Advertisement

ಚೀನದ ಅತಿ ಘೋರ ಕೈಗಾರಿಕಾ ಅವಘಡ: 64 ಬಲಿ; 640 ಮಂದಿಗೆ ಗಾಯ

09:14 AM Mar 25, 2019 | udayavani editorial |

ಬೀಜಿಂಗ್‌: ಈಚಿನ ವರ್ಷಗಳಲ್ಲೇ ಚೀನದಲ್ಲಿ ನಡೆದಿರುವ ಅತ್ಯಂತ ಘೋರ ಕೈಗಾರಿಕಾ ಅವಘಡಕ್ಕೆ ಬಲಿಯಾಗಿರುವವರ ಸಂಖ್ಯೆ 64ಕ್ಕೇರಿದೆ.

Advertisement

ಈ ಭಾರೀ ವಿನಾಶಕಾರಿ ಕೈಗಾರಿಕಾ ಅವಘಡವು ಬಹುತೇಕ 3.0 ಅಂಕಗಳ ತೀವ್ರತೆಗೆ ಸಮಾನವಾಗಿತ್ತು. ಸ್ಫೋಟದ ತೀವ್ರತೆಯಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿದವು; ಮಕ್ಕಳು ಬಹುದೂರಕ್ಕೆ ಗಾಳಿಯಲ್ಲಿ ಎಸೆಯಲ್ಪಟ್ಟರು; ಅವಘಡ ಸಂಭವಿಸಿದ ಇಡಿಯ ಪ್ರದೇಶ ಸಮರತ್ರಸ್ತ ಭೂಮಿಯಂತೆ ಕಂಡು ಬಂತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಅವಘಡದಲ್ಲಿ  64 ಮಂದಿ ಸತ್ತಿರುವ ನಡುವೆಯೇ ಇನ್ನೂ 24 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚೀನದ ಜಿಯಾಂಗುÕ ಪ್ರಾಂತ್ಯದಲ್ಲಿ ನಿನ್ನೆ ಗುರವಾರ ರಸಗೊಬ್ಬರ ಕಾರ್ಖಾನೆಯೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಬೃಹತ್‌ ಸ್ಫೋಟಕ್ಕೆ ಕಾರಣವಾಯಿತು ಎಂದು ಕ್ಸಿಯಾಂಗ್‌ಶುಯಿ ಕೌಂಟಿಯ ಸರಕಾರ ಹೇಳಿದೆ. 

ಅವಘಡದಲ್ಲಿ   640ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ; ಗಂಭೀರವಾಗಿ ಗಾಯಗೊಂಡಿರುವ 73 ಮಂದಿಯ ಪೈಕಿ 34 ಮಂದಿಯ ಸ್ಥಿತಿ ಅತ್ಯಂತ ಚಿಂತಾಜನಕವಿದೆ ಎಂದು ಪ್ರಾಂತೀಯ ಸರಕಾರ ಹೇಳಿದೆ. 

Advertisement

ಅವಘಡದಿಂದ ತೀವ್ರವಾಗಿ ಬಾಧಿತರಾಗಿರುವ 3,000 ಕಾರ್ಮಿಕರನ್ನು ಮತ್ತು ಸುತ್ತಮುತ್ತಲಿನ 1,000ಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. 88 ಮಂದಿಯನ್ನು ಪಾರುಗೊಳಿಸಲಾಗಿದೆ ಎಂದು ತುರ್ತುಸ್ಥಿತಿ ವ್ಯವಸ್ಥಾಪನ ಸಚಿವಾಲಯ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next