Advertisement

ಕ್ವಾರಂಟೈನ್ ಗೆ ಒಳಗಾದ ಡಿಡಿಸಿಎ ಕಾರ್ಯದರ್ಶಿ ವಿನೋದ್ ತಿಹಾರ

03:38 PM Apr 23, 2020 | keerthan |

ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ವೈರಸ್ ಸೋಂಕು ಇದೀಗ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ( ಡಿಡಿಸಿಎ) ಗೂ ತಲುಪಿದೆ.

Advertisement

ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ವಿನೋದಸ್ ತಿಹಾರ ಅವರಲ್ಲಿ ಕೋವಿಡ್-19 ಲಕ್ಷಣಗಳು ಕಂಡು ಬಂದದ್ದರಿಂದ ಅವರು ಇದೀಗ ಸ್ವಯಂ ಪ್ರತ್ಯೇಕತೆಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೂ ಕೆಲವು ದಿನಗಳು ಅವರು ಕ್ವಾರಂಟೈನ್ ನಲ್ಲಿ ಮುಂದುವರಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಗರಣದಲ್ಲಿ ಸಿಲುಕಿದ್ದ ವಿನೋದ್ ತಿಹಾರ ಅವರನ್ನು ಮಾರ್ಚ್ 17ರಂದು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ತಿಹಾರ ಮೀರತ್ ಜೈಲಿನಲ್ಲಿದ್ದಾರೆ.

ದೆಹಲಿಯಲ್ಲಿ ಇದುವರೆಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಹಾಗಾಗಿ ರಾಷ್ಟ್ರ ರಾಜಧಾನಿಯ ಜನರು ಆತಂಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next