Advertisement

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ, ಇಲ್ಲದ ವದಂತಿಗೆ ರೆಕ್ಕೆಪುಕ್ಕ‌ ಕಟ್ಟಲಾಗಿದೆ :ಡಿಸಿಎಂ ಸವದಿ

12:45 PM Nov 30, 2020 | sudhir |

ರಾಯಚೂರು : ಬಿ.ಎಸ್.ಯಡಿಯೂರಪ್ಪ ಅವರೇ ಎರಡೂವರೆ ವರ್ಷ ಅಧಿಕಾರ ಪೂರೈಸಲಿದ್ದಾರೆ. ಸಿಎಂ ಬದಲಾವಣೆ ಸಂಗತಿಯೇ ಊಹಾಪೋಹ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

Advertisement

ಸಿಂಧನೂರಿನಲ್ಲಿ ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಸಿಎಂ ಬದಲಾವಣೆ ಕುರಿತಂತೆ ಯಾವುದೇ ಚರ್ಚೆಯಿಲ್ಲ, ಇಲ್ಲದ ವದಂತಿಗೆ ರೆಕ್ಕೆಪುಕ್ಕ‌ ಕಟ್ಟಲಾಗಿದೆ, ಯಾವುದರಲ್ಲೂ ಹುರುಳಿಲ್ಲ. 2023 ರಲ್ಲೂ ಸಾರ್ವತ್ರಿಕ‌ ಚುನಾವಣೆಯನ್ನು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿಯೇ ಎದುರಿಸುತ್ತೇವೆ. ಅವರು ಹಿರಿಯರು. ಹೀಗಾಗಿ ಅವರ ನಿರ್ದೇಶನದಲ್ಲಿ ನಾವೆಲ್ಲ ಮುನ್ನಡೆಯುತ್ತೇವೆ ಎಂದರು.

ಸಚಿವ ಸ್ಥಾನದ ಆಕಾಂಕ್ಷಿಗಳ ಹಿನ್ನೆಲೆಯಲ್ಲಿ ಯಾವ ಗೊಂದಲವೂ ಇಲ್ಲ. ದೆಹಲಿಗೆ ಹೋಗಿ ಬರುವುದು ಅವರವರ ಕೆಲಸದ ಮೇಲೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕಚೇರಿ ಉದ್ಘಾಟನೆ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಬೇಕಾಯಿತು. ಬೆಂಗಳೂರಿನಲ್ಲಿ ಡಿಫೆನ್ಸ್ ಲ್ಯಾಂಡ್ ಬದಲಾವಣೆ ಕೆಲಸಕ್ಕಾಗಿ ಕೇಂದ್ರ ಸಚಿವ ರಾಜನಾಥಸಿಂಗ್ ಹಾಗೂ ಇತರ ಸಚಿವರನ್ನು ಭೇಟಿ ಮಾಡಲು ನಾನು ಹೋಗಿದ್ದೆ. ಎಲ್ಲದಕ್ಕೂ ರಾಜಕೀಯ ಬಣ್ಞ ಅವಶ್ಯವಿಲ್ಲ ಎಂದರು.

ಇದನ್ನೂ ಓದಿ:ಗ್ರಾ.ಪಂ ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ನಿಗದಿ: ಎರಡು ಹಂತಗಳಲ್ಲಿ ನಡೆಯಲಿದೆ ಮತದಾನ

2ಎ ಸೇರ್ಪಡೆ ಪ್ರಸ್ತಾವನೆಯಿಲ್ಲ:
ಲಿಂಗಾಯಿತರನ್ನು 2ಎಗೆ ಸೇರಿಸುವ ಯಾವುದೇ ಪ್ರಸ್ತಾವನೆ ಇಟ್ಟುಕೊಂಡಿಲ್ಲ. ಪ್ರತ್ಯೇಕ ನಿಗಮವನ್ನು ರಚನೆ ಮಾಡಿ ಈಗಾಗಲೇ 500 ಕೋಟಿ ರೂ.ಮೀಸಲಿಡಲಾಗಿದೆ. ಹಿಂದುಳಿದವರ ಅಭಿವೃದ್ಧಿ‌ ದೃಷಿಯಿಂದ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Advertisement

ಈ ಮಾತಿಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮಲು ಅವರು ಕೂಡ ಧ್ವನಿಗೂಡಿಸಿ, ಸೇರ್ಪಡೆ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು.
ಅರಣ್ಯ ಸಚಿವ ಬಿ.ಎಸ್. ಆನಂದಸಿಂಗ್, ಬಿಜೆಪಿ ಮುಖಂಡರಾದ ಕೊಲ್ಲಾಶೇಷಗಿರಿರಾವ್, ಮಧ್ವರಾಜ್ ಆಚಾರ್, ಹನುಮೇಶ ಸಾಲಗುಂದಾ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next