Advertisement

ಮ್ಯಾಟ್ರಿಮೋನಿಯಲ್ಲಿ ವಿಚ್ಛೇದಿತ ಮಹಿಳೆಯರಿಗೆ ವಂಚನೆ: 6ನೇ ಪತ್ನಿ ದೂರು!

11:32 PM Dec 21, 2021 | Team Udayavani |

ಬೆಂಗಳೂರು: ತನ್ನ ಚೆಂದದ ಫೋಟೋಗಳನ್ನು ಮ್ಯಾಟ್ರಿಮನಿ ವೆಬ್‌ಸೈಟ್‌ ಹಾಕಿ ವಿಚ್ಛೇದಿತ ಮಹಿಳೆಯರನ್ನು ವಂಚಿಸುತ್ತಿದ್ದ ಪತಿಯ ವಿರುದ್ಧ ಆತನ 6ನೇ ಪತ್ನಿ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

Advertisement

ದೂರವಾಣಿ ನಗರದ 32 ವರ್ಷದ ಸೈಯ್ಯದ್‌ ತಹಸೀನ್‌ ಅಹಮ್ಮದ್‌ ಪತಿಯ ವಿರುದ್ಧ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ಗೆ ದೂರು ನೀಡಿದವರು.

ದೂರುದಾರ ಮಹಿಳೆ ಈ ಹಿಂದೆ ವೈಯಕ್ತಿಕ ಕಾರಣಕ್ಕೆ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಬಳಿಕ ತನಗೆ ಹೊಂದುವ ವರನಿಗೆ ಶಾದಿ ಡಾಟ್‌ಕಾಂ ವೆಬ್‌ಸೈಟ್‌ನಲ್ಲಿ ಹುಡುಕುತ್ತಿದ್ದರು.

2018ರಲ್ಲಿ ಆರೋಪಿ ಸೈಯ್ಯದ್‌ ಇವರಿಗೆ ರಿಕ್ವೆಸ್ಟ್‌ ಕಳುಹಿಸಿದ್ದ. ಇಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ 2018 ನ.15ರಂದು ವಿವಾಹವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆರು ವಿವಾಹ
ಸೈಯ್ಯದ್‌ ತಹಸೀನ್‌ ಅಹಮ್ಮದ್‌ ಪತಿಯ ಹಿನ್ನೆಲೆ ಪರಿಶೀಲಿಸಲು ಮುಂದಾದಾಗ ಪತಿಯಿದ್ದ ನೆರೆ-ಹೊರೆ ಮನೆಯವರ ಬಳಿ ಆತನ ಕುರಿತು ವಿಚಾರಿಸಿದಾಗ ಈ ಹಿಂದೆ ಸೈಯ್ಯದ್‌ 5 ವಿವಾಹ ಮಾಡಿಕೊಂಡು ಅವರಿಗೂ ಮೋಸ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಮ್ಯಾಟ್ರಿಮೊನಿಯಲ್‌ ವೆಬ್‌ಸೈಟ್‌ನಲ್ಲಿ ತನ್ನ ಫೋಟೋ ಹಾಕಿ ವಿಚ್ಛೇದಿತ ಮಹಿಳೆಯರಿಗೆ ಬಲೆ ಬೀಸುತ್ತಿದ್ದ. ಈತನ ಬಣ್ಣ ಬಣ್ಣದ ಮಾತಿಗೆ ಮರಳಾಗುತ್ತಿದ್ದ ಮಹಿಳೆಯರನ್ನು ವಿವಾಹವಾಗುತ್ತಿದ್ದ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next