Advertisement

ಕರ್ನಾಟಕ ಬಂದ್ ಕೈ ಬಿಡಲು ಡಿಸಿಎಂ ಲಕ್ಷ್ಮಣ ಸವದಿ ಮನವಿ

06:11 PM Nov 20, 2020 | Mithun PG |

ಬೀದರ್:  ಮರಾಠಾ ಅಭಿವೃದ್ಧಿ ನಿಗಮವನ್ನು ಒಂದು ಭಾಷೆ ಹೆಸರಿನಲ್ಲಿ ರಚನೆ ಮಾಡಿದಲ್ಲ. ಹಿಂದುಳಿದ ಸಮುದಾಯವನ್ನು ಮೇಲೆತ್ತಲು ಈ ನಿಗಮ ಸ್ಥಾಪಿಸಲಾಗಿದೆ. ಇದರಿಂದ ಮರಾಠಾ ಏಕೀಕರಣ ಸಮಿತಿಗೆ ಶಕ್ತಿ ಸಿಕ್ಕಂತಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ನಿರ್ಧಾರವನ್ನು ಕೈಬಿಡಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿದರು.

Advertisement

ಬಸವಕಲ್ಯಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠಾ ಸಮಾಜದಲ್ಲಿ ಬಡವರು ಮತ್ತು ಹಿಂದುಳಿದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಇದೇ ನೆಲದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆ ಸಮುದಾಯ ಸಹ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲಿ ಎಂಬುದು ಸರ್ಕಾರದ ಆಶಯ. ನಿಗಮದ ವಿಷಯದಲ್ಲಿ ಅನಗತ್ಯವಾಗಿ ಗೊಂದಲ ಮೂಡಿಸುವುದನ್ನು ಬಿಡಬೇಕು ಎಂದರು.

ಇವ ನಮ್ಮವ ಎಂದು ಬಸವಣ್ಣ ಸಾರಿದ ನಾಡು ಕರ್ನಾಟಕ. ನೊಂದ ಸಮುದಾಯಕ್ಕಾಗಿ ಸರ್ಕಾರ ನಿಗಮ ರಚಿಸುವ ನಿರ್ಣಯ ಕೈಗೊಂಡಿದೆ. ಹಾಗಾಗಿ ಬಂದ್ ಕುರಿತು ಅಧಿಕೃತವಾಗಿ ಘೋಷಿಸಿದವರು ಕೂಡಲೇ ಹಿಂದೆ ಸರಿಯಬೇಕು. ಡಿ. 5ರಂದು ಯಾವುದೇ ಕಾರಣಕ್ಕೂ ಬಂದ್ ಇರವುದಿಲ್ಲ, ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಹ ಎಂದಿನಂತೆ ಇರಲಿವೆ ಎಂದು ಸಚಿವ ಸವದಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಜೈಶ್ ಉಗ್ರರ 26/11 ಮಾದರಿ ದಾಳಿ ಸಂಚು ವಿಫಲ: ನಗ್ರೋಟಾ ಎನ್ ಕೌಂಟರ್ ಬಗ್ಗೆ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next