– ಇದು ಹೊಸಬರ ಚಿತ್ರವೊಂದರ ಹೆಸರು. ಹೀಗೆಂದರೆ ಏನು ಅಂತ ಅಲ್ಲಿದ್ದ ಪತ್ರಕರ್ತರು ಪ್ರಶ್ನಿಸಿದರೆ, ನಾಯಕ ಕಮ್ ನಿರ್ದೇಶಕ ಎ.ಆರ್.ರಮೇಶ್, “ಇ 1′ ಅಂದರೆ ಇವನು, ಇವನ್ ಎಂದರ್ಥ ಸಾರ್’ ಅಂದರು. ಅಲ್ಲಿಗೆ ಸುಮ್ಮನಾಗದ ಪತ್ರಕರ್ತರು, “ಇ 1′ ಅನ್ನೋ ಪದ ಡಿಂಕ್ಷನರಿಯಲ್ಲೇನಾದರೂ ಇದೆಯಾ ಅಂತ ಪುನಃ ಪ್ರಶ್ನಿಸಿದರೆ, “ಇಲ್ಲಾ ಸಾರ್, ಆದರೆ, “ಇ 1′ ಅಂದರೆ “ಇವನ್’ ಅಷ್ಟೇ ಸಾರ್ ಅಂತ ಮಾತಿಗಿಳಿದರು. “ಇದು ನನ್ನ ಮೊದಲ ಚಿತ್ರ. ಈ ಹಿಂದೆ “ಪಿಶಾಚಿ’ ಹಾಗೂ “ಹುಚ್ಚರಲ್ಲಿ ಹುಚ್ಚ’ ಎಂಬ ಸಿನಿಮಾ ಶುರು ಮಾಡಿದ್ದೆ. ಆದರೆ, ಕಾರಣಾಂತರದಿಂದ ಅವು ಅರ್ಧಕ್ಕೆ ನಿಂತಿವೆ. ಈಗ “ಇ 1′ ಶುರುವಾಗಿ, ಈ ವಾರ ರಿಲೀಸ್ ಆಗುತ್ತಿದೆ. ಇಲ್ಲಿ ಪ್ರೀತಿ, ಮೋಸ ಕುರಿತಾಗಿ ಹೇಳಲಾಗಿದೆ.
Advertisement
ನಾಯಕ ಇಲ್ಲಿ ಪ್ರೀತಿಗೆ ಮೋಸ ಹೋಗಿರುತ್ತಾನೆ. ಹುಡುಗಿಯರಿಗೆ ಪ್ರೀತಿ ಹುಟ್ಟುಕೊಂಡಾಗ, ಹುಡುಗನ ಜೇಬು ಖಾಲಿಯಾಗುವ ತನಕ ಮಾತ್ರ ಆ ಪ್ರೀತಿ ಇಟ್ಟುಕೊಂಡಿರುತ್ತಾರೆ, ಆಮೇಲೆ ಇರೋದಿಲ್ಲ. ಅದನ್ನೇ ಇಲ್ಲಿ ಹೇಳಲು ಹೊರಟಿದ್ದೇನೆ. ಕಥೆ 1947ರ ಕಾಲಕ್ಕೂ ಹೋಗುತ್ತದೆ. ಯಾಕೆ ಅನ್ನೋದು ಸಸ್ಪೆನ್ಸ್. ಇಲ್ಲಿ ಹೆಚ್ಚು ರಕ್ತ ಕಾಣಿಸಿಕೊಂಡಿರುವುದರಿಂದ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಅಂದಹಾಗೆ, ಎಲ್ಲರೂ ಟ್ರೇಲರ್ ನೋಡಿ, ಉಪೇಂದ್ರ ಸ್ಪೂರ್ತಿನಾ ಅಂತಾರೆ. ಇಲ್ಲಿ ಯಾರೂ ಸ್ಫೂರ್ತಿ ಅಲ್ಲ, ವಾಸ್ತವತೆಯೇ ಕಥೆಗೆ ಸ್ಫೂರ್ತಿ ಅಂದರು ರಮೇಶ್. ನಾಯಕಿ ಸಂಹಿತಾ ಶಾ ಅವರಿಗೆ ಇಲ್ಲಿ ಒಳ್ಳೇ ಪಾತ್ರ ಸಿಕ್ಕಿದೆಯಂತೆ. ಅವರಿಲ್ಲಿ ಪ್ರೀತಿಗೆ ಅರ್ಥ ಕೊಡುವ ಪ್ರಯತ್ನ ಮಾಡುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. “ಶೀರ್ಷಿಕೆ ವಿಭಿನ್ನವಾಗಿರುವಂತೆ, ಕಥೆಯೂ ಹೊಸದಾಗಿದೆ. ಇದೊಂದು ಹೊಸ ಪ್ರಯತ್ನವಾಗಿದ್ದು, ಕಮರ್ಷಿಯಲ್ ಅಂಶಗಳೊಂದಿಗೆ ಸಿನಿಮಾ ತಯಾರಾಗಿದೆ. ಈ ಹಿಂದೆ “ಮತ್ತೆ ಇಷ್R’,” ಪಟ್ಟಾಭಿಷೇಕ’, “ದಿಬ್ಬಣ’ ಚಿತ್ರಗಳಲ್ಲಿ ನಟಿಸಿದ್ದು, “ಇ 1′ ಅವುಗಳಿಗಿಂತ ಕೊಂಚ ವಿಭಿನ್ನವಾಗಿದೆ’ ಅಂದರು ಸಂಹಿತಾ ಶಾ. ಮರಿಸ್ವಾಮಿ ಚಿತ್ರವನ್ನು ನಿರ್ಮಿಸಿದ್ದಾರೆ. “ಕಥೆ ಚೆನ್ನಾಗಿದೆ. ಒಳ್ಳೇ ತಂಡ ಸೇರಿಕೊಂಡು ಈಗಿನ ಯೂತ್ಸ್ಗೆ ತಕ್ಕಂತಹ ಸಿನಿಮಾ ಮಾಡಿದೆ. ಹೊಸಬರನ್ನು ಹಾರೈಸಿ’ ಅಂದರು ಮರಿಸ್ವಾಮಿ. ಮೋಹನ್ ಶೆಟ್ಟಿ, ಹಂಚಿಕೆದಾರ ರಂಗನಾಥ್, ಗೋವಿಂದು, ಕುಟ್ಟಿಯನ್ ಬಸವರಾಜ್, ಗುಣವತಿ ಇದ್ದರು.