Advertisement

ದೂರದರ್ಶನದಿಂದ ಡಿಡಿ ಸೈನ್ಸ್‌, ಇಂಡಿಯಾ ಸೈನ್ಸ್‌

03:43 AM Jan 16, 2019 | |

ನವದೆಹಲಿ: ವಿದ್ಯಾರ್ಥಿಗಳಲ್ಲಿ ಹಾಗೂ ನಾಗರಿಕರಲ್ಲಿ ವಿಜ್ಞಾನದ ಬಗ್ಗೆ ಇರುವ ಆಸಕ್ತಿ ಹಾಗೂ ಜಾಗೃತಿಯನ್ನು ಉದ್ದೀಪನಗೊಳಿಸುವ ಉದ್ದೇಶದಿಂದ ದೂರದರ್ಶನದ ವತಿಯಿಂದ, ‘ಡಿಡಿ ಸೈನ್ಸ್‌’ ಎಂಬ ಕಾರ್ಯಕ್ರಮ ಹಾಗೂ ‘ಇಂಡಿಯಾ ಸೈನ್ಸ್‌’ ಎಂಬ ವಾಹಿನಿಯೊಂದನ್ನು ಮಂಗಳವಾರ ಆರಂಭಿಸಲಾಗಿದೆ. ಇವುಗಳಲ್ಲಿ, ಸದ್ಯದ ಮಟ್ಟಿಗೆ ‘ಡಿಡಿ ಸೈನ್ಸ್‌’, ದೂರದರ್ಶನ ರಾಷ್ಟ್ರೀಯ ಜಾಲದ ವಾಹಿನಿಯಲ್ಲಿ ಪ್ರತಿ ದಿನ ಒಂದು ಗಂಟೆ ಮೂಡಿಬರಲಿದೆ. ಇನ್ನು, ಡಿಡಿ ಸೈನ್ಸ್‌ ಅಂತರ್ಜಾಲ ಆಧಾರಿತ ವಾಹಿನಿಯಾಗಿದೆ.

Advertisement

247 ವಾಹಿನಿಗೆ ಚಿಂತನೆ: ವಾಹಿನಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಹರ್ಷವರ್ಧನ್‌, ”ದೇಶದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಜಾಗೃತಗೊಳಿಸು ವುದು ಇಂದಿನ ತುರ್ತು ಅವಶ್ಯಕತೆಗಳಲ್ಲೊಂದು. ಹೊಸ ಆಲೋಚನೆ, ಪ್ರತಿಭೆ, ತಾಕತ್ತಿಗೆ ಕೊರತೆಯಿಲ್ಲ. ಇವುಗಳ ಸದ್ಬಳಕೆಯಾಗಬೇಕು ಎಂದರಲ್ಲದೆ, ಸದ್ಯದಲ್ಲೇ ದಿನದ 24 ಗಂಟೆಗಳೂ ವಿಜ್ಞಾನದ ಕಾರ್ಯಕ್ರಮ ಪ್ರಸಾರ ಮಾಡುವಂಥ ವಾಹಿನಿ ಆರಂಭಿಸುವ ಆಲೋಚನೆಯೂ ಇದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next