Advertisement

ರೈಲ್ವೆ ನೌಕರರ ತುಟ್ಟಿ ಭತ್ಯೆ ಶೇ.14ರಷ್ಟು ಹೆಚ್ಚಳ

11:18 PM May 19, 2022 | Team Udayavani |

ನವದೆಹಲಿ: ರೈಲ್ವೆ ಇಲಾಖೆ ನೌಕರರಿಗೆ ನೀಡಲಾ­ಗುವ ತುಟ್ಟಿ ಭತ್ಯೆಯನ್ನು (ಡಿ.ಎ.) ಶೇ. 14ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

Advertisement

ಈ ಹೆಚ್ಚಳವನ್ನು ಎರಡು ಅವಧಿಗೆ ಅನುಗುಣ­ವಾಗಿ ಸಮನಾಗಿ ಹಂಚಿಕೆ ಮಾಡಲಾಗಿದೆ. 2021ರ ಜು. 1ರಿಂದ ಅನ್ವಯ­ವಾಗುವಂತೆ ಶೇ. 7ರಷ್ಟು ಹಾಗೂ 2022ರ ಜ. 1ರಿಂದ ಅನ್ವಯ­ವಾಗುವಂತೆ ಶೇ. 7ರಷ್ಟು (ಒಟ್ಟು ಶೇ. 14) ಹೆಚ್ಚಳ ಮಾಡಲಾಗಿದೆ.

ಪ್ರಸ್ತುತ, ಪ್ರತಿ ರೈಲ್ವೆ ನೌಕರ ಶೇ. 189ರಷ್ಟು ತುಟ್ಟಿ  ಭತ್ಯೆಯನ್ನು ಪಡೆಯುತ್ತಿದ್ದಾನೆ. 2021ರ ಜು. 1ರಿಂದ ಅನ್ವಯವಾಗುವ ಶೇ. 7ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಅನ್ವಯವಾದರೆ ಆತನ ಒಟ್ಟಾರೆ ತುಟ್ಟಿ ಭತ್ಯೆ ಶೇ. 196ಕ್ಕೇರುತ್ತದೆ. 2022ರ ಜ. 1ರಿಂದ ಪುನಃ ಶೇ. 7ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾದರೆ ಆತನ ವೇತನದ ಒಟ್ಟಾರೆ ತುಟ್ಟಿ ಭತ್ಯೆ ಶೇ. 203ರಕ್ಕೇರುತ್ತದೆ. ಹಾಗಾಗಿ, ಕಳೆದ ಹತ್ತು ತಿಂಗಳಲ್ಲಿ ಹೆಚ್ಚಳವಾದ ತುಟ್ಟಿ ಭತ್ಯೆಯು ಜೂನ್‌ನಲ್ಲಿ ನೌಕರರು ಪಡೆಯುವ ವೇತನದಲ್ಲಿ ಸೇರಿಕೊಂಡು ಒಟ್ಟಿಗೆ ಕೈ ಸೇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next