ದೇವನಹಳ್ಳಿ: ಪಟ್ಟಣದ ಸರ್ಕಾರಿ ಸಾರ್ವಜನಿಕಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿವೋರ್ವ ವಿದ್ಯುತ್‌ವ್ಯತ್ಯಯದಿಂದಾಗಿ ಆಕ್ಸಿಜನ್ ಲಭಿಸದೆ ಸಾವಿಗೀಡಾಗಿರುವ ಘಟನೆ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿನಿರ್ಲಕ್ಷ ದಿಂದ ಸೋಂಕಿತ ವ್ಯಕ್ತಿ ಮೃತರಾಗಿದ್ದಾರೆಎಂಬ ಆರೋಪಕುಟುಂಬಸ್ಥರಿಂದ ಕೇಳಿಬಂದಿದೆ.
ಮಾಲೂರುಮೂಲದ ಸುರೇಶ್(33) ಮೃತವ್ಯಕ್ತಿ.ಆಸ್ಪತ್ರೆಯಲ್ಲಿ5 ನಿಮಿಷ ವಿದ್ಯುತ್ ಟ್ರಿಪ್ಪಿಂಗ್ ಸಂದರ್ಭದಲ್ಲಿ ಸುರೇಶ್ ಮೃತಪಟ್ಟಿದ್ದಾನೆ. ಬೆಳಗ್ಗೆ 10.30ರಸುಮಾರಿಗೆ ವಿದ್ಯುತ್ 5 ನಿಮಿಷದ ವ್ಯತ್ಯಯವಾಗಿದೆ.ಈ ಸಮಯದಲ್ಲಿಘಟನೆ ನಡೆದಿದೆ.ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಬೇಟಿ ನೀಡಿಮಾತನಾಡಿ, ಸುರೇಶ್ ದಾಖಲಾದಾಗಉಸಿರಾಟದಲ್ಲಿಆಮ್ಲಜನಕ ಪ್ರಮಾಣ 56 ಇತ್ತು, ವೆಂಟಿಲೇಟರ್ ಅಳವಡಿಸಿದಾಗ 90ಕ್ಕೆ ಬಂದಿದೆ. ಮೇ21 ರಂದು69ಕ್ಕೆ ಬಂದಿತ್ತು. 22 ರಂದು 76 ಕೆ ಬಂದಿತ್ತು. 2 ಬಾರಿರೆಮ್‌ಡೆಸಿವಿಯರ್ ಚುಚ್ಚುಮದ್ದು ನೀಡಲಾಗಿದೆ.
ಭಾನುವಾರ ಬೆಳಗ್ಗೆ 10.50 ರಲ್ಲಿ ಅವರಿಗೆಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ತಕ್ಷಣ ವೈದ್ಯರು ಹೋದಾಗ, ಕರೆಂಟು ಹೋಗಿದೆ. ನಮ್ಮಲ್ಲಿಆತ್ಯಾಧುನಿಕ ವೆಂಟಿಲೇಟರ್ ಗಳಿವೆ. ಕರೆಂಟ್ ಇಲ್ಲದೆಇದ್ದರೂ ಅರ್ಧ ಗಂಟೆ ಆಮ್ಲಜನಕ ಸರಬರಾಜಾಗುತ್ತದೆ. ಮೃತ ಸೋಂಕಿತ ವ್ಯಕ್ತಿಯ ಆರೋಗ್ಯದ ಸ್ಥಿತಿ ಎರಡು ದಿನಗಳಿಂದ ಗಂಭೀರವಾಗಿತ್ತು. ವ್ಯಕ್ತಿಯ ಸ್ಯಾಚುರೇಶನ್ ಕಡಿಮೆ ಇದ್ದ ಕಾರಣ ವೈದ್ಯರು ಬೇರೆ ಆಸ್ಪತ್ರೆಗೆ ಕೊಂಡೈಯಲು ಸೂಚಿಸಿದ್ದಾರೆ.
ಆದರೂ ಸಹ ಕುಟುಂಬಸ್ಥರು ಇಲ್ಲಿಯೇ ಚಿಕಿತ್ಸೆನೀಡಲು ಒತ್ತಾಯಿಸಿದ್ದರು. ಸ್ಯಾಚುರೇಶನ್ ಕಡಿಮೆಯಿರುವ ಕಾರಣ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.ಇದೇ ವೇಳೆ ಆಕ್ಸಿಜನ್ ಒದಗಿಸುತ್ತಿದ್ದಾಗ 5 ನಿಮಿಷದಅಂತರದಲ್ಲಿ ವಿದ್ಯುತ್ ಕಡಿತವಾಗಿದೆ. ಕುಟುಂಬಸ್ಥರುಇದನ್ನೇ ಮುಖ್ಯ ಕಾರಣವೆನ್ನುತ್ತಿದ್ದಾರೆ. ವೈದ್ಯರುಹೋಗಿ ರೋಗಿಯನ್ನು ನೋಡಿದಾಗ ವೆಂಟಿಲೇಟರ್‌ರನ್ನಿಂಗ್‌ನಲ್ಲಿಯೇ ಇತ್ತು, ಆಕ್ಸಿಜನ್ ವಿದ್ಯುತ್‌ಇಲ್ಲದಿದ್ದರೂ ಬ್ಯಾಕಪ್ ಇರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ಇಲ್ಲಿನ ವಾÓವಾಂÍ ¤ ವನ್ನು ಪರಿಶೀಲಿಸಿದ್ದೇನೆ.ಸೋಂಕಿತರ ಸಂಬಂಧಿಕರನ್ನು ವಿಚಾರಿಸಿದಾದರೋಗಿಗೆ ಮೆಡಿಕಲ್‌ನಿಂದ ಔಷಧಿ ತರಲು ಹೋಗಿÃುತ್ತೆ àವೆ ಎಂದು ಹೇಳಿದ್ದಾರೆ. ಟಿಎಚ್‌ಒ ಸಂಜಯ್ ಅವರನ್ನು ಕರೆದು ಸೋಂಕಿತರಿಗೆ ಬೇಕಾಗುವ ಔಷಧಿಗಳನ್ನು ಹೊರಗಡೆಯಿಂದ ತರೆಸದೇ ನಮ್ಮಲ್ಲಿಯೇ ಸಿಗುವಂತೆ ಮಾಡಬೇಕು. ಯಾವುದೇಕಾರಣಕ್ಕೂ ಚೀಟಿ ಬರೆದು ಕಳುಹಿÓಬೆ àಡಿ ಎಂದುತಾಕೀತು ಮಾಡಿದರು.ಅಪರ ಜಿಲ್ಲಾಧಿಕಾರಿ ಡಾ.ಜಗದೀ ಶ್.ಕೆ.ನಾಯಕ್,ಎಸಿಪಿ ಶ್ರೀನಿವಾಸ್, ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ಟಿಎಚ್‌ಒ ಡಾ.ಸಂಜಯ್, ಚಿಕ್ಕಜಾಲಇನ್ಸ್‌ಪೆಕ್ಟರ್ ರಾಘವೇಂದ್ರ , ದೇವನಹಳ್ಳಿ ಪಿಎಸ್‌ಐನಾಗರಾಜ್ ಇತರರಿದ್ದರು.