ಮಂಗಳೂರು: ರಿಯಲ್ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇ ಶಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯ “ಯುಐ’ ಚಲನಚಿತ್ರ ಡಿ. 20ರಂದು ದೇಶಾದ್ಯಂತ ತೆರೆ ಕಾಣಲಿದೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಉಪೇಂದ್ರ, ಯುಐ ಚಲನಚಿತ್ರ ಕನ್ನಡ, ತೆಲುಗು, ಮಲಯಾಳಂ, ಹಿಂದಿ,ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗ ಲಿದೆ. ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಬಗ್ಗೆ ಲೆಕ್ಕಾಚಾರ ಮಾಡಲಾಗುತ್ತಿದ್ದು, ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ಧತೆ ನಡೆಸುತ್ತಿ ದ್ದೇವೆ. ಯುಐ ಎಂದರೇನು? ಎಂಬ ಕುತೂಹಲವೇ ಹತ್ತಾರು ಯೋಚನೆ ಮೂಡಿಸಿದೆ. ಇದಕ್ಕೆ ಚಿತ್ರಮಂದಿರದಲ್ಲೇ ಉತ್ತರ ಸಿಗಲಿದೆ ಎಂದರು.
ಇಂದಿನ ಒಟಿಟಿ, ಜಾಲತಾಣ ಸಹಿತ ಚಲನಚಿತ್ರ ವೀಕ್ಷಣೆಗೆ ಹಲವು ಮಾಧ್ಯಮ ಇದ್ದರೂ, ಉತ್ತಮ ವಿಷಯಾಧಾರಿತ ಚಲನಚಿತ್ರವನ್ನು ಪ್ರೇಕ್ಷಕರು ಎಂದೂ ಕೈ ಬಿಟ್ಟಿಲ್ಲ. ನಾನು ಚಲನಚಿತ್ರದಲ್ಲಿ ವಿಷಯಕ್ಕೆ ಆದ್ಯತೆ ನೀಡುತ್ತೇನೆ. ಎಐ ತಂತ್ರಜ್ಞಾನದ ಬಳಕೆಯನ್ನೂ ಯುಐನಲ್ಲಿ ಮಾಡ ಲಾಗಿದೆ ಚಿತ್ರವನ್ನು ಸೂಕ್ಷ್ಮವಾಗಿ ವೀಕ್ಷಿಸಿದರೆ ಪ್ರೇಕ್ಷಕನಿಗೆ ಅದರಲ್ಲಿ ಒಂದೊಂದು ಪದರ ಕಾಣಬಹುದು. ಪ್ರೇಕ್ಷಕರಿಗೆ ಈ ಚಿತ್ರ ಎಷ್ಟು ಅರ್ಥ ಆಗುತ್ತೆ ಅನ್ನೋ ಕುತೂಹಲ ನನಗೂ ಇದೆ ಎಂದು ಹೇಳಿದರು.
ಉಪೇಂದ್ರ ಅಭಿನಯದ “ಕರಿಮಣಿ ಮಾಲೀಕ’ ಹಾಡು ಇತ್ತೀಚಿನ ದಿನಗಳಲ್ಲಿ ಮರಳಿ ಜನಪ್ರಿಯತೆ ಪಡೆದುಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಾಡು 15 ವರ್ಷ ಕಳೆದ ಮೇಲೆ ಜನರಿಗೆ ಅರ್ಥ ಆಯ್ತು ಎಂದರು.
ನಾನೂ ಕರಾವಳಿಯವ ಕರಾವಳಿಗರು ಕನ್ನಡ ಚಲನಚಿತ್ರ ನೋಡುವುದಿಲ್ಲ ಎನ್ನುವುದು ತಪ್ಪು. ನನ್ನ ಚಲನಚಿತ್ರ ಸಹಿತ ಅನೇಕ ಚಿತ್ರವನ್ನು ಇಲ್ಲಿನ ಜನ ಕೈ ಹಿಡಿದಿದ್ದಾರೆ. ನಾನು ಕೂಡ ಕರಾವಳಿ ಮೂಲದವ. ಇಲ್ಲಿನ ದೈವ, ದೇವರಲ್ಲಿ ವಿಶೇಷ ನಂಬಿಕೆ ಇದೆ. ಯುಐ ಚಲನಚಿತ್ರದಲ್ಲಿ ನಿರತನಾಗಿದ್ದರಿಂದ ಇತ್ತೀಚಿನ ದಿನಗಳಲ್ಲಿ ತುಳು ಚಲನಚಿತ್ರ ವೀಕ್ಷಿಸಲು ಸಾಧ್ಯವಾಗಿಲ್ಲ. ತುಳು ಭಾಷೆಯಲ್ಲಿ ಸೂಪರ್ ಹಿಟ್ ಆದ ಚಲನಚಿತ್ರವನ್ನು ಖಂಡಿತ ನೋಡುತ್ತೇನೆ. ಯುಐ ಚಿತ್ರದಲ್ಲಿಯೂ ಕರಾವಳಿಯ ನಟರು ನಟಿಸಿದ್ದಾರೆ ಎಂದರು.
“ಯುಐ’ ಬಗ್ಗೆ ಮಾತ್ರ ಪ್ರಸ್ತಾವ
ಯುಐ ಚಲನಚಿತ್ರದ ಬಗೆಗಿನ ಪತ್ರಿಕಾಗೋಷ್ಠಿಯಲ್ಲಿ ಬೇರೆ ವಿಷಯ ಗಳ ಬಗ್ಗೆ ಮಾತನಾಡುವುದಿಲ್ಲ ಎಂಹು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ತಂಡದ ಶ್ರೀಕಾಂತ್, ಸಹ ನಿರ್ಮಾಪಕ ನವೀನ್ ಮನೋಹರನ್, ಲಹರಿ ವೇಲು, ರಾಜೇಶ್ ಭಟ್, ಪ್ರೀತಮ್ ಶೆಟ್ಟಿ ಇದ್ದರು.
ಕಟೀಲು ದೇಗುಲಕ್ಕೆ ನಟ ಉಪೇಂದ್ರ ಭೇಟಿ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ಉಪೇಂದ್ರ ಭೇಟಿ ನೀಡಿದರು. ದೇಗುಲದ ವತಿಯಿಂದ ಉಪೇಂದ್ರ ಅವರನ್ನು ಗೌರವಿಸಲಾಯಿತು.