Advertisement
ರಾಜ್ಯ ಮಾತ್ರವಲ್ಲದೇ ದೇಶದಲ್ಲಿಯೇ ಕೋವಿಡ್ 19ಗೆ ಮೊದಲ ಸಾವು ಸಂಭವಿಸಿದ್ದ ಕಲಬುರಗಿಯಲ್ಲಿಯೇ ಮತ್ತೂಂದು ಸಾವಾಗಿದೆ. ಮೃತ 65 ವರ್ಷದ ವೃದ್ಧ ಕಲಬುರಗಿ ಬಸ್ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದು, ಎ. 4ರಂದು ತೀವ್ರ ಉಸಿರಾಟ ತೊಂದರೆ (ಎಸ್‌ಎಆರ್‌ಐ) ಹಿನ್ನೆಲೆಯಲ್ಲಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸರಕಾರಿ ಕೋವಿಡ್ 19 ಆಸ್ಪತ್ರೆಗೆ ಶಿಫಾರಸು ಮಾಡಿದ ಆಸ್ಪತ್ರೆ ವೈದ್ಯರು ಎ.6ರ ಸಂಜೆ ಕಲಬುರಗಿಯ ಇಎಸ್‌ಐ ಆಸ್ಪತ್ರೆಗೆ ಕಳುಹಿಸಿದ್ದರು. ಕೋವಿಡ್ 19 ಶಂಕೆ ಹಿನ್ನೆಲೆ ವೃದ್ಧನ ಗಂಟಲಿನ ದ್ರಾವಣವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಹಿಸಲಾಗಿತ್ತು. ಆದರೆಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವೀಗಿಡಾಗಿದ್ದರು. ಬುಧವಾರ ಈ ವರದಿ ಬಂದಿದ್ದು, ಅವರಿಗೆ ಕೋವಿಡ್ 19 ಸೋಂಕು ತಗಲಿದ್ದುದು ಖಚಿತಪಟ್ಟಿದೆ. ಬುಧವಾರ ಕಲಬುರಗಿಯಲ್ಲಿ ಇಬ್ಬರಿಗೆ, ಮಂಡ್ಯ, ಬೆಂಗಳೂರು,ಉತ್ತರ ಕನ್ನಡ, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಕೋವಿಡ್ 19 ಸೋಂಕಿಗೊಳಗಾಗಿದ್ದವರ ಪೈಕಿ ಉತ್ತರ ಕನ್ನಡದಲ್ಲಿ ಇಬ್ಬರು ಮತ್ತು ಕೊಡಗಿನಲ್ಲಿ ಒಬ್ಬರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Related Articles
– ಆಸ್ಪತ್ರೆಗೆ ಬುಧವಾರ ದಾಖಲಾದ ಕೋವಿಡ್ 19 ಶಂಕಿತರು – 95, ಬಿಡುಗಡೆಯಾದವರು – 48, ಸದ್ಯ ಆಸ್ಪತ್ರೆಯಲ್ಲಿರುವ ಶಂಕಿತರು ಒಟ್ಟು- 384
– ಬುಧವಾರ ನೆಗೆಟಿವ್ ಬಂದ ವರದಿಗಳು- 424. ಪಾಸಿಟಿವ್ ಬಂದ ವರದಿಗಳು – 6 ( ಈವರೆಗೂ ಒಟ್ಟಾರೆ ನೆಗೆಟಿವ್ – 6,473, ಪಾಸಿಟಿವ್ – 181)
– ಶಂಕಿತರ ಪೈಕಿ ಬುಧವಾರ ಸೋಂಕು ಪರೀಕ್ಷೆಗೆ ಸಂಗ್ರಹಿಸಿದ ಗಂಟಲು ದ್ರಾವಣ ಮಾದರಿಗಳು – 516
– ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ 19 ಸೋಂಕಿತರು – 148
– ತುರ್ತು ಸಮಯದಲ್ಲಿ ಆಂಬುಲೆನ್ಸ್ ಲಭ್ಯವಾಗದಿದ್ದಲ್ಲಿ ಓಲಾ/ ಊಬರ್ ಸಂಪರ್ಕಕ್ಕೆ – 9154153917/18/19
Advertisement
ಮನೆ- ಮನೆಗೆ ಜನೌಷಧ: ಸದಾನಂದ ಗೌಡಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯ ಜನೌಷಧ ಕೇಂದ್ರಗಳ ಮೂಲಕ ಮನೆ ಮನೆಗೆ ಔಷಧ ಸರಬರಾಜು ಮಾಡುವ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಅಗತ್ಯ ವಿದ್ದವರು, ಹಿರಿಯ ನಾಗರಿಕರು ಈ ಸೌಲಭ್ಯ ಪಡೆಯಬಹುದು. ಇದಕ್ಕಾಗಿಯೇ “ಜನೌಷ ಧ ಸುಗಮ್’ ಆ್ಯಪ್ ರೂಪಿಸಲಾಗಿದ್ದು, ಇದರಿಂದ ಸಮೀಪದ ಜನೌಷಧ ಕೇಂದ್ರ, ಲೊಕೇಷನ್ ಮ್ಯಾಪ್, ಆ ಕೇಂದ್ರದಲ್ಲಿ ತಮಗೆ ಬೇಕಾದ ಔಷಧ ಲಭ್ಯತೆ ವಿವರ ಸಹಿತ ಮಳಿಗೆಯ ದೂರವಾಣಿ ಸಂಖ್ಯೆಯ ಮಾಹಿತಿ ಇರಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.