ಚೇರ್ತಲದ ಕೆವಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತದೇಹವನ್ನು ಹುಟ್ಟೂರು ಆಜ್ರಿಗೆ ತಂದು ಎ. 16ರಂದು ಅಂತ್ಯಸಂಸ್ಕಾರ ಮಾಡಲಾಗಿದೆ. ಕೇರಳದಲ್ಲಿ ಕೋವಿಡ್ -19 ಬಾಧೆ ತೀವ್ರವಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮನೆ ಮಂದಿಯನ್ನು ಮನೆಯಲ್ಲೇ ನಿಗಾದಲ್ಲಿ ಇರುವಂತೆ ಸೂಚಿಸಲಾಗಿದೆ. ಸಂಜೀವ ಅವರ ಪುತ್ರ ಕೇರಳದಲ್ಲಿ ಉದ್ಯೋಗದಲ್ಲಿರುವ ಕಾರಣ ಚಿಕಿತ್ಸೆಗೆಂದು ಫೆಬ್ರವರಿಯಲ್ಲಿ ಕೇರಳಕ್ಕೆ ತೆರಳಿದ್ದರು.
Advertisement
ಡಿಸಿ ಅನುಮತಿಕೇರಳದಿಂದ ಇಲ್ಲಿಗೆ ಮೃತದೇಹ ತರುವ ಮುನ್ನ ಸಂಬಂಧಿಕರು ಅಲಪ್ಪುಳ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಅವರು ಅಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಆಯುಕ್ತರು ಪರಿಶೀಲಿಸಿ ಒಪ್ಪಿಗೆ ಕೊಟ್ಟ ಅನಂತರವೇ ಅನುಮತಿ ಪತ್ರ ನೀಡಿದ್ದರು. ಅಲ್ಲಿ ಕೊರೊನಾ ಸೋಂಕು ಬಗ್ಗೆ ತಪಾಸಣೆ ನಡೆಸಿ ಇಲ್ಲಿಗೆ ತರಲಾಗಿದೆ. ಇಲ್ಲಿಯೂ ಚೆಕ್‌ಪೋಸ್ಟ್‌ನಲ್ಲಿ ಎಲ್ಲ ರೀತಿಯ ತಪಾಸಣೆ ನಡೆಸಿಯೇ ಜಿಲ್ಲೆಯೊಳಗೆ ಬಿಡಲಾಗಿದೆ.
ಇವರು ಕೋವಿಡ್ -19 ಕಾಯಿಲೆಯಿಂದ ಮೃತ ಪಟ್ಟಿಲ್ಲ ಎನ್ನುವುದನ್ನು ವೈದ್ಯಕೀಯ ಮೂಲಗಳು ದೃಢಪಡಿಸಿದ್ದು, ಅದಾಗಿಯೂ ಕೂಡ ಕೇರಳದಿಂದ ಇಲ್ಲಿಗೆ ಮೃತದೇಹವನ್ನು ತಂದು ಅಂತ್ಯಸಂಸ್ಕಾರ ಮಾಡಿರುವ ಕುರಿತಂತೆ ಜನರಿಗೆ ಸರಿಯಾದ ಮಾಹಿತಿಯಿಲ್ಲದ ಕಾರಣ ಊರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿತ್ತು. ಮನೆಯ ಎಲ್ಲರೂ ಕ್ವಾರಂಟೈನ್ ಎಲ್ಲ ಪ್ರಕ್ರಿಯೆಗಳೂ ವೈದ್ಯಾಧಿಕಾರಿಗಳು, ಪೊಲೀಸರ ನಿಗಾದಲ್ಲಿಯೇ ನಡೆದಿದೆ. ಜನರಲ್ಲಿ ಈ ಬಗ್ಗೆ ಯಾವುದೇ ಗೊಂದಲ ಬೇಡ. ಮುನ್ನೆಚ್ಚರಿಕೆ ಕ್ರಮವಾಗಿ ಆ ಮನೆಯ ಎಲ್ಲರನ್ನೂ ಹೋಮ್ ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದು ಶಂಕರನಾರಾಯಣ ಠಾಣೆಯ ಎಸ್‌ಐ ಶ್ರೀಧರ ನಾಯ್ಕ “ಉದಯವಾಣಿ’ಗೆ ತಿಳಿಸಿದ್ದಾರೆ.