ಮಹಾನಗರ: ದ.ಕ. ಸಹಿತ ರಾಜ್ಯದ 8 ಜಿಲ್ಲೆಗಳ ಪಾಲಿಗೆ ವರದಾನವಾಗಿರುವ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಮೂಲಕ ವೆನ್ಲಾಕ್ ಆಸ್ಪತ್ರೆಯು ಮಹತ್ತರ ಸೇವೆಯತ್ತ ಹೆಜ್ಜೆ ಇಟ್ಟಿದೆ.
ಈ ಸಂಬಂಧ ಜೂ. 29ರಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸದ್ಯ 6- 7 ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸ್ನಾತಕೋತ್ತರ ಪದವಿ ಆರಂಭಿಸಲಾಗಿದೆ. ಆರಂಭಿಕ ಹಂತದಲ್ಲಿ ಮೂರು ಸೀಟುಗಳು ವೆನ್ಲಾಕ್‌ಗೆ ಲಭ್ಯವಾಗಲಿವೆ. ಮುಂದಿನ ಹಂತದಲ್ಲಿ ಸೀಟುಗಳು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಶೀಘ್ರದಲ್ಲಿ ಪರಿಶೀಲನ ತಂಡ ಆಗಮನ
ವೆನ್ಲಾಕ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾ ಲಿಟಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಆರಂಭಿಸಲು ಅವಶ್ಯ ಸೌಲಭ್ಯಗಳು ಇವೆಯೇ ಎಂಬ ಬಗ್ಗೆ ಕೇಂದ್ರದ ತಂಡ ಶೀಘ್ರದಲ್ಲಿ ಆಗಮಿಸಿ ಪರಿಶೀಲಿಸಲಿದೆ. ಅದರಿಂದ ಅನುಮತಿ ದೊರೆತ ಕೂಡಲೇ ವೆನ್ಲಾಕ್‌ನಲ್ಲಿ 2020- 21ನೇ ಸಾಲಿನ ಸ್ನಾತಕೋತ್ತರ ಪದವಿ ಆರಂಭವಾಗಲಿದೆ.
Advertisement
ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಸರಕಾರಿ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತಷ್ಟು ಸರಕಾರಿ ಆಸ್ಪತ್ರೆಗಳಲ್ಲಿ ಸ್ನಾತ ಕೋತ್ತರ ಪದವಿ ವಿದ್ಯಾಭ್ಯಾಸ ಒದಗಿಸಲು ತೀರ್ಮಾನಿಸಿದೆ.
Related Articles
Advertisement
ಇದರಿಂದಾಗಿ ಒಂದೆಡೆ ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಹೆಚ್ಚಳವಾಗುವುದು ಮಾತ್ರವಲ್ಲದೇ ವೆನ್ಲಾಕ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸೇವೆ ದೊರೆಯಲು ಸಾಧ್ಯವಿದೆ.
ಮೂರು ವಿಭಾಗದಲ್ಲಿ ಕೋರ್ಸ್
ಡಿಪ್ಲೊಮೇಟ್ ಆಫ್ ನ್ಯಾಷನಲ್ ಬೋರ್ಡ್ (ಡಿಎನ್‌ಬಿ) ನಿಯಮದಡಿ ಸ್ನಾತಕೋತ್ತರ ಕೋರ್ಸ್ ಆರಂಭಿಸಲಾಗುತ್ತದೆ.
ಸದ್ಯದ ಮಾಹಿತಿ ಪ್ರಕಾರ, ಯೂರೋಲಜಿ, ಪಿಡಿಯಾಟ್ರಿಕ್ ಸಹಿತ ಮೂರು ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ವೆನ್ಲಾಕ್‌ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
169 ವರ್ಷಗಳ ಇತಿಹಾಸವಿರುವ ವೆನ್ಲಾಕ್ ಆಸ್ಪತ್ರೆಗೆ ಸದ್ಯ ಒಂದು ವರ್ಷಕ್ಕೆ 3 ಲಕ್ಷ ಮಂದಿ ಹೊರ ರೋಗಿಗಳು, 30,000 ಮಂದಿ ಒಳರೋಗಿಗಳು ಬರುತ್ತಾರೆ. ಇಲ್ಲಿ ಸುಮಾರು 1,000 ಬೆಡ್‌ಗಳಿವೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಉಡುಪಿ, ಹಾಸನ ಮುಂತಾದ 8 ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ.
8 ಜಿಲ್ಲೆಗಳಿಂದ ಬರುವ ರೋಗಿಗಳು
169 ವರ್ಷಗಳ ಇತಿಹಾಸವಿರುವ ವೆನ್ಲಾಕ್ ಆಸ್ಪತ್ರೆಗೆ ಸದ್ಯ ಒಂದು ವರ್ಷಕ್ಕೆ 3 ಲಕ್ಷ ಮಂದಿ ಹೊರ ರೋಗಿಗಳು, 30,000 ಮಂದಿ ಒಳರೋಗಿಗಳು ಬರುತ್ತಾರೆ. ಇಲ್ಲಿ ಸುಮಾರು 1,000 ಬೆಡ್‌ಗಳಿವೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಉಡುಪಿ, ಹಾಸನ ಮುಂತಾದ 8 ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ.