Advertisement
ವಿಜಯಪುರದ ಮೃತ ವೃದ್ಧರನ್ನು ಹೊರತು ಪಡಿಸಿ ರಾಜ್ಯದ ವಿವಿಧೆಡೆ ಹೊಸದಾಗಿ 11 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ. ಮಂಗಳವಾರ ಬೆಂಗಳೂರು ನಗರ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳ ತಲಾ ಮೂರು ಮಂದಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇದರಲ್ಲಿ ಬಹುತೇಕರು ಯಾವುದೇ ವಿದೇಶ ಸಂಪರ್ಕ, ದೆಹಲಿ ಪ್ರವಾಸ ಮಾಡಿಲ್ಲ, ಸೋಂಕಿತರ ಸಂಪರ್ಕದಿಂದಲೇ ಸೋಂಕು ತಗುಲಿದೆ. ಇನ್ನು ಮೃತ ಕಲಬುರಗಿ ವೃದ್ಧನನ್ನು ಹೊರತು ಪಡಿಸಿ ಬಾಕಿ 10 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಈ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರ ಪತ್ತೆ ಕಾರ್ಯ ನಡೆದಿದ್ದು, ಎಲ್ಲರ ಸೋಂಕು ಪರೀಕ್ಷೆಯನ್ನು ಆರೋಗ್ಯ ಇಲಾಖೆ ಮಾಡಲಿದೆ.
Related Articles
Advertisement
11 ಮಂದಿ ಗುಣಮುಖರಾಗಿ ಮನೆಗೆ: ಮಂಗಳವಾರ ರಾಜ್ಯದ ವಿವಿಧೆಡೆ 11 ಮಂದಿ ಕೋವಿಡ್-19 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮುಂದಿನ 14 ದಿನ ಮನೆಯಲ್ಲಿ ಕ್ವಾರಂಟೈನ್ ಇರಲು ವೈದ್ಯರು ಸೂಚಿಸಿದ್ದಾರೆ. ಇಲ್ಲಿಯವರೆಗೂ ರಾಜ್ಯದಲ್ಲಿ 71 ಮಂದಿ ಸೋಂಕಿತರು ಗುಣಮುಖರಾದಂತಾಗಿದೆ. ಇನ್ನೂ 179 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಮೃತರಾಗಿದ್ದಾರೆ.
ಮಂಗಳವಾರ ಸೋಂಕು ದೃಢಪಟ್ಟವರು ಬಾಗಲಕೋಟೆಯಲ್ಲಿ ಸೋಂಕಿನಿಂದ ಮೃತನಾಗಿರುವ ವೃದ್ಧನಿಂದ ಸೋಂಕು ತಗುಲಿಸಿಕೊಂಡಿದ್ದ ನೆರೆಮನೆಯ ವ್ಯಕ್ತಿಯ ಸಂಪರ್ಕ ಹೊಂದಿದ 43 ವರ್ಷದ ಪುರುಷ, 32 ವರ್ಷದ ಮಹಿಳೆಗೆ ಸೋಂಕು. ಬಾಗಲಕೋಟೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗಲಕೋಟೆಯಲ್ಲಿ ಸೋಂಕಿನಿಂದ ಮೃತನಾಗಿರುವ ವೃದ್ಧನಿಂದ ನೆರೆಮನೆಯ 39 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಬಾಗಲಕೋಟೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಯಾವುದೇ ವಿದೇಶ ಪ್ರಯಾಣ, ಸೋಂಕಿತರ ಸಂಪರ್ಕ ಹೊಂದಿರದ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ವೃದ್ಧನಿಗೆ ಸೋಂಕು. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ
ನೀಡಲಾಗುತ್ತಿದೆ. ಹಿಂದೂಪುರದಿಂದ ಏಪ್ರಿಲ್ 7ರಂದು ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿರುವ 26 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯಲ್ಲಿ ಇತ್ತೀಚೆಗೆ ಸೋಂಕಿನಿಂದ ಸಾವಿಗೀಡಾಗಿದ್ದ ವೃದ್ಧನ (ಸೋಂಕಿತ 177)ನೇರ ಸಂಪರ್ಕ ಹೊಂದಿದ್ದ 10 ವರ್ಷದ ಬಾಲಕಿ ಹಾಗೂ 35 ವರ್ಷದ ಮಹಿಳೆಗೆ ಸೋಂಕು. ಕಲಬುರಗಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯಲ್ಲಿ ಇತ್ತೀಚೆಗೆ ಸೋಂಕಿನಿಂದ ಸಾವಿಗೀಡಾಗಿದ್ದ ಪುರುಷನ (ಸೋಂಕಿತ -205) ನೇರ ಸಂಪರ್ಕ ಹೊಂದಿದ್ದ 51 ವರ್ಷದ ಪುರುಷನಿಗೆ ಸೋಂಕು. ಕಲಬುರಗಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರದಲ್ಲಿ ಸೋಂಕಿನಿಂದ ಮೃತರಾದ ವೃದ್ಧ. ಕೇಂದ್ರ ಸರ್ಕಾರದ ಸೂಚನೆಯಂತೆ ಅಂತ್ಯಕ್ರಿಯೆ ಮಾಡಲಾಗಿದೆ. ಬೆಳಗಾವಿಯಲ್ಲಿ ಇತ್ತೀಚೆಗೆ ದೆಹಲಿ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿರುವ 33 ವರ್ಷದ ಪುರುಷನಿಗೆ ಸೋಂಕು. ಬೆಳಗಾವಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ
ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ನಿಜಾಮುದ್ದೀನ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಸೋಂಕಿಗೊಳಗಾಗಿದ್ದ ವ್ಯಕ್ತಿಯಿಂದ 35 ವರ್ಷದ ಮಹಿಳೆಗೆ ಸೋಂಕು
ತಗುಲಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಕನ್ನಡದ ಭಟ್ಕಳದಲ್ಲಿ ಇತ್ತೀಚೆಗೆ ದುಬೈ ನಿಂದ ಮರಳಿ ಸೋಂಕಿತೆಯಾಗಿದ್ದ ಮಹಿಳೆಯ 36 ವರ್ಷದ ಗಂಡನಿಗೂ ಸೋಂಕು ತಗುಲಿದೆ. ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಸೋಂಕಿತರ ಸಂಖ್ಯೆ 69ಕ್ಕೆ ಇಳಿಮುಖ
ರಾಜ್ಯದಲ್ಲಿ ಈ ಹಿಂದೆ ಯಾರಿಗಾದರೂ ಕೊರೊನಾ ಸೋಂಕು ದೃಢಪಟ್ಟರೆ ಕೂಡಲೇ ಸಮೀಪದ ಕೊರೊನಾ ಚಿಕಿತ್ಸೆಗೆ ನಿಗದಿಪಡಿಸಿದ್ದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಂತೆಯೇ ಆ ಸೋಂಕಿತರನ್ನು ಆಸ್ಪತ್ರೆ ಇರುವ ಜಿಲ್ಲೆಯ ಸೋಂಕಿತರ ಪಟ್ಟಿಗೆ ಸೇರಿಸಲಾಗುತ್ತಿತ್ತು. ಸದ್ಯ ರಾಜ್ಯದ ಎಲ್ಲಾ ಕೊರೊನಾ ವೈರಸ್ ಸೋಂಕಿತರನ್ನು ಅವರ ವಾಸಸ್ಥಳದ ಆಧಾರದಲ್ಲಿ ವರ್ಗೀಕರಿಸಿ ಜಿಲ್ಲಾವಾರು ನೂತನ ಪಟ್ಟಿಯನ್ನು ಆರೋಗ್ಯ ಇಲಾಖೆ ನೀಡಿದೆ. ಈ ವರ್ಗಿಕರಣ
ದಿಂದ ಬೆಂಗಳೂರಿನ ಸೋಂಕಿತರ ಸಂಖ್ಯೆ 69ಕ್ಕೆ ಇಳಿಮುಖವಾಗಿದೆ. ಜತೆಗೆ ಕೆಲ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಏರಿಕೆಯಾಗಿದೆ. ವಾಟ್ಸ್‌ಆ್ಯಪ್ ಹೆಲ್ಪ್ ಡೆಸ್ಕ್
ಕೋವಿಡ್-19 ಕುರಿತ ಅಧಿಕೃತ ಮಾಹಿತಿಯನ್ನು ಜನಸಾಮಾನ್ಯರು ಪಡೆದುಕೊಳ್ಳಲು ರಾಜ್ಯ ಸರಕಾರ ವಾಟ್ಸ್‌ಆ್ಯಪ್ ಕೊರೊನಾ ಹೆಲ್ಪ್ ಡೆಸ್ಕ್ ಸೇವೆ ಆರಂಭಿಸಿದೆ. ಸಾರ್ವಜನಿಕರು 87509 71717 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ‘ಏಜಿ’ ಎಂದು ಸಂದೇಶ ಕಳುಹಿಸಿದರೆ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿಯ ಮಾಹಿತಿ ಬರುತ್ತದೆ. ಮೃತಪಟ್ಟವರ ಜಿಲ್ಲಾವಾರು ಅಂಕಿಅಂಶ
ಬೆಂಗಳೂರು – 3
ಕಲಬುರಗಿ – 3
ಬಾಗಲಕೋಟೆ – 1
ಗದಗ – 1
ವಿಜಯಪುರ – 1
ತುಮಕೂರು -1
ಒಟ್ಟು – 10