ಉಡುಪಿ: ಶಿವಾಜಿ ಮಹಾರಾಜ ನಮ್ಮವನೇ. ಎಂಟು ತಲೆಮಾರುಗಳ ಹಿಮದೆ ಶಿವಾಜಿ ವಂಶಸ್ಥರು ಕರ್ನಾಟಕದ ಗದಗ ಜಿಲ್ಲೆಯವರಾಗಿದ್ದರು. ನಂತರ ಅವರು ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಆದರೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವಿವೇಕತನದ ಹೇಳಿಕೆ ನೀಡುತ್ತಿದ್ದಾರೆ” ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಕಾರವಾರ, ನಿಪ್ಪಾಣಿ ಕರ್ನಾಟಕದ ಅಂಗಗಳು. ನಮ್ಮ ರಾಜ್ಯದ 2ನೇ ರಾಜಧಾನಿ ಬೆಳಗಾವಿ ಎನ್ನುವುದು ಹೆಮ್ಮೆ ಎಂದರು.
ಇದನ್ನೂ ಓದಿ:ಉದ್ಧವ್ ಠಾಕ್ರೆ ಮೊದಲು ಕೋವಿಡ್ ನಿಯಂತ್ರಿಸುವ ಕೆಲಸ ಮಾಡಲಿ: ಜಗದೀಶ್ ಶೆಟ್ಟರ್
ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿದೆ. ಅಲ್ಲಿನ ಪರಿಸ್ಥಿತಿ ಕನ್ನಡದ ಧಾರವಾಹಿ ಮನೆಯೊಂದು ಮೂರು ಬಾಗಿಲು ಥರ ಆಗಿದೆ. ಎತ್ತು ಏರಿಗೆಳೆದರೆ ಕೋಣ ಕೆರೆಗೆ ಎಳೆಯಿತು ಎಂಬಂತಾಗಿದೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಹೀಗೆಲ್ಲ ಮಾತನಾಡುತ್ತಾರೆ” ಎಂದು ಡಿಸಿಎಂ ಸವದಿ ಟೀಕಿಸಿದರು.
ಇದನ್ನೂ ಓದಿ:ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಧ್ರುವನಾರಾಯಣ್ ವಾಗ್ದಾಳಿ
ಬೆಳಗಾವಿ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಟಿಕೆಟ್ ಬಗ್ಗೆ ಇದುವರೆಗೆ ಚರ್ಚೆಯಾಗಿಲ್ಲ. ಕೆಲವೊಂದು ಹೆಸರುಗಳನ್ನು ಕಳುಹಿಸಿದ್ದೇವೆ. ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ ಎಂದರು.