Advertisement
ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಸುಭಾಷ ಗುತ್ತೇದಾರ ಅಧ್ಯಕ್ಷತೆಯಲ್ಲಿ ಗುರುವಾರ ಕರೆದ ಅಧಿಕಾರಿಗಳ ಸಭೆಯಲ್ಲಿ ಅಮೃತ ಮಹೋತ್ಸವ ಆಚರಣೆ ರೂಪುರೇಷೆ ಕುರಿತು ಚರ್ಚಿಸಿ ಅದ್ಧೂರಿ ಆಚರಣೆಗೆ ನಿರ್ಧರಿಸಲಾಯಿತು. ಶಾಸಕ ಸುಭಾಷ ಗುತ್ತೇದಾರ ಮಾತ ನಾಡಿ, ಅಮೃತ ಮಹೋತ್ಸವ ಅದ್ಧೂರಿ ಆಚರಣೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು. ಶ್ರೀರಾಮ ಮಾರುಕಟ್ಟೆಯಲ್ಲಿ ಕೈಗೊಳ್ಳುವ ಸಾರ್ವಜನಿಕ ಧ್ವಜಾರೋಹಣದ ಕಂಬವು 75 ಅಡಿ ಎತ್ತರದ ಕಂಬದಲ್ಲಿ ರಾಷ್ಟ್ರಧ್ವಜಾರೋಣ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಿ. ಸಾರ್ವಜನಿಕರನ್ನು ಆಹ್ವಾನಿಸಿ, ಆಸನದ ವ್ಯವಸ್ಥೆ ಮಾಡಿ, ಪೆಂಡಾಲ್ ಹಾಕಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Related Articles
Advertisement
ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಮಾತನಾಡಿ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಪದಕ ಪುರಸ್ಕಾರ ಆಯೋಜಿಸಲಾಗುವುದು ಎಂದರು.
ಜಿಪಂ ಎಇಇ ನಾಗಮೂರ್ತಿ ಕೆ. ಶೀಲವಂತ, ಬಿಸಿಎಂ ಅಧಿಕಾರಿ ಬಸವರಾಜ ಕಾಳೆ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಮೋನಮ್ಮ ಸುತಾರ, ಕೈಗಾರಿಕೆ ಅಧಿಕಾರಿ ಜಾಫರ್ ಅನ್ಸಾರಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಎಡಿಎಲ್ ಶಿವಕಾಂತ ಜಿಡಗೇಕರ, ನಾಡ ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ನೋಂದಣಿ ಇಲಾಖೆಯ ಶೃತಿ, ತೋಟಗಾರಿಕೆಯ ಶಿವಣ್ಣಾ ಬಿರಾದಾರ, ಅಕ್ಷರದಾಸೋಹ ಅಧಿಕಾರಿ ವಂದನಾ, ರೇಷ್ಮೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.