ಬೆಂಗಳೂರು: ರಾಜ್ಯ ಸರ್ಕಾರದ ಎನ್‌ಪಿಎಸ್(ನೂತನ ಪಿಂಚಣಿ ಯೋಜನೆ) ವ್ಯಾಪ್ತಿಗೊಳಪಡುವ ನೌಕರರಿಗೆ ಮರಣ, ನಿವೃತ್ತಿ ಉಪದಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರ 2018ರ ಏ. 1ರಿಂದ ಜಾರಿಗೆ ಬರುವಂತೆ ಯೋಜನೆಯ ಲಾಭವನ್ನು
ಪಡೆದುಕೊಳ್ಳಬಹುದು ಎಂದು ಹೇಳಿದೆ.
ನಿವೃತ್ತರಾಗುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯ ಮಾದರಿಯಲ್ಲೇ ಗ್ರ್ಯಾಚ್ಯುಟಿ ನೀಡಲು ಆದೇಶಿಸಲಾಗಿದ್ದು, ಅದು 20 ಲಕ್ಷ ರೂ. ಮೀರದಂತೆ ಮಿತಿ ಹೇರಲಾಗಿದೆ. ಅದೇ ರೀತಿ ಹಳೆಯ ಪಿಂಚಣಿ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರಿಗೆ ಉಪದಾನ ಯೋಜನೆ ವಿಸ್ತರಿಸುವ ರೀತಿಯಲ್ಲೇ ಸೇವೆಯಲ್ಲಿರುವಾಗಲೇ ನಿಧನರಾಗುವ ನೌಕರರ ಅವಲಂಬಿತ ಕುಟುಂಬವನ್ನೂ ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. 2018ರ ಏ. 1ರ ನಂತರ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ನೌಕರರ ಅವಲಂಬಿತ ಕುಟುಂಬಕ್ಕೆ ಪಿಂಚಣಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ, ರಾಜ್ಯ ಎನ್‌ಪಿಎಸ್ ನೌಕರರ ಸಂಘ ಸರ್ಕಾರದ ಈ ಆದೇಶವನ್ನು ಖಂಡಿಸಿದೆ.ಸರ್ಕಾರ ಎನ್‌ಪಿಎಸ್ ಪದಟಛಿತಿಯನ್ನೇ ರದ್ದುಗೊಳಿಸಿ 2006ರ ನಂತರ ನೇಮಕವಾಗಿರುವ ಸರ್ಕಾರಿ ನೌಕರರಿಗೂ ಹಳೆಯ ಪಿಂಚಣಿ
ಯೋಜನೆ ವಿಸ್ತರಿಸಬೇಕು. ಅಲ್ಲದೆ, ರಾಜ್ಯ ಸರ್ಕಾರ ಈಗ ಹೊರಡಿಸಿರುವ ಮರಣ ಮತ್ತು ನಿವೃತ್ತಿ ಗ್ರ್ಯಾಚ್ಯುಟಿಯನ್ನು 2006ರ ಏ. 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕೆಂದು ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಆಗ್ರಹಿಸಿದ್ದಾರೆ. ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.