Advertisement

ಮೋಟಾರು ತಿದ್ದುಪಡಿ ಕಾಯ್ದೆಯಿಂದ ಸಾವಿನ ಸಂಖ್ಯೆ ಇಳಿಮುಖ

09:12 AM Mar 05, 2020 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ಎಂಟು ರಾಜ್ಯಗಳಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸೋಮವಾರ ರಾಜ್ಯಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ಇದನ್ನು ತಿಳಿಸಿದ್ದಾರೆ.

Advertisement

2019ರ ಸೆ.1ರಂದು ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. 2018 ಮತ್ತು 2019ರ ಸೆಪ್ಟೆಂಬರ್‌, ಅಕ್ಟೋಬರ್‌ ಅವಧಿಗಳನ್ನು ಹೋಲಿಸಿದರೆ ರಸ್ತೆ ಅಪಘಾತಗಳ ಸಂಖ್ಯೆ ಕ್ಷೀಣಿಸಿದೆ.

2018ರಲ್ಲಿ ಉತ್ತರ ಪ್ರದೇಶದಲ್ಲಿ 143 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. 2019ರಲ್ಲಿ ಈ ಸಂಖ್ಯೆ 77ಕ್ಕೆ ಇಳಿದಿದೆ. ಗುಜರಾತ್‌, ಉತ್ತರಾಖಂಡ, ಪುದುಚೇರಿ, ಚಂಡೀಗಢ ಸೇರಿದಂತೆ 8 ರಾಜ್ಯಗಳಲ್ಲಿ ಅಪಘಾತ ಸಂಖ್ಯೆ ಸರಾಸರಿ ಶೇ. 22ರಷ್ಟು ಕಡಿಮೆಯಾಗಿದೆ ಎಂದು ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next