Advertisement

Retire; ಭಾರತ ಟೆಸ್ಟ್ ಸರಣಿಯೊಂದಿಗೆ ವೃತ್ತಿ ಜೀವನಕ್ಕೆ ತೆರೆ ಎಳೆಯಲಿದ್ದಾರೆ ಡೀನ್ ಎಲ್ಗರ್

02:04 PM Dec 22, 2023 | Team Udayavani |

ಜೋಹಾನ್ಸ್ ಬರ್ಗ್: ಭಾರತ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ಬಳಿಕ ದಕ್ಷಿಣ ಆಫ್ರಿಕಾದ ಹಿರಿಯ ಬ್ಯಾಟರ್ ಡೀನ್ ಎಲ್ಗರ್ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿಯಾಗಲಿದ್ದಾರೆ.

Advertisement

36ರ ಹರೆಯದ ಎಲ್ಗರ್ ಅವರ ನಿರ್ಧಾರವನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಗುರುವಾರ (ಡಿಸೆಂಬರ್ 22) ತಿಳಿಸಿದೆ.

ಎಲ್ಗರ್ 80 ಕ್ಕೂ ಹೆಚ್ಚು ಟೆಸ್ಟ್‌ಗಳನ್ನು ಆಡಿ 5000 ಕ್ಕೂ ಹೆಚ್ಚು ರನ್ ಗಳಿಸಿದ 12 ವರ್ಷಗಳ ವೃತ್ತಿಜೀವನಕ್ಕೆ ಕೇಪ್ ಟೌನ್ ಪಂದ್ಯದೊಂದಿಗೆ ತೆರೆ ಎಳೆಯಲಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅವರು 17 ಬಾರಿ ತಂಡವನ್ನು ಮುನ್ನಡೆಸಿದ್ದಾರೆ.

“ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳುತ್ತವೆ’ ಎಂದು ಹೇಳುವಂತೆ ಭಾರತದ ವಿರುದ್ಧದ ತವರು ಸರಣಿಯು ನನ್ನ ಕೊನೆಯದಾಗಿರುತ್ತದೆ. ನಾನು ನಮ್ಮ ಸುಂದರ ಆಟದಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ಮಾಡಿದ್ದೇನೆ. ಕೇಪ್ ಟೌನ್ ಟೆಸ್ಟ್ ನನ್ನ ಕೊನೆಯದು. ವಿಶ್ವದ ನನ್ನ ನೆಚ್ಚಿನ ಕ್ರೀಡಾಂಗಣವದು. ನ್ಯೂಜಿಲೆಂಡ್ ವಿರುದ್ಧ ನನ್ನ ಮೊದಲ ಟೆಸ್ಟ್ ರನ್ ಗಳಿಸಿದ ಸ್ಥಳ ಮತ್ತು ನನ್ನ ಕೊನೆಯ ಪಂದ್ಯವೂ ಇಲ್ಲೆ” ಎಂದು ಎಲ್ಗರ್ ಹೇಳಿದ್ದಾರೆ.

ಇದನ್ನೂ ಓದಿ:Video: ಕಲಾವಿದನ ಕೈಚಳಕ.. ಉಪ್ಪಿನಕಾಯಿ ಬಳಸಿ ನಟಿ ಕಂಗನಾ ರಣಾವತ್ ಭಾವಚಿತ್ರ ಬಿಡಿಸಿದ ಕಲಾವಿದ

Advertisement

“ಕ್ರಿಕೆಟ್ ಆಟವನ್ನು ಆಡುವುದು ಯಾವಾಗಲೂ ನನ್ನ ಕನಸಾಗಿತ್ತು ಆದರೆ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಹೊಂದಿರುವುದು ಅತ್ಯದ್ಭುತ. 12 ವರ್ಷಗಳ ಕಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಮಾಡುವ ಸವಲತ್ತು ಪಡೆದಿರುವುದು ನನ್ನ ಹುಚ್ಚು ಕನಸುಗಳನ್ನು ಮೀರಿದೆ. ಇದು ನಂಬಲಾಗದ ಪ್ರಯಾಣವಾಗಿದೆ” ಎಂದು ಎಲ್ಗರ್ ಹೇಳಿದ್ದಾರೆ.

2012ರಲ್ಲಿ ಹರಿಣಗಳ ತಂಡಕ್ಕೆ ಪದಾರ್ಪಣೆ ಮಾಡಿದ ಎಲ್ಗರ್ 84 ಟೆಸ್ಟ್ ಪಂದ್ಯಗಳಿಂದ 5146 ರನ್ ಗಳಿಸಿದ್ದಾರೆ. 13 ಶತಕ ಮತ್ತು 23 ಅರ್ಧ ಶತಕಗಳನ್ನು ಡೀನ್ ಎಲ್ಗರ್ ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next