Advertisement

ಗೂಡಂಗಡಿ ತೆರವಿಗೆ ಗಡುವು

10:20 AM Nov 13, 2017 | |

ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಲೋಕೋಪಯೋಗಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್‌ ಸಿಬ್ಬಂದಿ ಜೆಸಿಬಿ ಇನ್ನಿತರ ವಾಹನಗಳೊಂದಿಗೆ ರವಿವಾರ ಬೆಳಗ್ಗೆ ಮುಂದಾದಾಗ ವ್ಯಾಪಾರಿಗಳು, ವಕೀಲರು ಸೇರಿಕೊಂಡು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

Advertisement

ನೂರಾರು ಪೊಲೀಸರ ಜತೆಗೂಡಿಸಿ ಜೆಸಿಬಿ, ಟಿಪ್ಪರ್‌, ಟ್ರ್ಯಾಕ್ಟರ್‌ ಇನ್ನಿತರ ವಾಹನಗಳೊಂದಿಗೆ ಲೋಕೋಪಯೋಗಿ
ಹಾಗೂ ಪಾಲಿಕೆ ಸಿಬ್ಬಂದಿ ಆಗಮಿಸಿದ್ದರು. ಒಳಾವರಣದಲ್ಲಿರುವ ಅಂಗಡಿಗಳನ್ನು ತೆಗೆಯಲಾಗುತ್ತದೆ ಎನ್ನುವ ಮುನ್ಸೂಚನೆ ಅರಿತು ಹಲವರು ಜಮಾಗೊಂಡರು ನ್ಯಾಯಾಲಯ ಪ್ರವೇಶಕ್ಕೆ ಮುಖ್ಯರಸ್ತೆಯಲ್ಲಿರುವ ಬಾಗಿಲು
ಮುಂಭಾಗದಲ್ಲಿಯೇ ವಕೀಲರು, ವ್ಯಾಪಾರಿಗಳು ಸೇರಿಕೊಂಡು ಕುಳಿತು ಪ್ರತಿಭಟನೆ ಆರಂಭಿಸಿದರಲ್ಲದೇ ಸಮಯಾವಕಾಶ ಕೇಳಿದರು. ಇದರ ನಡುವೆ ಪೊಲೀಸರ ಬಲದೊಂದಿಗೆ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಒಳಪ್ರವೇಶಕ್ಕೆ ಮುಂದಾದರು. ಈ ವೇಳೆಯಲ್ಲಿ ಪ್ರತಿರೋಧಿಸಿದವರ ಹಾಗೂ ತೆರವುಗೊಳಿಸಲು ಮುಂದಾದವರ ನಡುವೆ ಮಾತಿನ ಚಕಮಕಿ ನಡೆಯಿತು. 

ಗೂಡಂಗಡಿಗಳ ತೆರವಿಗೆ ಮಾನ್ಯ ಹೈಕೋರ್ಟ್‌ ಸೂಚನೆಯಿದೆ. ಹೀಗಾಗಿ ಕಾರ್ಯಾಚರಣೆಗೆ ಮುಂದಾಗಲಾಗುತ್ತಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದದರು. ಇದಕ್ಕೆ ಎರಡು ದಿನ ಸಮಯ ಕೊಡಿ ನಾವೇ ಖಾಲಿ ಮಾಡುತ್ತೇವೆ ಎಂದು ವ್ಯಾಪಾರಿಗಳು ಅಧಿಕಾರಿಗಳಿಗೆ ಮೊರೆ ಹೋದರು. ಕೊನೆಗೆ ಸಂಜೆ ವೇಳೆ ಗಡುವು ನೀಡಿ, ಕಾರ್ಯಾಚರಣೆ ಕೈಬಿಡಲಾಯಿತು. ವಕೀಲರ ಸಂಘದ ಅಧ್ಯಕ್ಷ ಹಿರಿಯ ನ್ಯಾಯವಾದಿಗಳಾದ ಪಿ.ವಿಲಾಸಕುಮಾರ, ಪಿ.ಎಸ್‌.ಪಾಟೀಲ್‌ ಬಳಬಟ್ಟಿ, ರಮೇಶ ಕಡಾಳೆ ಸೇರಿದಂತೆ ಮುಂತಾದವರಿದ್ದರು.

ರಿಂಗ್‌ರೋಡ್‌ನ‌ಲ್ಲಿ ಜೆಸಿಬಿ ಸದ್ದು: ಕಲಬುರಗಿ ನಗರದ ರಿಂಗ್‌ರೋಡ್‌ ನ‌ಲ್ಲಿ ಒತ್ತುವರಿ ಮಾಡಿಕೊಂಡು ತಲೆ ಎತ್ತಿರುವ
ಕಟ್ಟಡಗಳನ್ನು ಹಾಗೂ ಸರ್ವಿಸ್‌ ರೋಡ್‌ ಕಬ್ಜಾ ಮಾಡಿಕೊಂಡು ಶೆಡ್‌ ಹಾಕಿದ್ದನ್ನು ಮಹಾನಗರ ಪಾಲಿಕೆ ಸಿಬ್ಬಂದಿ ರವಿವಾರ ಬೆಳಗ್ಗೆ ಮಿಂಚಿನ ಕಾರ್ಯಾಚರಣೆ ಮೂಲಕ ನೆಲಸಮಗೊಳಿಸಿದರು.

ಹಾಗರಗಾ ಕ್ರಾಸ್‌, ಬುಲಂದಪರ್ವೇಜ್‌ ಕಾಲನಿ ರೋಡ್‌, ಮಹ್ಮದ ರಫೀಚೌಕ್‌, ಕೆಸಿಟಿ ಸರ್ಕಲ್‌ ಮೊದಲಾದ ಕಡೆಗಳಲ್ಲಿನ ಒತ್ತುವರಿಗಳನ್ನು ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ತೆರುವುಗೊಳಿಸಲಾಯಿತು. ಇದಲ್ಲದೇ
ನಗರದ ವಿವಿಧೆಡೆ ಜೆಸಿಬಿ ಸದ್ದು ಮಾಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next