Advertisement

ಡಿ ಕಾಕ್‌ ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ

10:41 PM Jul 05, 2020 | Sriram |

ಜೊಹಾನ್ಸ್‌ಬರ್ಗ್‌: ಏಕದಿನ ಕ್ರಿಕೆಟ್‌ ತಂಡದ ನಾಯಕ ಕ್ವಿಂಟನ್‌ ಡಿ ಕಾಕ್‌ “ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Advertisement

ಕೋವಿಡ್‌-19 ಕಾರಣದಿಂದ “ಕ್ರಿಕೆಟ್‌ ಸೌತ್‌ ಆಫ್ರಿಕಾ’ ಆಯೋಜಿಸಿದ ಸಾಂಕೇತಿಕ ಕಾರ್ಯಕ್ರಮದಲ್ಲಿ ಇದನ್ನು ಘೋಷಿಸಲಾಯಿತು.

ಕ್ವಿಂಟನ್‌ ಡಿ ಕಾಕ್‌ “ವರ್ಷದ ಟೆಸ್ಟ್‌ ಕ್ರಿಕೆಟಿಗ’ ಗೌರವವನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಅವರು ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರರಾದದ್ದು ಇದು ಎರಡನೇ ಸಲ.

2017ರಲ್ಲೂ ಡಿ ಕಾಕ್‌ಗೆ ಈ ಗೌರವ ಒಲಿದಿತ್ತು.ವನಿತಾ ವಿಭಾಗದ ವರ್ಷದ ಆಟಗಾರ್ತಿ ಪ್ರಶಸ್ತಿ ಯುವ ಓಪನರ್‌ ಲಾರಾ ವೋಲ್ವಾರ್ಟ್‌ ಪಾಲಾಯಿತು. ಜತೆಗೆ ವರ್ಷದ ಏಕದಿನ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next