Advertisement

ಐಟಿ ರಿಟರ್ನ್ಸ್ ಸಲ್ಲಿಕೆಯ ಕೊನೇ ದಿನ ಆಗಸ್ಟ್‌ 5ರ ವರೆಗೆ ವಿಸ್ತರಣೆ

04:09 PM Jul 31, 2017 | udayavani editorial |

ಹೊಸದಿಲ್ಲಿ : ಆದಾಯ ತೆರಿಗೆ ರಿಟನ್ಸ್‌ ಸಲ್ಲಿಸುವ ಅಂತಿಮ ದಿನವನ್ನು ಆಗಸ್ಟ್‌ 5ರ ವರೆಗೆ ವಿಸ್ತರಿಸಲಾಗಿದೆ. 

Advertisement

2016-17 ಹಣಕಾಸು ವರ್ಷ (2017-18ರ ಅಸೆಸ್‌ಮೆಂಟ್‌ ವರ್ಷ)ಕ್ಕೆ ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿತ್ತು. ಆದರೆ ಆದಾಯ ರಿಟರ್ನ್ ಸಲ್ಲಿಕೆಗೆ ಇ-ಫೈಲಿಂಗ್‌ ವೆಬ್‌ಸೈಟ್‌ಗಳು ತಾಂತ್ರಿಕ ಅಡಚಣೆಗಳನ್ನು ಎದುರಿಸುತ್ತಿವೆ ಎಂಬ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ರಿಟರ್ನ್ಸ್ ಸಲ್ಲಿಕೆಯ ಕೊನೇ ದಿನವನ್ನು ಆಗಸ್ಟ್‌ 5ರ ವರೆಗೆ ವಿಸ್ತರಿಸಲಾಯಿತೆಂದು ಐಟಿ ಮೂಲಗಳು ತಿಳಿಸಿವೆ. 

ಐಟಿ ಇಲಾಖೆ ಈಗಾಗಲೇ ಎರಡು ಕೋಟಿ ರಿಟರ್ನ್ ಗಳನ್ನು  ಇ-ಫೈಲಿಂಗ್‌ ಮೂಲಕ ಸ್ವೀಕರಿಸಿದೆ. ಇದೇ ಜುಲೈ 1ರಿಂದ ತೊಡಗಿ ಪಾನ್‌ ಕಾರ್ಡ್‌ ನಂಬರ್‌ ಜತೆಗೆ ಆಧಾರ್‌ ಕಾರ್ಡ್‌ ನಂಬರನ್ನು ಜೋಡಿಸುವುದನ್ನು ಕಡ್ಡಾಯ ಮಾಡಲಾಗಿದೆ. 

ಕೇಂದ್ರ ಸರಕಾರ ನೋಟು ಅಪನಗದೀಕರಿಸಿದ ಬಳಿಕದಲ್ಲಿ 2016ರ ನವೆಂಬರ 9ರಿಂದ ಡಿಸೆಂಬರ್‌ 30 ವರೆಗಿನ ಅವಧಿಯಲ್ಲಿ ತೆರಿಗೆಪಾವತಿದಾರರು ತಾವು ತಮ್ಮ ಬ್ಯಾಂಕ್‌ ಖಾತೆಗೆ ಜಮೆ ಮಾಡಿರುವ 2 ಲಕ್ಷ ರೂ. ಅಥವಾ ಅದಕ್ಕೂ ಮೀರಿದ ರದ್ದಾದ ನೋಟುಗಳ ಪ್ರಮಾಣವನ್ನು ರಿಟರ್ನ್ಸ್ ನಲ್ಲಿ ನಮೂದಿಸುವುದನ್ನೂ ಕಡ್ಡಾಯ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next