆ 1971 ರ ಯುದ್ಧದ ವಿಜಯದ ಸುವರ್ಣ ಮಹೋತ್ಸವವನ್ನು ಗುರುತಿಸಿದ್ದೇವೆ. ಆಸ್ತಿ ಅಥವಾ ಅಧಿಕಾರದ ಬದಲಿಗೆ ಮಾನವೀಯತೆಗಾಗಿ ಹೋರಾಡಿರುವುದಕ್ಕೆ 1971 ರ ಯುದ್ಧವನ್ನು ಇತಿಹಾಸದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.ಒಂದೇ ವಿಷಾದವೆಂದರೆ ಆ ಸಮಯದಲ್ಲಿಯೇ ಪಿಒಕೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿತ್ತು” ಎಂದರು.

1971 ಭಾರತ ಮತ್ತು ಪಾಕಿಸ್ಥಾನದ ನಡುವಿನ ಮಿಲಿಟರಿ ಮುಖಾಮುಖಿಯಾಗಿದ್ದು, ಪೂರ್ವ ಪಾಕಿಸ್ಥಾನ (ಬಾಂಗ್ಲಾದೇಶ) ವಿಮೋಚನಾ ಯುದ್ಧದ ಸಮಯದಲ್ಲಿ 3 ಡಿಸೆಂಬರ್ 1971 ರಿಂದ 16 ಡಿಸೆಂಬರ್ 1971 ರಂದು ಢಾಕಾದಲ್ಲಿ ಪಾಕಿಸ್ಥಾನ ಶರಣಾಗುವವರೆಗೆ ನಡೆದಿತ್ತು. ಆಗ ಇಂದಿರಾ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next