Advertisement
ಆತ ಪಡುಗೋಪಾಡಿಯ ಲಿಂಗಜ್ಜಿ ಮನೆ ನಿವಾಸಿ, ಮೀನುಗಾರ ಆನಂದ ಅವರ ಪತ್ನಿ, ಐದು ತಿಂಗಳ ಗರ್ಭಿಣಿ ಇಂದಿರಾ (30) ಅವರ ಮೇಲೆ ಅತ್ಯಾಚಾರಗೈದು ಹತ್ಯೆ ಮಾಡಿದ್ದ, ಫೆ. 14 ರಂದು ಆತನ ಮೇಲಿದ್ದ ಆರೋಪಗಳೆಲ್ಲ ಸಾಬೀತಾಗಿತ್ತು ಕಾರವಾರದ ಜೈಲಿನಲ್ಲಿದ್ದ ಆತನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶ ಪ್ರಕಾಶ ಖಂಡೇರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಶಾಂತ್ ಮೊಗವೀರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 448 ರಡಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ 1 ವರ್ಷ ಕಠಿನ ಶಿಕ್ಷೆ, ಕಳ್ಳತನ ಉದ್ದೇಶದಿಂದ ಅಕ್ರಮ ಪ್ರವೇಶಕ್ಕೆ 351 ರಡಿ 4 ವರ್ಷ ಕಠಿನ ಸಜೆ, ಅತ್ಯಾಚಾರ ಎಸಗಿದ್ದಕ್ಕೆ 376 ರಡಿ 10 ವರ್ಷ ಕಠಿನ ಶಿಕ್ಷೆ, ಕುತ್ತಿಗೆಯಲ್ಲಿದ್ದ ಕರಿಯಮಣಿ ಕಳ್ಳತನಕ್ಕೆ 10 ವರ್ಷ ಕಠಿನ ಸಜೆ, 5 ತಿಂಗಳ ಹೆಣ್ಣು ಭ್ರೂಣ ಹೊಟ್ಟೆಯಲ್ಲಿದ್ದ ಗರ್ಭಿಣಿಯನ್ನು ಕ್ರೂರವಾಗಿ ಕೊಲೆಗೈದುದಕ್ಕಾಗಿ ಮರಣದಂಡನೆ ಶಿಕ್ಷೆಯನ್ನು ನ್ಯಾಯಾಧೀಶರು ವಿಧಿಸಿದ್ದಾರೆ. ಆಕೆ ಇಲ್ಲವೆಂಬ ಕೊರಗಿದ್ದರೂ, ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ನೀಡಿರುವುದು ನೋವಿನಲ್ಲೂ ನೆಮ್ಮದಿ ತಂದಿದೆ ಎಂದು ಇಂದಿರಾ ಪತಿ ಆನಂದ ಪ್ರತಿಕ್ರಿಯಿಸಿದ್ದಾರೆ.
Related Articles
Advertisement
ಕಣ್ಣೀರಿಟ್ಟ ಅಪರಾಧಿಶಿಕ್ಷೆ ಪ್ರಕಟಿಸುತ್ತಿದ್ದಂತೆ ಕಟಕಟೆಯಲ್ಲಿ ನಿಂತಿದ್ದ ಪ್ರಶಾಂತ್ ಮೊಗವೀರ ಭಾವುಕನಾಗಿದ್ದ. ಬಳಿಕ ಮತ್ತೆ ಕಾರಾವಾರ ಜೈಲಿಗೆ ಕರೆದೊಯ್ಯುಲು ಕೋರ್ಟ್ ಹೊರಗೆ ಕರೆತರುವಾಗ ಗಳಗಳನೇ ಅತ್ತ. ತಂದೆ ತಾಯಿ ಇಲ್ಲದ ಪ್ರಶಾಂತ್ ಮೊಗವೀರ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದನು. ಅವಿವಾಹಿತನಾಗಿದ್ದ ಈತ ಈ ಕೃತ್ಯ ಎಸಗುವ ಒಂದು ತಿಂಗಳ ಹಿಂದೆ ಮಲ್ಪೆಯಲ್ಲಿ ಮೀನುಗಾರಿಕೆಯ ಬಲೆಯ ಸೀಸ ಕದ್ದು ಮಲ್ಪೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ 13 ದಿ® ಹಿರಿಯಡ್ಕ ಜೈಲಿನಲ್ಲಿದ್ದನು. ಎರಡನೆ ಗಲ್ಲು ಶಿಕ್ಷೆ ತೀರ್ಪು
ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಎರಡನೇ ಮರಣದಂಡನೆ ತೀರ್ಪು ನೀಡಿದ ಪ್ರಕರಣವಾಗಿದ್ದು, ಈ ಹಿಂದೆ 2010 ರಲ್ಲಿ ನೂಜಾಡಿಯ ಅಕ್ಕಯ್ಯ ಪೂಜಾರಿ¤ ಕೊಲೆ ಪ್ರಕರಣದ ಆರೋಪಿ ಸತೀಶ್ ಹೆಮ್ಮಾಡಿಗೆ ಮರಣದಂಡನೆ ವಿಧಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2016 ರ ಎ. 29 ರಂದು ತೀರ್ಪು ನೀಡಿತ್ತು. ಆದರೆ 2017ರ ಅ. 12 ರಂದು ಹೈಕೋರ್ಟ್ ನ ರವಿ ಮಳೀಮs… ಹಾಗೂ ಡಿಕುನ್ಹಾ ಅವರಿದ್ದ ವಿಭಾಗೀಯ ಪೀಠ ಆ ತೀರ್ಪನ್ನು ರದ್ದುಪಡಿಸಿ, ಆರೋಪಿಯನ್ನು ನಿರ್ದೋಷಿ ಎಂದು ಘೋಷಿಸಿದೆ. ಪೆನ್ ನೆಲಕ್ಕೆಸೆದ ನ್ಯಾಯಾಧೀಶರು
ಪ್ರಕಾಶ್ ಖಂಡೇರಿ ಗಲ್ಲು ಶಿಕ್ಷೆ ಪ್ರಕಟಿಸಿದ ಬಳಿಕ ತೀರ್ಪು ಬರೆದ ಪೆನ್ನನ್ನು ನೆಲಕ್ಕೆ ರಭಸವಾಗಿ ಎಸೆದರು. ಗಲ್ಲು, ಅಥವಾ ಮರಣ ದಂಡನೆ ಶಿಕ್ಷೆ ಘೋಷಿಸಿದನ ಬಳಿಕ ಮತ್ತೆ ಇಂತಹ ಪ್ರಕರಣ ಮರುಕಳುಹಿಸದಿರಲಿ ಎನ್ನುವ ಕಾರಣಕ್ಕೆ ನ್ಯಾಯಾಧೀಶರು ಪೆನ್ನಿನ ನಿಬ್ ಮುರಿಯುವುದು ಅಥವಾ ಪೆನ್ನನ್ನು ಎಸೆಯುತ್ತಾರೆ. ಕೊಲೆ, ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆಯಂತಹ ಗಂಭೀರ ಆರೋಪ ಎಸಗಿದ ಆರೋಪಿಗೆ ಗಲ್ಲು ಶಿಕ್ಷೆ ಬಿಟ್ಟರೆ ಬೇರೆ ಯಾವ ಶಿಕ್ಷೆ ನೀಡಿದರೂ ಕಡಿಮೆಯೇ ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖೀಸಿ ಈ ತೀರ್ಪು ನೀಡಿದ್ದಾರೆ.