Advertisement
ಈ ಬಗ್ಗೆ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗೂ 2 ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿರುವ ಅವರು, ಯಾವುದೇ ನಿರ್ಧಾರ ಕೈಗೊಂಡ ರೂ ಅದು 2025ರಿಂದಲೇ ಜಾರಿಯಾಗುತ್ತದೆ ಎಂದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಮಂದಿ ಬರೆಯುವ ಪರೀಕ್ಷೆ ನೀಟ್. 2024ರಲ್ಲಿ 24 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ 2025ರಲ್ಲಿ ಕೇವಲ ಉನ್ನತ ಶಿಕ್ಷಣಕ್ಕೆ ಮಾತ್ರ ಪರೀಕ್ಷೆಗಳನ್ನು ನಡೆಸುತ್ತದೆ. ಯಾವುದೇ ಉದ್ಯೋಗ ಭರ್ತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಪ್ರಧಾನ್ ಹೇಳಿದ್ದಾರೆ.
Related Articles
2025ರಿಂದ ಕೆಲವು ಎನ್ಸಿಆರ್ಇಟಿ ತರಗತಿಗಳ ಪುಸ್ತಕಗಳ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಪ್ರಸ್ತುತ ನಾವು 5 ಕೋಟಿ ಪುಸ್ತಕಗಳನ್ನು ಮುದ್ರಣ ಮಾಡುತ್ತಿದ್ದೇವೆ. ಇದು ಮುಂದಿನ ವರ್ಷಕ್ಕೆ 15 ಕೋಟಿಗೆ ಏರಿಕೆಯಾಗಲಿದೆ. ಹೀಗಾಗಿ ಪುಸ್ತಕಗಳ ದರವೂ ಇಳಿಕೆ ಯಾ ಗುವ ನಿರೀಕ್ಷೆಯಿದೆ. ಅಲ್ಲದೆ 9 ಮತ್ತು 12ನೇ ತರಗತಿಗಳಿಗೆ 2026ಕ್ಕೆ ಹೊಸ ಪುಸ್ತಕಗಳು ದೊರೆಯಲಿವೆ ಎಂದು ಅವರು ಹೇಳಿದ್ದಾರೆ.
Advertisement