Advertisement

ಡೆಬಿಟ್‌ ಕಾರ್ಡ್‌ ಸ್ವೆ„ಪ್‌ ಮಾಡುವ ಮುನ್ನ ಯೋಚಿಸಿ

12:48 AM Apr 14, 2019 | sudhir |

ಉಡುಪಿ: ಇತ್ತೀಚಿನ ದಿನದಲ್ಲಿ ಡೆಬಿಟ್‌ ಕಾರ್ಡ್‌ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಬುದ್ಧಿವಂತರ ಜಿಲ್ಲೆಯೆಂದು ಕರೆಸಿಕೊಂಡಿರುವ ಉಡುಪಿ ಹೊರತಾಗಿಲ್ಲ.

Advertisement

ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಹಾಗೂ ತಂತ್ರಜ್ಞಾನ ಹೆಚ್ಚಿದಂತೆ, ಅಪರಾಧ ಪ್ರಕರಣಗಳೂ ಏರಿಕೆಯಾಗುತ್ತಿವೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ನಡೆಯುವ ವಂಚನೆ ಪ್ರಕರಣಗಳಿಗೆ ತಕ್ಕ ಮಟ್ಟಿನ ಬ್ರೇಕ್‌ ಹಾಕಿದ್ದು, ಒ.ಟಿ.ಪಿ. ಈ ವ್ಯವಸ್ಥೆ ಜಾರಿಗೆ ಬಂದ ಮೇಲೆ ಸೈಬರ್‌ ಕ್ರೈಂ ಪ್ರಕರಣಗಳು ಇಳಿಕೆ ಕಂಡಿದ್ದು ನಿಜ. ಆದರೆ ತಂತ್ರಜ್ಞಾನ ಮುಂದುವರಿದಂತೆ ಕಳ್ಳರು ಹೆಚ್ಚೆಚ್ಚು ಬುದ್ಧಿ ಉಪಯೋಗಿಸುತ್ತಿ¨ªಾರೆ. ಅದೆಲ್ಲಿಯ ವರೆಗೆ ಅಂದರೆ ಎಟಿಎಂ ಮಾಹಿತಿ ಹ್ಯಾಕ್‌ ಮಾಡಿ ಹೊಸ ಎಟಿಎಂ ಸೃಷ್ಟಿ ಮಾಡುವಷ್ಟು ಮುಂದುವರಿದಿದ್ದಾರೆ.

ನಗರ ಪ್ರದೇಶದವರೇ ಟಾರ್ಗೆಟ್‌
ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರ ವಾಸಿಗಳೇ ಹೆಚ್ಚು ಟಾರ್ಗೆಟ್‌. ಇಂದು ಆನ್‌ಲೈನ್‌, ಡೆಬಿಟ್‌ ಕಾರ್ಡ್‌ ಮೂಲಕ ವ್ಯವಹಾರ ನಡೆಸುವುದು ಪ್ರತಿಷ್ಠೆಯಾಗಿದೆ. ಅದನ್ನೇ ಬಂಡವಾಳವನ್ನಾಗಿಕೊಂಡ ಆನ್‌ಲೈನ್‌ ಕಳ್ಳರು ಗ್ರಾಹಕರಿಗೆ ಗೊತ್ತಾಗದ ರೀತಿಯಲ್ಲಿ ಖಾತೆಯಲ್ಲಿರುವ ಹಣವನ್ನು ಮಾಯವಾಗಿಸುತ್ತಿದ್ದಾರೆ. ಸುಶಿಕ್ಷಿತರು ಎನಿಸಿಕೊಂಡವರೇ ಜಿಲ್ಲೆಯಲ್ಲಿ ಹೆಚ್ಚು ಮೋಸ ಹೋಗುತ್ತಿರುವುದು ವಿಪರ್ಯಾಸ.

ಸ್ವೆ„ಪ್‌ ಮಾಡುವ ಮುನ್ನ ಯೋಚಿಸಿ
ಡೆಬಿಟ್‌ ಕಾರ್ಡ್‌ಗಳನ್ನು ಸ್ವೆ„ಪ್‌ ಮಾಡಿದ ಸಂದರ್ಭ ಡೆಬಿಟ್‌ ಕಾರ್ಡ್‌ಗಳ ಸಂಖ್ಯೆಯನ್ನು ಕದ್ದು ಅವುಗಳಲ್ಲಿ ನಕಲಿ ಕಾರ್ಡ್‌ ತಯಾರಿಸಿ ಲೀಲಾಜಾಲವಾಗಿ ಲಕ್ಷಾಂತರ ರೂಪಾಯಿ ದೋಚುತ್ತಿರುವ ಘಟನೆ ಜಿಲ್ಲೆಯ ಪ್ರತಿಷ್ಠಿತ ಶಾಂಪಿಂಗ್‌ ಮಾಲ್‌ನಲ್ಲಿ ನಡೆದಿದೆ.

ಮಾಹಿತಿ ಕಳವು ಹೇಗೆ
ಗ್ರಾಹಕರು ಬಳಸುವ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಗಳನ್ನು ಕದಿಯುವವರು ಬೇರೆ ಯಾರೂ ಅಲ್ಲ. ಸ್ವಯಂ ಸ್ವೆ„ಪಿಂಗ್‌ ಯಂತ್ರಗಳೇ ಮಾಹಿತಿಗಳನ್ನು ಕದಿಯುತ್ತವೆ. ವಿದೇಶಿ ಡೆಬಿಟ್‌ ಕಾರ್ಡ್‌ ಸ್ವೆ çಪ್‌ ಹ್ಯಾಕಿಂಗ್‌ ಯಂತ್ರದ ಮೂಲಕ ಸ್ಕ್ಯಾನ್‌ ಆಗಿರುವ ಕಾರ್ಡ್‌ಗಳ ಮಾಹಿತಿ ದಾಖಲಿಸಿ ಕೊಳ್ಳುತ್ತವೆ. ಹೀಗೆ ಕಳವು ಮಾಡಿರುವ ಮಾಹಿತಿಯನ್ನು ಬೆಂಗಳೂರಿನಲ್ಲಿರುವ ಹ್ಯಾಕ್ಸ್‌ಗಳಿಗೆ ನೀಡಲಾಗುತ್ತದೆ. ಇದೇ ಮಾಹಿತಿ ಇಟ್ಟುಕೊಂಡು ನಕಲಿ ಕಾರ್ಡ್‌ಗಳನ್ನು ತಯಾರಿಸಿ, ಅಸಲಿ ಖಾತೆದಾರರ ಹಣವನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡುತ್ತಾರೆ.

Advertisement

ಆನ್‌ಲೈನ್‌ನಲ್ಲಿ ವಂಚನೆ
ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ಪ್ರಾರಂಭಿಸಿ ಗ್ರಾಹಕರನ್ನು ವಂಚಿಸುವ ಅಂತರ್‌ ಜಾಲತಾಣ ಸಕ್ರಿಯವಾಗಿದೆ. ಇತ್ತೀಚೆಗೆ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹಿಳೆಯೊಬ್ಬರಿಗೆ ಆನ್‌ಲೈನ್‌ನಲ್ಲಿ ಪತಂಜಲಿ ಚಿಕಿತ್ಸಾಲಯದ ವ್ಯವಹಾರ ನೀಡುವುದಾಗಿ ನಂಬಿಸಿ 2.75 ಲ.ರೂ. ಪಡೆದು ವಂಚನೆ ಮಾಡಿದ್ದಾರೆ.

ಒ.ಟಿ.ಪಿ. ವಂಚನೆ ಪ್ರಕರಣ ಇಳಿಕೆ
ಜಿಲ್ಲೆಯಲ್ಲಿ ಗ್ರಾಹಕರಿಂದ ಒ.ಟಿ.ಪಿ. ಪಡೆದು ವಂಚಿಸುವ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಕುಸಿದಿದೆ. ಒ.ಟಿ.ಪಿ. ಕುರಿತು ಜನಸಾಮಾನ್ಯರಲ್ಲಿ ಈಗ ಅರಿವು ಮೂಡಿದೆ. ಒ.ಟಿ.ಪಿ. ಕೇಳಿಕೊಂಡು ಬರುವ ಕರೆಗಳ ಬಗ್ಗೆ ಉಡುಪಿ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡುತ್ತಿದ್ದಾರೆ.

ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಪಾಸ್‌ವರ್ಡ್‌ ಸಂಖ್ಯೆ ಕದಿಯುವುದು ಈಗ ಬಹಳ ಸಲೀಸಾಗಿದೆ. ಗ್ರಾಹಕರ ಕಾರ್ಡ್‌ಗಳ ಮಾಹಿತಿಗಳನ್ನು ಕದ್ದು ಲಕ್ಷಾಂತರ ರೂಪಾಯಿ ಲೂಟಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಗ್ರಾಹಕರು ಎಚ್ಚರದಿಂದ ವ್ಯವಹಾರ ನಡೆಸುವುದು ಉತ್ತಮ. ಅನುಮಾನಗಳು ಕಂಡು ಬಂದರೆ ತತ್‌ಕ್ಷಣ ಸೈಬರ್‌ ಕ್ರೈಂ ವಿಭಾಗಕ್ಕೆ ದೂರ ನೀಡುವುದರಿಂದ ಅಪರಾಧ ಪ್ರಕರಣ ಸಂಖ್ಯೆಯನ್ನು ಕಡಿಮೆ ಮಾಡಬಹುದು.

ಅಪರಾಧಿ ಪತ್ತೆ ಕಷ್ಟ
ಉಡುಪಿ ಸೈಬರ್‌ ಕ್ರೈಂ ವಿಭಾಗದಲ್ಲಿ ಕಳೆದ ವರ್ಷದಿಂದ ಸುಮಾರು 30 ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅದರಲ್ಲಿ ಕೆಲವು ಪ್ರಕರಣದಲ್ಲಿ ವರ್ಗಾವಣೆಯಾದ ಹಣ ಹಿಂಪಡೆಯಲಾಗಿದೆ. ಆದರೂ ಅಪರಾಧಿಗಳನ್ನು ಪತ್ತೆ ಹೆಚ್ಚಲು ಸಾಧ್ಯವಾಗಿಲ್ಲ.

ಹಣ ವಾಪಸ್‌
ಸೈಬರ್‌ ವಂಚನೆ ಪ್ರಕರಣಗಳಲ್ಲಿ ಬ್ಯಾಂಕಿನ ತಪ್ಪಿನಿಂದ ನಡೆದರೆ ಗ್ರಾಹಕರಿಗೆ ಹಣ ವಾಪಸ್ಸು ಬರುತ್ತದೆ. ಬ್ಯಾಂಕ್‌ಗಳ ಆನ್‌ಲೈನ್‌ ಮೊಬೈಲ್‌ ಬ್ಯಾಂಕಿಂಗ್‌ ತಂತ್ರಜ್ಞಾನ ಸರಿಯಾಗಿ ನಿರ್ವಹಣೆ ಇಲ್ಲದಿದ್ದಾಗ ಮಾತ್ರ ಗ್ರಾಹಕರಿಗೆ ಪರಿಹಾರ ಸಿಗಲಿದೆ. ಒಂದು ವೇಳೆ ಗ್ರಾಹಕರೇ ಒ.ಟಿ.ಪಿ. ನಂಬರ್‌ ಅಥವಾ ಬ್ಯಾಂಕ್‌ ಖಾತೆ ವಿವರವನ್ನು ಸೈಬರ್‌ ಕಳ್ಳರಿಗೆ ಕೊಟ್ಟರೆ ಪರಿಹಾರ ದೊರಕದು.

ಐದೇ ನಿಮಿಷದಲ್ಲಿ ಹಣ ಡ್ರಾ
ಸಾಮಾನ್ಯವಾಗಿ ನಕಲಿ ಎಟಿಎಂ ಬಳಸುವವರು ರಾತ್ರಿ 11.58ರಿಂದ 12ರ ಒಳಗೆ ಹಣವನ್ನು ಡ್ರಾ ಮಾಡುತ್ತಾರೆ. ಈ ಸಂದರ್ಭ ಗ್ರಾಹಕರು ನಿದ್ದೆಯಲ್ಲಿ ಇರುವುದರಿಂದ ತತ್‌ಕ್ಷಣ ಬ್ಯಾಂಕ್‌ ಅಥವಾ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗದ ಹಿನ್ನೆಲೆ ಈ ಅವಕಾಶವನ್ನು ಕಳ್ಳರು ಬಳಸಿಕೊಳ್ಳುತ್ತಿದ್ದಾರೆ. ಕೇವಲ 5 ನಿಮಿಷಗಳ ಅಂತರದಲ್ಲಿ ಸಾವಿರಾರು ರೂಪಾಯಿಗಳನ್ನು ಡ್ರಾ ಮಾಡುತ್ತಾರೆ.

ಹೊಸ ವಿಧಾನ
ಗ್ರಾಹಕರನ್ನು ವಿವಿಧ ಹೆಲ್ಪ್ಲೈನ್‌ ನಂಬರ್‌ ಮೂಲಕ ವಂಚಿಸುವ ಜಾಲತಾಣ ಸಕ್ರಿಯವಾಗಿದೆ. ಗ್ರಾಹಕರಿಗೆ ಸರ್ವಿಸ್‌ ನೀಡುವುದಾಗಿ ಹೇಳಿಕೊಂಡು ಬ್ಯಾಂಕ್‌ ಖಾತೆ ಮಾಹಿತಿ ಪಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಜನರು ಜಾಗೃತರಾಗುವುದು ಮುಖ್ಯ.
-ಸೀತಾರಾಮ, ಸೈಬರ್‌ ಕ್ರೈಂ ಇನ್‌ಸ್ಪೆಕ್ಟರ್‌ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next