ಹೊಸದಿಲ್ಲಿ: ಭಾರತೀಯ ಸೇನೆಯ ಅಧಿಕಾರಿಗಳಲ್ಲಿ ದೈಹಿಕ ಗುಣಮಟ್ಟ ಕುಸಿಯುತ್ತಿರುವುದು ಮತ್ತು ಜೀವನ ಶೈಲಿಯಿಂದಾಗಿ ಬೊಜ್ಜು ಮತ್ತಿತರ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರು ವುದು ಕಂಡುಬರುತ್ತಿದ್ದು, ಇದನ್ನು ಪರಿ ಹರಿಸುವ ನಿಟ್ಟಿನಲ್ಲಿ ಸೇನೆಯು ಹೊಸ ನೀತಿಯೊಂದನ್ನು ಜಾರಿ ಮಾಡಿದೆ.
ಅದರಂತೆ, ಅತಿಕಾಯ (ಬೊಜ್ಜು) ಹೊಂದಿರುವ ಸೇನಾಧಿಕಾರಿಗಳು 30 ದಿನಗಳೊಳಗಾಗಿ ಬೊಜ್ಜು ಇಳಿಸಿ ಕೊಳ್ಳದಿದ್ದರೆ, ಅವರ ವಿರುದ್ಧ ಕಠಿನ ಕ್ರಮ ಕೊಳ್ಳಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ.
ಪ್ರಸ್ತುತ ಇರುವಂಥ ದೈಹಿಕ ಫಿಟೆ°ಸ್ ಪರೀಕ್ಷೆಗಳಿಗೆ ಮತ್ತಷ್ಟು ಪರೀಕ್ಷೆಗಳನ್ನು ಸೇರ್ಪಡೆಗೊ ಳಿಸಲಾಗಿದೆ. ಅಲ್ಲದೇ ಸೇನೆಯಲ್ಲಿರುವ ಪ್ರತಿಯೊಬ್ಬರೂ ಸೇನಾ ದೈಹಿಕ ಕ್ಷಮತೆ ಮೌಲ್ಯಮಾಪನಾ ಕಾರ್ಡ್(ಎಪಿಎಸಿ) ಹೊಂದಿರಬೇ ಕಾದ್ದನ್ನು ಕಡ್ಡಾಯಗೊ ಳಿಸಲಾಗಿದೆ.ಈವರೆಗೆ ತ್ತೈಮಾಸಿಕ ದೈಹಿಕ ಪರೀಕ್ಷೆ ಗಳನ್ನು ಕಮಾಂಡಿಂಗ್ ಅಧಿಕಾರಿ ನಡೆಸುತ್ತಿದ್ದರು. ಇನ್ನು ಮುಂದೆ ಇದನ್ನು ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿ ನಡೆಸಲಿದ್ದಾರೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಸಮಾನತೆ ತರುವ ಉದ್ದೇಶದಿಂದ ಹೊಸ ನೀತಿ ಅನುಷ್ಠಾನ ಮಾಡಲಾಗಿದೆ ಎಂದು ಎಲ್ಲ ಕಮಾಂಡ್‌ಗಳಿಗೂ ಪತ್ರ ರವಾನಿಸಲಾಗಿದೆ.
ಪ್ರಸ್ತುತ ಇರುವ ತ್ತೈಮಾಸಿಕ, ಬಿಪಿಇಟಿ ಮತ್ತು ಪಿಪಿಟಿ ಪರೀಕ್ಷೆಯ ಜೊತೆಗೆ ಪ್ರತಿ 6 ತಿಂಗಳಿಗೊಮ್ಮೆ 10 ಕಿ.ಮೀ. ವೇಗದ ನಡಿಗೆ, 10 ಕಿ.ಮೀ. ರೂಟ್ ಮಾರ್ಚ್ ಅನ್ನು ಸೇರ್ಪಡೆ ಗೊಳಿ ಸಲಾಗಿದೆ. ಪರೀಕ್ಷೆಯ ಫಲಿತಾಂಶ ವನ್ನು 24 ಗಂಟೆಗಳೊಳಗಾಗಿ ಪ್ರಕಟಿಸ ಬೇಕು ಎಂದೂ ಸೂಚಿಸಲಾಗಿದೆ.