Advertisement
ಇತ್ತೀಚೆಗೆ ಮುಗಿದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕೂಟದ ವೇಳೆ 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮುಗಿಸಿರುವ 35ರ ಹರೆಯದ ಶ್ರೀಜೇಶ್ 2006ರಲ್ಲಿ ಹಾಕಿಗೆಪದಾರ್ಪಣೆಗೈದಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಕೃಷ್ಣನ್ ಬಹದೂರ್ ಪಾಠಕ್ ಜತೆ ಗೋಲ್‌ಕೀಪಿಂಗ್ ಕರ್ತವ್ಯವನ್ನು ಹಂಚಿಕೊಂಡಿದ್ದರು.ಈ ಹಂತದಲ್ಲಿ ಮುಂದಿನ ಎರಡು ವರ್ಷಗಳ ಬಗ್ಗೆ ಏನನ್ನೂ ಕೇಳಬೇಡಿ. ಸದ್ಯ ನನ್ನ ಗಮನ ಏಷ್ಯನ್ ಗೇಮ್ಸ್. ಆಬಳಿಕ ಏನಾಗಬಹುದೆಂದು ನೋಡುವ ಎಂದವರು ಭವಿಷ್ಯದ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಿದರು.