Advertisement

MLA ಟಿಕೆಟ್‌ ಕೊಡಿಸುವುದಾಗಿ ವಂಚನೆ- ಚೈತ್ರಾ ಪ್ರಕರಣದಲ್ಲಿ ನಾಲ್ವರಿಗೆ ನೋಟಿಸ್‌

11:43 PM Sep 21, 2023 | Team Udayavani |

ಬೆಂಗಳೂರು: ಎಂಎಲ್‌ಎ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ನಾಲ್ವರಿಗೆ ನೋಟಿಸ್‌ ನೀಡಿದೆ.

Advertisement

ಈ ಪೈಕಿ ಹಾಲಶ್ರೀ ಸ್ವಾಮೀಜಿಯ ಆಪ್ತ ಪ್ರಣವ್‌ ಪ್ರಸಾದ್‌ ಗುರುವಾರ ವಿಚಾರಣೆಗೆ ಹಾಜರಾಗಿದ್ದಾನೆ. ಮತ್ತೂಂದೆಡೆ ಸ್ವಾಮೀಜಿ ಆಪ್ತ ತಿಪ್ಪೇಸ್ವಾಮಿ, ದೂರುದಾರ ಗೋವಿಂದಬಾಬು ಪೂಜಾರಿಗೆ ಪ್ರಕರಣದಲ್ಲಿ ಸಹಾಯ ಮಾಡಿದ ಕಡೂರಿನ ತುಡುಕೂರು ಮಂಜು ಮತ್ತು ಕೆಪಿಸಿಸಿ ವಕ್ತಾರ ಮೈಸೂರಿನ ಲಕ್ಷ್ಮಣ್‌ ವಿಚಾರಣೆಗೆ ಗೈರಾಗಿದ್ದಾರೆ.
ಮೈಸೂರಿನ ಪ್ರಣವ್‌ ಪ್ರಸಾದ್‌ ಗುರುವಾರ ವಿಚಾರಣೆ ಹಾಜ ರಾಗಿದ್ದು, ಸ್ವಇಚ್ಛಾ ಹೇಳಿಕೆ ನೀಡಿ ದ್ದಾನೆ. ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಸ್ವಾಮೀಜಿಯ ಕಾರು ಚಾಲಕ ರಾಜು ಎಂಬಾತ ಹಣ ತಂದು ತಮ್ಮ ಕಚೇರಿಯಲ್ಲಿ ಇಟ್ಟಿದ್ದ.

ಬಳಿಕ ಯಾವುದೋ ಬ್ಯಾಗ್‌ ಎಂದು ಸುಮ್ಮನಾದೆ, ಪ್ರಕರಣ ಮಾಧ್ಯಮ ಗಳಲ್ಲಿ ಬಂದ ಬಳಿಕ ಬ್ಯಾಗ್‌ ಪರಿಶೀಲಿಸಿದಾಗ ಹಣ ಇರುವುದು ಗೊತ್ತಾಗಿ, ಮಠಕ್ಕೆ ವಾಪಸ್‌ ಕೊಟ್ಟಿದ್ದೇನೆ. ಹಣದ ಮೂಲದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೂರುದಾರ ಗೋವಿಂದಬಾಬು ಪೂಜಾರಿಗೆ ನೆರವಾದ ತುಡುಕೂರು ಮಂಜು ಮತ್ತು ಸುದ್ದಿಗೋಷ್ಠಿಯಲ್ಲಿ ಪ್ರಕರಣದಲ್ಲಿ ದೊಡ್ಡವರು ಭಾಗಿಯಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದ ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ಗೆ ಹೆಚ್ಚಿನ ಮಾಹಿತಿ ನೀಡುವಂತೆ ನೋಟಿಸ್‌ ಕೊಡಲಾಗಿತ್ತು. ಇನ್ನು ಸ್ವಾಮೀಜಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ತಿಪ್ಪೇಸ್ವಾಮಿ ಎಂಬವ ರಿಗೂ ನೋಟಿಸ್‌ ಕಳುಹಿಸಲಾಗಿತ್ತು.

2.76 ಕೋ. ರೂ. ಜಪ್ತಿ
ಸಿಸಿಬಿ ಪೊಲೀಸರು ಆರೋಪಿಗಳ ವಶದಲ್ಲಿದ್ದ ಹಣವನ್ನು ಜಪ್ತಿ ಮಾಡು ತ್ತಿದ್ದಾರೆ. ಹಾಲಶ್ರೀ ಮಠಕ್ಕೆ ಪ್ರಣವ್‌ ಪ್ರಸಾದ್‌ ತಲುಪಿಸಿದ್ದ 56 ಲಕ್ಷ ರೂ., ಚೈತ್ರಾಳಿಂದ ಚಿನ್ನಾಭರಣ, ನಗದು, ಕಾರು, ಎಫ್ಡಿ ಸೇರಿ 2 ಕೋ. ರೂ. ಜಪ್ತಿ ಮಾಡಲಾಗಿದೆ. ಸ್ವಾಮೀಜಿ ಪರಿಚಯಸ್ಥರಲ್ಲಿದ್ದ 20 ಲ.ರೂ. ಸಹಿತ ಒಟ್ಟು 2.76 ಕೋ. ರೂ. ಜಪ್ತಿ ಮಾಡಲಾಗಿದೆ.

Advertisement

ಯಾರ ಹೆಸರಿನಲ್ಲಿ ಕೆ.ಕೆ.ಗೆಸ್ಟ್‌ ಹೌಸ್‌ನಲ್ಲಿ ರೂಮ್‌?
ಸಾಮಾನ್ಯವಾಗಿ ಕುಮಾರ ಕೃಪಾ ಗೆಸ್ಟ್‌ ಹೌಸ್‌ನಲ್ಲಿ ರಾಜಕೀಯ ಹಿನ್ನೆಲೆ, ಸರಕಾರಿ ಅಧಿಕಾರಿಗಳು ಸಹಿತ ಆಯ್ದ ಕೆಲವು ವರ್ಗದ ವ್ಯಕ್ತಿಗಳಿಗಷ್ಟೇ ರೂಮ್‌ ಸಿಗುತ್ತದೆ. ಆದರೆ ಚೈತ್ರಾ ಯಾರ ಹೆಸರನ್ನು ಬಳಸಿಕೊಂಡು ಕೋಣೆ ಕಾದಿರಿಸಿಕೊಂಡಿದ್ದಳು ಎಂಬುದು ಗೊತ್ತಾಗಿಲ್ಲ. ಹೀಗಾಗಿ ಗೆಸ್ಟ್‌ಹೌಸ್‌ನಲ್ಲಿ ಅಂದಿನ ಸಿಸಿಕೆಮರಾ ದೃಶ್ಯಗಳು ಹಾಗೂ ಡೈರಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮೌನಕ್ಕೆ ಜಾರಿದ ಚೈತ್ರಾ
ಕೆಲವು ದಿನಗಳ ಹಿಂದೆ ಮಾಧ್ಯಮಗಳ ಮುಂದೆ “ಸ್ವಾಮೀಜಿ ಸಿಗಲಿ ದೊಡ್ಡವರ ಹೆಸರೆಲ್ಲ ಹೊರಗೆ ಬರುತ್ತದೆ’ ಎಂದು ಹೇಳಿದ್ದ ಚೈತ್ರಾ ಕುಂದಾಪುರ ಸ್ವಾಮೀಜಿ ಬಂಧನದ ಬಳಿಕ ಮೌನಕ್ಕೆ ಶರಣಾಗಿದ್ದಾಳೆ. ಪೊಲೀಸ್‌ ವಶದಲ್ಲಿರುವ ಸ್ವಾಮೀಜಿ, ಚೈತ್ರಾ ಕುಂದಾಪುರ, ಗಗನ್‌ ಮತ್ತು ತಂಡ ಹೊರತುಪಡಿಸಿ ಬೇರೆ ಯಾರ ಬಗ್ಗೆಯೂ ತಿಳಿದಿಲ್ಲ ಎಂದು ಹೇಳಿದ್ದರು. ಸ್ವಾಮೀಜಿ ಮತ್ತು ಚೈತ್ರಾಳನ್ನು ಮುಖಾಮುಖೀ ವಿಚಾರಣೆಗೆ ನಡೆಸಿದಾಗ ಚೈತ್ರಾ ಮೌನಕ್ಕೆ ಶರಣಾಗಿದ್ದಾಳೆ. ದೊಡ್ಡವರ ಬಗ್ಗೆ ಮಾಹಿತಿ ಇಲ್ಲ. ಸ್ವಾಮೀಜಿ, ಗಗನ್‌ ಸೇರಿ ಒಂದೆರಡು ಮಂದಿ ಮಾತ್ರ ಇದ್ದೇವೆ. ಬೇರೆ ಯಾರ ಬಗ್ಗೆಯೂ ಗೊತ್ತಿಲ್ಲ ಎಂದು ಹೇಳಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಗೋವಿಂದಬಾಬು ಪೂಜಾರಿಗೆ ಸಂಕಷ್ಟ
ಪ್ರಕರಣದ ದೂರುದಾರ ಗೋವಿಂದಬಾಬು ಪೂಜಾರಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. 5 ಕೋಟಿ ರೂ. ಮೂಲದ ಬಗ್ಗೆ ತನಿಖೆ ನಡೆಸುವಂತೆ ವಕೀಲ ನಟರಾಜ್‌ ಶರ್ಮಾ ಎಂಬವರು ಜಾರಿ ನಿರ್ದೇಶನಾಲಯಕ್ಕೆ ಗೋವಿಂದಬಾಬು ಪೂಜಾರಿ ವಿರುದ್ಧ ದೂರು ನೀಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಹವಾಲ ಮೂಲಕ ಬಂದಿರುವ ಅನುಮಾನವಿದೆ. ಹೀಗಾಗಿ ಈ ಪ್ರಕರಣವನ್ನು ಇ.ಡಿ. ತನಿಖೆ ಮಾಡಿ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಬೇಕು. ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ ಎಂದು ಗೋವಿಂದ ಬಾಬು ಪೂಜಾರಿ ಹೇಳಿ¨ªಾರೆ. ಸಾಲವಾಗಿ ಪಡೆದ ಹಣವನ್ನು ಹೀಗೆ ಬಳಸಿಕೊಳ್ಳುವುದೂ ತಪ್ಪು, ಅವರು ಮುಂಬಯಿಯಲ್ಲಿ ವ್ಯವಹಾರ ನಡೆೆಸಿರುವ ಹಿನ್ನೆಲೆಯಲ್ಲಿ ಹವಾಲ ಹಣ ಇರಬಹುದು ಎಂದು ನಟರಾಜ್‌ ಶರ್ಮಾ ಇಡಿಗೆ ದೂರು ನೀಡಿದ್ದಾರೆ.

ಇದುವರೆಗೆ 8 ಆರೋ ಪಿಗಳನ್ನು ಬಂಧಿಸ ಲಾಗಿದ್ದು, ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳಿಂದ ನಗದು ಸಹಿತ ಒಟ್ಟು 2.76 ಕೋಟಿ ರೂ.ಜಪ್ತಿ ಮಾಡಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಪ್ರಣವ್‌ ಪ್ರಸಾದ್‌, ತಿಪ್ಪೇಸ್ವಾಮಿ ಸೇರಿ ನಾಲ್ವರಿಗೆ ಸಿಸಿಬಿ ನೋಟಿಸ್‌ ನೀಡಿದ್ದು, ಸದ್ಯ ಪ್ರಣವ್‌ ವಿಚಾರಣೆಗೆ ಹಾಜರಾಗಿ¨ªಾರೆ.
-ಬಿ.ದಯಾನಂದ, ನಗರ ಪೊಲೀಸ್‌ ಆಯುಕ್ತ.

Advertisement

Udayavani is now on Telegram. Click here to join our channel and stay updated with the latest news.

Next