ದೇವನಹಳ್ಳಿ: ಬಿಸಿಲಿನ ತಾಪಕ್ಕೆ ತತ್ತರಿಸಿರುವ ಜಿಲ್ಲೆಯ ಸಾರ್ವಜನಿಕರು ನೀರಿನ ದಾಹ ನೀಗಿಸಿಕೊಳ್ಳಲು ತಣ್ಣನೆಯ ನೀರಿಗಾಗಿ ಬಡವರ ಫ್ರಿಡ್ಜ್ ಎಂದು ಕರೆಯಲ್ಪಡುವ ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ.
ಶ್ರೀಮಂತರು ಬೇಸಿಗೆ ಬೇಗೆಗೆ ತಣ್ಣನೆಯ ನೀರಿಗೆ ಫ್ರಿಜ್ ಬಳಸುತ್ತಾರೆ. ಆದರೆ, ಬಡವರು ದುಬಾರಿ ಫ್ರಿಜ್ ಕೊಂಡುಕೊಳ್ಳಲು ಸಾಧ್ಯವಾಗದ ಕಾರಣ ಮಡಕೆಯನ್ನು ಬಳಸುತ್ತಾರೆ. ವಿದ್ಯುತ್ ಕಡಿತವಾದರೆ ಫ್ರಿಡ್ಜ್ ನಲ್ಲಿಟ್ಟ ನೀರು ತಣ್ಣಗೆ ಇರುವುದಿಲ್ಲ. ಆದರೆ, ಮಡಕೆ ಸದಾ ತಣ್ಣೀರನ್ನು ನೀಡುತ್ತದೆ ಎಂಬುದು ಜನರ ವಾದ.
ಬೇಸಿಗೆಯಲ್ಲಿ ಮಾತ್ರ ವ್ಯಾಪಾರ: ಪ್ಲಾಸ್ಟಿಕ್ ಬಂದ ನಂತರ ಮಡಿಕೆ ತಯಾರುಸುವವರು, ಮಾರುವವರ ಸಂಖ್ಯೆ ವಿರಳವಾಗಿದೆ. ನಾವು ಕಲಿತ ಕಸಬನ್ನು ಬಿಡಬಾರದು ಎಂದು ಈಗಲೂ ಮಡಕೆ ಮಾಡುತ್ತೇವೆ. ಬೇಸಿಗೆ ಯಲ್ಲಿ ಮಾತ್ರ ವ್ಯಾಪಾರವಿರುತ್ತದೆ. ಉಳಿದ ಕಾಲದಲ್ಲಿ ಜನರು ನಮ್ಮತ್ತ ತಿರುಗಿಯೂ ನೋಡುವುದಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.
ಮಡಕೆಯಲ್ಲಿ ನೀರು ಸಂಗ್ರಹ: ಆಧುನಿಕತೆಗೆ ತಕ್ಕಂತೆ ಮಡಕೆಗೆ ಹೊಸ ಲುಕ್ ನೀಡಿ, ಫಿಲ್ಟರ್ ನಲ್ಲಿ ಅಳವಡಿಸಲಾಗಿದೆ. ಇದರಿಂದ ನೀರನ್ನು ಸಂಗ್ರಹಿಸಿ ಮಣ್ಣಿನ ಮುಚ್ಚಳ ಅಥವಾ ತೇವಾಂಶ ದ ಬಟ್ಟೆಯಿಂದ ಮುಚ್ಚಿ ನಲ್ಲಿಯಿಂದ ತಂಪಾ ದ ನೀರನ್ನು ಹಿಡಿದು ಬಾಯಾರಿಕೆ ನೀಗಿಸಿಕೊ ಳ್ಳಬಹುದು. ಮಡಕೆ ತಯಾರಿಸಲು ಕೆಂಪು ಮತ್ತು ಕಪ್ಪು ಮಣ್ಣನ್ನು ಬಳಸಲಾಗುತ್ತದೆ. ಮಣ್ಣಿನಲ್ಲಿರುವ ಖನಿಜಾಂಶಗಳು ನೀರಿನ ಮೂಲಕ ದೇಹ ಸೇರುವುದರಿಂದ ಆರೋಗ್ಯ ಕ್ಕೆ ಸಹಕಾರಿಯಾಗಿದೆ. ಜನರು ದೇಹವನ್ನು ತಂಪಾಗಿಸಲು ಫ್ರಿಡ್ಜ್ನಲ್ಲಿರುವ ತಂಪು ನೀರು ಹಾಗೂ ಪಾನಿಯಗಳ ಮೊರೆ ಹೋದರೆ, ಬಡವರ ಮನೆಗಳಲ್ಲಿ ಮಣ್ಣಿನ ಮಡಕೆಗಳಲ್ಲಿ ನೀರು, ಅಂಬಲಿ, ಮಜ್ಜಿಗೆ ಯಂತಹ ಪಾನೀಯಗಳನ್ನಿಟ್ಟು ಸೇವಿಸುತ್ತಾರೆ. ವರ್ಷ ವಿಡೀ ಉದ್ಯೋಗವಿಲ್ಲದೇ ಖಾಲಿ ಇರುವ ಕುಂಬಾರನಿಗೆ ಈಗ ಬಾರಿ ಬೇಡಿಕೆ ಹೆಚ್ಚಾಗಿದೆ. ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿರು ವುದರಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯಾಪಾರಸ್ಥರು ಇದನ್ನು ಕಡಿಮೆ ಬೆಲೆೆಯಲ್ಲಿ ಖರೀದಿಸಿ ನಗರ ಪ್ರದೇಶಗಳಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.
ಮಡಕೆ ಬೆಲೆ 250ರಿಂದ 300 ರೂ.: ಈ ಹಿಂದೆ 100ರೂ.ಗೆ ಸಿಗುತ್ತಿದ್ದ ಮಡಕೆಗಳು ಈಗ 150 ರಿಂದ 200 ರೂ. ವರೆಗೆ ಮಾರಾಟವಾಗುತ್ತಿವೆ. ಈಗ ನಲ್ಲಿ ಇರುವ ಮಡಕೆಗಳು 250 ರಿಂದ 300 ರೂ. ವರೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಜನರು ಬೆಲೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಖರೀದಿಯಲ್ಲಿ ಉತ್ಸಾಹ ತೋರುತ್ತಿರುವುದು ಮಡಕೆಯ ಅಗತ್ಯತೆ ಹಾಗೂ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ದಿನೇ ದಿನೆ ಬಿಸಿಲಿನ ತಾಪ ಮಾನ 36 ಡಿಗ್ರಿಯಿಂದ 37 ಡಿಗ್ರಿ ದಾಖ ಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಬಿಸಿಲು ಪ್ರಾರಂಭವಾಗುತ್ತಿದ್ದು, ಮಧ್ಯಹ್ನ 12 ಗಂಟೆಗೆ ನೆತ್ತಿ ಸುಡುವಷ್ಟು ಬಿಸಿಲು ಹೆಚ್ಚಾಗುತ್ತಿದೆ.
ಹಿರಿಯರ ಕಾಲದ ವೃತ್ತಿ: ಜನರು ಪ್ರತಿ ವರ್ಷ ಬೇಸಿಗೆಯಲ್ಲಿ ಹೊಸ ಮಡಕೆ ಖರೀದಿ ಸುತ್ತಾರೆ. ಈ ಹಿಂದೆ ತಿಂಗಳಿಗೆ 4 ರಿಂದ 5 ಮಡಿಕೆಗಳು ಮಾರಾಟವಾಗುತ್ತಿದ್ದವು. ಈಗ ಹೆಚ್ಚಿನ ಆಸಕ್ತಿಯಿಂದ ಖರೀದಿಸುತ್ತಾರೆ. ನಲ್ಲಿ ಇರುವ ಮಡಕೆ 200ರಿಂದ 250ರೂ.ಗೆ ಮಾರಲಾಗುತ್ತದೆ. ನಮ್ಮ ಹಿರಿ ಯರ ಕಾಲದಿಂದಲೂ ಮಡಕೆ ವ್ಯಾಪಾರ ಮಾಡಿಕೊಂಡು ಬಂದಿದ್ದು, ನಾವೂ ಸಹ ಮುಂದುವರೆಸಿ ಕೊಂಡು ಹೋಗುತ್ತಿ ದ್ದೇವೆ ಎಂದು ನಗರದ ಮಡಕೆ ವ್ಯಾಪಾರಸ್ಥೆ ರತ್ನಮ್ಮ ಹೇಳಿದರು.
ಯಾವುದೇ ಖರ್ಚಿಲ್ಲದೇ ತಂಪು ನೀರು ನೀಡುವ ಮಡಕೆಗಳು ತಲತಲಾಂತರಗಳಿಂದ ಇವೆ. ಬಡವರ ಫ್ರಿಜ್ ಎಂದೇ ಖ್ಯಾತಿ ಪಡೆದಿದೆ. ಮಣ್ಣಿನಿಂದ ತಯಾರಿಸಿದ ಮಡಕೆ ನೀರನ್ನು ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯ ತಜ್ಞರು ಇದನ್ನು ಅನುಮೋದಿಸಿದ್ದಾರೆ. ಹಾಗಾಗಿ, ಪ್ರತಿ ವರ್ಷ ಮಡಕೆ ಖರೀದಿಸುತ್ತೇವೆ ಎಂದು ಗ್ರಾಹಕ ಆನಂದ್ ತಿಳಿಸಿದರು.