Advertisement

ರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ನಿರ್ಧಾರ

12:01 PM Oct 30, 2017 | |

ಶಹಾಬಾದ: ನಗರದಲ್ಲಿ ನವೆಂಬರ್‌ 1ರಂದು ಕನ್ನಡರಾಜ್ಯೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ಉಪತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆ ಅಧ್ಯಕ್ಷತೆಯಲ್ಲಿ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಅಂದು ಬೆಳಗ್ಗೆ 8:30ಕ್ಕೆ ನಗರದ ಎಲ್ಲ ಸರ್ಕಾರಿ ಅಧಿಕಾರಿಗಳು ಹಾಗೂ ಶಾಲಾ-ಕಾಲೇಜಿನ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಮಕ್ಕಳು ನಗರದ ಸರ್ಕಾರಿ ಬಾಲಕರ ಪೌಢಶಾಲೆ ಆವರಣದಲ್ಲಿ ಸೇರಬೇಕು. ನಂತರ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ನಗರದ ಮುಖ್ಯ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾ ತಂಡಗಳ ಜತೆಗೆ ಮೆರವಣಿಗೆ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ ವರೆಗೆ ನಡೆಯುವುದು.

ನಂತರ ವಿಶೇಷ ಉಪನ್ಯಾಸ ಸಮಾರಂಭ ನಡೆಸಲಾಗುವುದು ಎಂದರು. ನಗರದ ಎಲ್ಲ ಶಾಲೆ-ಕಾಲೇಜಿನ ಮುಖ್ಯಸ್ಥರು ಶಾಲೆಗಳಲ್ಲಿ ರಾಜ್ಯೋತ್ಸವ ಬೇಗನೆ ಆಚರಿಸಿ, ನಗರದಲ್ಲಿ ಸರ್ಕಾರದಿಂದ ನಡೆಯುವ ಕನ್ನಡರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಮಕ್ಕಳೊಂದಿಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗುವುದು. ವಿವಿಧ ಇಲಾಖೆಯ ಅಧಿಕಾರಿಗಳು ರಾಜ್ಯೋತ್ಸವ ಸಮಾರಂಭಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.

ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣೌಡ ಪಾಟೀಲ, ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್‌,
ಗ್ರಂಥಪಾಲಕರಾದ ವಿಜಯಕುಮಾರ ಬಾಬನಕರ್‌, ಡಾ| ಪಿ.ಎಸ್‌. ಕೊಕಟನೂರ್‌, ಶಿವಯೋಗಿ ಕಟ್ಟಿ, ಪಶು
ಆಸ್ಪತ್ರೆಸಪತ್ರೆಯ ಡಾ| ನೀಲಪ್ಪ ಪಾಟೀಲ, ಜ್ಯೋತಿ.ಎಸ್‌.ಜೋಷಿ, ಪ್ರಮೋದ ವಂಟಿ, ಅಲ್ಲಮಪ್ರಭು ಮಸ್ಕಿ, ನಗರಸಭೆ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಏಮನಾಥ ರಾಠೊಡ, ರವಿ ಬೆಳಮಗಿ,ಅಮೃತಪ್ಪ, ಸಿದ್ದಲಿಂಗ ಬುಳ್ಳಾ, ಬಸವರಾಜ ಕೊಳಕೂರ,ರಾಜಶೇಖರ ದೇವರಮನಿ, ಶಕುಂತಲಾಬಾಯಿ, ಸಿದ್ದಲಿಂಗಮ್ಮ, ಇಮಿಯಾಜ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next