Advertisement
ಬಿಹಾರದ ಬಂಕಾದಲ್ಲಿರುವ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಜೂನ್ 13 ರಂದು ಇಲ್ಲಿನ ಖಾಸಗಿ ಮೆಸ್ ನಿಂದ ಆಹಾರ ಸರಬರಾಜು ಆಗಿದೆ ಇದನ್ನು ಸೇವಿಸಿದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು ಕೆಲವರು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಈ ವೇಳೆ ಮೆಸ್ ನಿಂದ ನೀಡಿದ ಆಹಾರದಲ್ಲಿ ಸತ್ತ ಹಾವಿನ ಮರಿ ಇರುವುದು ಬೆಳಕಿಗೆ ಬಂದಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಹಾಸ್ಟೆಲ್ ಗೆ ವಾಪಸಾಗಿದ್ದಾರೆ ಎನ್ನಲಾಗಿದೆ. ಈ ಕಾಲೇಜಿನಲ್ಲಿ ಇದೆ ರೀತಿಯ ಪ್ರಕರಣ ಈ ಮೊದಲು ನಡೆದಿತ್ತು ಎಂದು ಹೇಳಲಾಗಿದೆ.