Advertisement
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಇಲ್ಲಿಯವರೆಗೆ 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಕಲ್ಬುರ್ಗಿಯ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ಸಂಬಂಧಿಕರ ನಾಲ್ವರ ಪೈಕಿ ಈಗ ಒಬ್ಬರಿಗೆ ಪಾಸಿಟಿವ್ ಬಂದಿದೆ. ದ.ಕ. ಜಿಲ್ಲೆಯಲ್ಲಿ 115 ಜನರನ್ನು ಅತ್ಯಂತ ಸೂಕ್ಷ್ಮವಾಗಿ ತಪಾಸಣೆ ನಡೆಸಲಾಗಿದೆ. ಅವರ ಮೇಲೆ ವಿಶೇಷ ನಿಗಾ ಇರಿಸಲಾಗಿದೆ ಎಂದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದುವರೆಗೆ 29,053 ಜನರು ಹಾಗೂ ನವಮಂಗಳೂರು ಬಂದರಿನಲ್ಲಿ 5,543 ಜನರನ್ನು ತಪಾಸಣೆ ಮಾಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಮೇಲೆ ನಿಗಾ ವಹಿಸಲು ವೆನ್ಲಾಕ್ ನಲ್ಲಿ ನಿಗಾವಣಾ (ಕ್ವಾರಂಟೈನ್) ವಾರ್ಡ್ 10 ಹಾಗೂ ಪ್ರತ್ಯೇಕತಾ (ಐಸೋಲೇಶನ್) 6 ವಾರ್ಡ್ ಮಾಡಲಾಗಿದೆ. ತಾಲೂಕುಗಳಲ್ಲಿರುವ ನಿಗಾ ವಾರ್ಡ್‌ನಲ್ಲಿ 167, ಪ್ರತ್ಯೇಕತಾ ವಾರ್ಡ್‌ಗಳಾಗಿ 120ನ್ನು ಸಿದ್ಧಪಡಿಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 100 ಬೆಡ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗಿನ 46 ಮಾದರಿ ಟೆಸ್ಟ್ ನಡೆಸಲಾಗಿದ್ದು, ಇದರಲ್ಲಿ 36 ಟೆಸ್ಟ್‌ನ ವರದಿ ಬಂದಿದ್ದು, ಎಲ್ಲ ನೆಗೆಟಿವ್ ಆಗಿವೆ. ಸಂಶಯಿತ ಪ್ರಕರಣಗಳಾಗಿ ಜಿಲ್ಲೆಯಲ್ಲಿ 115 ಜನರ ಮೇಲೆ ತಜ್ಞ ವೈದ್ಯರಿಂದ ನಿರಂತರ ನಿಗಾ ಇರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದರು. ಸ್ಪಂದನಾ ವ್ಯವಸ್ಥೆ ರಚನೆ
ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ತಡೆಗಟ್ಟಲು ಈಗಾಗಲೇ ಜಿಲ್ಲಾ ಘಟಕದಿಂದ ಸ್ಪಂದನಾ ವ್ಯವಸ್ಥೆ-ಕೋವಿಡ್ 19 ತಂಡವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಘಟಕದಲ್ಲಿ ವೈದ್ಯರು, ಸಿಬಂದಿಯ ತಂಡ ದಿನದ 24 ಗಂಟೆಯೂ ಕಾರ್ಯಾಚರಿಸುತ್ತಿದೆ. ವಿದೇಶದಿಂದ ಆಗಮಿಸುವ ವಿದೇಶೀ/ಭಾರತೀಯ ಪ್ರಜೆಗಳ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ 1077 ಟೋಲ್‌ಫ್ರೀ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ ಎಂದರು.
Related Articles
ಈಗಾಗಲೇ 145 ಮಂದಿ ವೈದ್ಯರು ಹಾಗೂ ಮೇಲ್ವಿಚಾರಕರಿಗೆ ಕೊರೊನಾ ನಿರ್ವಹಣೆ ಕುರಿತ ತರಬೇತಿ ನೀಡಲಾಗಿದೆ. ಜತೆಗೆ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೂ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಆಶಾ ಕಾರ್ಯ ಕರ್ತೆಯರು ಮಂಗಳವಾರದಿಂದಲೇ ಮನೆ ಮನೆಗೆ ಭೇಟಿ ನೀಡಿ ಕೊರೊನಾ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
Advertisement