Advertisement

ಹೊಸಬರ ಹಾರರ್‌ ಥ್ರಿಲ್ಲರ್‌ ಸ್ಟೋರಿ “ಡಿಸೆಂಬರ್‌ 24′

03:22 PM Dec 27, 2021 | Team Udayavani |

ಸಾಮಾನ್ಯವಾಗಿ ಎಲ್ಲರೂ ತಮ್ಮ ಸಿನಿಮಾಕ್ಕೆ ಕ್ಯಾಚಿ ಆಗಿರಲಿ ಎಂಬ ಕಾರಣಕ್ಕೆ ವಿಭಿನ್ನ ಟೈಟಲ್‌ಗ‌ಳನ್ನು ಇಡುವುದನ್ನು ನೀವು ನೋಡಿರುತ್ತೀರಿ. ಇಲ್ಲೊಂದು ಚಿತ್ರತಂಡ, ಕ್ಯಾಲೆಂಡರ್‌ನಲ್ಲಿ ಬರುವ “ಡಿಸೆಂಬರ್‌ 24′ ಎಂಬ ಡೇಟ್‌ ಅನ್ನೇ ತಮ್ಮ ಸಿನಿಮಾದ ಟೈಟಲ್‌ ಆಗಿ ಇಟ್ಟುಕೊಂಡಿದೆ. ಅಂದಹಾಗೆ, ಹೀಗೆ ಟೈಟಲ್‌ ಇಡೋದಕ್ಕೂ ಒಂದು ಬಲವಾದ ಕಾರಣ ಚಿತ್ರದ ಕಥಾಹಂದರ ಎನ್ನುತ್ತದೆ ಚಿತ್ರತಂಡ.

Advertisement

ಈಗಾಗಲೇ ತನ್ನ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿ ಸಿರುವ ಚಿತ್ರತಂಡ, ಇತ್ತೀಚೆಗೆ “ಡಿಸೆಂಬರ್‌ 24′ ಚಿತ್ರದ ಮೋಶನ್‌ ಪೋಸ್ಟರ್‌ ಹಾಗೂ ಆಡಿಯೋವನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಬಾ.ಮಾ. ಹರೀಶ್‌, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಮೊದಲಾದವರು ಹಾಜರಿದ್ದು ಚಿತ್ರದ ಮೋಶನ್‌ ಪೋಸ್ಟರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

“ಎಂಜಿಎನ್‌ ಪೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ದೇವು ಹಾಸನ್‌, ಮಂಜು ಡಿ. ಟಿ, ವಿ. ಬೆಟ್ಟೇಗೌಡ “ಡಿಸೆಂಬರ್‌ 24′ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗರಾಜ್‌ ಎಂ. ಜಿ ಗೌಡ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.

ಹುಲಿಯೂರು ದುರ್ಗದಲ್ಲಿ 2015ರಿಂದ 2019 ರವರೆಗೆ ನಡೆದ ಕೆಲ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ಮಾಣವಾಗಿರುವ ಹಾರರ್‌ – ಥ್ರಿಲ್ಲರ್‌ ಕಥಾನಕ ಹೊಂದಿರುವ “ಡಿಸೆಂಬರ್‌ 24′ ಚಿತ್ರದಲ್ಲಿ ಅಪ್ಪು ಬಡಿಗೇರ, ರವಿ ಕೆ.ಆರ್‌ ಪೇಟೆ, ರಘು ಶೆಟ್ಟಿ, ಜಗದೀಶ್‌ ಹೆಚ್‌. ದೊಡ್ಡಿ, ಸಾಗರ್‌, ಭೂಮಿಕಾ ರಮೇಶ್‌, ಮಿಲನಾ ರಮೇಶ್‌, ದಿವ್ಯಾ ಆಚಾರ್‌, ಆನಂದ್‌ ಪಟೇಲ್‌, ಅನಿಲ್‌ ಗೌಡ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next