Advertisement

ಮುಕ್ತ-ನ್ಯಾಯಸಮ್ಮತ ಚುನಾವಣೆಗೆ ನಿರ್ಧಾರ

12:17 PM Feb 28, 2019 | |

ಬೀದರ: ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ವಿವಿಧ ತಂಡ ರಚಿಸಿ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ತಿಳಿಸಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ
ಬುಧವಾರ ಎಂ.ಸಿ.ಸಿ ಮತ್ತು ಎಕ್ಸ್‌ಪೆಂಡಿಚರ್‌ ಮಾನಿಟರಿಂಗ್‌ ತಂಡದವರಿಗೆ ಚುನಾವಣೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಕೆಲಸದಲ್ಲಿ ಹುರುಪು ಇರಲಿ: ಜಿಪಂ ಸಿಇಒ ಮಹಾಂತೇಶ ಬೀಳಗಿ ಮಾತನಾಡಿ, ಪ್ರತಿ ಚುನಾವಣೆಗಳು ಹೊಸ ಅನುಭವ ಮತ್ತು ಪಾಠ ಕಲಿಸುತ್ತವೆ. ಚುನಾವಣಾ ಆಯೋಗವು ಪ್ರತಿ ಚುನಾವಣೆಯಲ್ಲಿ ಹೊಸ ಆದೇಶ ಹಾಗೂ ಮಾರ್ಗಸೂಚಿ ನೀಡುತ್ತದೆ. ಹಾಗಾಗಿ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಹುರುಪಿನಿಂದ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ತಿಳಿಸಿದರು.

ಎಂಸಿಸಿ ತಂಡದ ಅಧಿಕಾರಿಗಳು ಪ್ರತಿ ದಿನದ ವರದಿ ನೀಡುವಿಕೆ, ಪೊಲೀಸ್‌ ಅಧಿಕಾರಿಗಳ ಜವಾಬ್ದಾರಿಗಳು ಮತ್ತು ಚುನಾವಣಾ ಆಯೋಗದ ನಿರ್ದೇಶನಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಬಸವಕಲ್ಯಾಣ ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ತಡೆಯುವಲ್ಲಿ ವಿಎಸ್‌ಟಿ ಮತ್ತು ವಿವಿಟಿ ತಂಡಗಳ ಪಾತ್ರ ಹೆಚ್ಚಿರುತ್ತದೆ.

ಮನೆಗಳಲ್ಲಿ ಆಯೋಜಿಸಲಾಗುವ ಮತ್ತು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವುದು ಕಂಡುಬಂದಲ್ಲಿ ಸ್ವ ವಿವೇಚನೆಯಿಂದ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

ತಾಳ್ಮೆಯಿಂದ ಕಾರ್ಯನಿರ್ವಹಿಸಿ: ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾದ ಕೂಡಲೇ ಚೆಕ್‌ಪೋಸ್ಟ್‌ ಆರಂಭಿಸಲಾಗುತ್ತದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿ ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕು. ಅನುಮಾನಾಸ್ಪದ ವಾಹನಗಳ ಪರಿಶೀಲನೆಗೆ ಹೆಚ್ಚಿನ ಒತ್ತು ಕೊಡಬೇಕು. ಸಾಮಾನ್ಯ ಜನತೆಗೆ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದು
ಸಲಹೆ ಮಾಡಿದರು.

Advertisement

ಜಿಲ್ಲಾ ಖಜಾನೆ ಅಧಿಕಾರಿ ಅಶೋಕ ವಡಗಾವೆ ಚುನಾವಣೆ ವೆಚ್ಚಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಅವಿನಾಶ ಚುನಾವಣೆಗೆ ಸಂಬಂಧಿಸಿದ ಮೊಬೈಲ್‌ ಆ್ಯಪ್‌ ಬಳಕೆ ಬಗ್ಗೆ ವಿವರಣೆ ನೀಡಿದರು. ಇದಕ್ಕೂ ಮುನ್ನ ಜಿಲ್ಲಾ ಮಾಸ್ಟರ್‌ ಟ್ರೇನರ್‌ ಡಾ| ಗೌತಮ ಅರಳಿ ಅಧಿಕಾರಿಗಳಿಗೆ ಚುನಾವಣೆ ತರಬೇತಿ ನೀಡಿದರು.

ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತ ಡಾ| ಶಂಕರ ವಣಕ್ಯಾಳ, ಚುನಾವಣೆ ಅಧಿಕಾರಿಗಳು, ಪೊಲೀಸ್‌ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳು ಚುನಾವಣೆ ಅಚ್ಚುಕಟ್ಟಾಗಿ ನಡೆಸಬೇಕು. ಚುನಾವಣೆ ಆಯೋಗ ನೀಡಿರುವ ನಿರ್ದೇಶನ ಚಾಚು ತಪ್ಪದೇ ಪಾಲಿಸಬೇಕು.
 ಡಾ| ಎಚ್‌.ಆರ್‌. ಮಹಾದೇವ, ಜಿಲ್ಲಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next