ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸಲು ಒತ್ತಾಯಿಸಿ ಸೋಮವಾರ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ನೀರಾವರಿ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಿದ್ದಾರೆ.
Advertisement
ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ 25 ದಿನ ಕಳೆದಿದೆ. ಆದರೆ, ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಅರಸಾಪುರ, ಸಾರಥಿ, ಕೆಂಚವ್ವನಹಳ್ಳಿ, ಸಿಂಗ್ರಿಹಳ್ಳಿ, ಕೊಂಡಜ್ಜಿ, ವಡ್ಡಿನ ಹಳ್ಳಿ, ಕುರುಬರಹಳ್ಳಿ ಇತರೆ ಭಾಗಕ್ಕೆ ಈವರೆಗೆ ನೀರು ಬಂದಿಲ್ಲ. ನೀರು ಬರದೇ ಇರುವುದಕ್ಕೆ ಬಹು ಮುಖ್ಯ ಕಾರಣ ಮೇಲ್ಭಾಗದಲ್ಲಿಅಳವಡಿಸಲಾಗಿರುವ ಅಕ್ರಮ ಪಂಪ್‌ಸೆಟ್. ಅನೇಕ ವರ್ಷದಿಂದ ಇರುವ ಅಕ್ರಮ ಪಂಪ್ ಸೆಟ್ ತೆರವಿಗೊಳಿಸಲಾಗುತ್ತಿಲ್ಲ. ಸಂಬಂಧಿತ ಇಲಾಖೆಯವರ ನಿರ್ಲಕ್ಷ್ಯದಿಂದ ಈ ರೀತಿ ಆಗುತ್ತಿದೆ. ಕೂಡಲೇ ಆ. 10 ರ ಒಳಗೆ ಅಕ್ರಮ ಪಂಪ್‌ಸೆಟ್ ತೆರವುಗೊಳಿಸಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದಿನಗಳು ಮಾತ್ರ ನೀರು ಹರಿಸಲಾಗುತ್ತಿದೆ. ಅಕ್ರಮ ಪಂಪ್‌ಸೆಟ್ ತೆರವು ಗೊಳಿಸದೇ ಇದ್ದರೆ ಅಚ್ಚುಕಟ್ಟು ಭಾಗಕ್ಕೆ ನೀರು ಹರಿಯಲು ಸಾಧ್ಯವೇ ಇಲ್ಲ. ಹಾಗಾಗಿ ಅಧಿಕಾರಿಗಳು ಅಕ್ರಮ ಪಂಪ್‌ಸೆಟ್ ತೆರವುಗೊಳಿಸಬೇಕು. ಕೊನೆ ಭಾಗದ ರೈತರಿಗೆ ನೀರು ಒದಗಿಸಬೇಕು. ಇಲ್ಲದಿದ್ದಲ್ಲಿ, ಹೋರಾಟ ನಡೆಸಲಾಗುವುದು. ನೀರಾವರಿ ಕಚೇರಿಗಳಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದರು. ಭಾರತೀಯ ರೈತ ಒಕ್ಕೂಟ(ಭದ್ರಾ ಶಾಖೆ) ಪ್ರಧಾನ ಕಾರ್ಯದರ್ಶಿ ಶಾಮನೂರು ಎಚ್.ಆರ್. ಲಿಂಗರಾಜ್ ಅರಸಾಪುರ, ಸಾರಥಿ, ಕೆಂಚವ್ವನಹಳ್ಳಿ, ಸಿಂಗ್ರಿಹಳ್ಳಿ, ಕೊಂಡಜ್ಜಿ, ವಡ್ಡಿನ ಹಳ್ಳಿ, ಕುರುಬರಹಳ್ಳಿ ಗ್ರಾಮಸ್ಥರು ಇದ್ದರು.