Advertisement

ಕಾಯಕ ಶರಣರ ಆದರ್ಶಗಳನ್ನು ಪಾಲಿಸಲು  ಗೋವಿಂದ ಕಾರಜೋಳ ಕರೆ

10:42 PM Mar 11, 2021 | Team Udayavani |

ಬೆಂಗಳೂರು: ಮಾದಾರ ಚೆನ್ನಯ್ಯ, ಡೊಹಾರ ಕಕ್ಕಯ್ಯ, ಹರಳ್ಯ ಸೇರಿದಂತೆ  ಅನೇಕ   ಕಾಯಕ ಶರಣರು  ತಮ್ಮ ಕಾಯಕ ಜೊತೆಜೊತೆಗೆ ಸಾಮಾಜಿಕ ಸಮಾನತೆಗಾಗಿ ಅಪರಿಮಿತವಾಗಿ ಶ್ರಮಿಸಿದ್ದಾರೆ. ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿ ಸಾಮಾಜಿಕ ಸಮಾನತೆಗೆ  ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಕರೆ ನೀಡಿದರು.

Advertisement

ಬೆಂಗಳೂರಿನಲ್ಲಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯಕವೇ ಶ್ರೇಷ್ಠ ಎಂದು ವಿಶ್ವಗುರು ಬಸವಣ್ಣ ಅವರು ಬಣ್ಣಿಸಿ ಕಾಯಕ ಶರಣರಿಗೆ ಹಾಗೂ ಅವರ  ವೃತ್ತಿಗೆ ಗೌರವ   ನೀಡಿದ್ದಾರೆ. ಬಸವಣ್ಣ ಅವರು ಸಾಮಾಜಿಕ ಕ್ರಾಂತಿ ಮಾಡಿರುವುದರ ಜೊತೆಗೆ ಅಪಾರವಾದ ಸಾಮಾಜಿಕ ಕಳಕಳಿ ಹೊಂದಿದ್ದರು. ಅಪ್ಪನು ಮಾದರ ಚೆನ್ನಯ್ಯ, ಬೊಪ್ಪನು ದೊಹಾರ ಕಕ್ಕಯ್ಯ,  ಚೆನ್ನಯ್ಯನ ದಾಸನ ಮಗನು ಕಕ್ಕಯ್ಯನ ದಾಸಿಯ ಮಗಳು ಸಂಗವ ಮಾಡಿ ಇವರಿಬ್ಬರಿಗೆ ಹುಟ್ಟಿದ ಮಗ ನಾನು ಎಂದು  ತಮ್ಮ ವಚನಗಳಲ್ಲಿ  ಹೇಳುವ ಮೂಲಕ ಸಾಮಾಜಿಕ ಸಮಾನತೆಗೆ , ತಳ ಸಮುದಾಯಕ್ಕೆ  ಪ್ರಾಶ್ಯಶ್ಯ ನೀಡುವ ಮೂಲಕ ಸಾಮಾಜಿಕ  ಕ್ರಾಂತಿಯನ್ನೇ ಮಾಡಿದ್ದಾರೆ. ನಡೆ  ನುಡಿ ಸಿದ್ದಾಂತಕ್ಕೆ ಬದ್ದವಾಗಿರುವ ಮೂಲಕ  ಬಸವಣ್ಣ ಆದರ್ಶಗಳನ್ನು ಅನುಸರಿಸಬೇಕು. ಮನುಷ್ಯ ನಿಂದ ಮನುಷ್ಯ ನ ಶೋಷಣೆ ಇರಬಾರದು. ಲಿಂಗಬೇದ ಇರಬಾರದು. ಅದಕ್ಕಾಗಿ ಅಲ್ಲಮ ಪ್ರಭು ದೇವರ ಅಧ್ಯಕ್ಷತೆಯಲ್ಲಿ ನಡೆದ ಅನುಭವ ಮಂಟಪವನ್ನು  ಭಾಗವಹಿಸಿದ್ದ  770 ಗಣಾಂಗಣರಲ್ಲಿ 77 ಮಹಿಳಾ ಶಿವಶರಣೆಯರಿದ್ದರು. ಎಲ್ಲರೂ ಪೀಠಾಧಿಪತಿಗಳಾಗಿದ್ದರು. ಜಾತಿ ಲಿಂಗ, ಧರ್ಮ ಭೇದವಿಲ್ಲದೇ ನಡೆದ ಅನುಭವ ಮಂಟಪ ಎಂದೆಂದೂ ಮಾದರಿಯಾಗಿದೆ ಎಂದರು.

ಇದನ್ನೂ ಓದಿ : ಮಂಗಳೂರು : ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಲೂಟಿ ಮಾಡಿದ ಕಳ್ಳರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಈ ಸಂಸತ್ ಭವನ ಅನುಭವ ಮಂಟಪವಾಗಲಿ ಎಂದು ಆಶಿಸಿದ್ದಾರೆ. ಮೋಜಿ ಅವರಿಗೂ   ಬಸವಣ್ಣ ಅವರ ವಚನಗಳು ಪ್ರಭಾವ ಬೀರಿವೆ. ಕಾಯಕ ಶರಣರ ಜನ್ಮ ದಿನಾಂಕ ದೊತ್ತಿರಲಿಲ್ಲ, ಅವರ ಜನ್ಮ ದಿನಾಚರಣೆಗಳನ್ನು ಮಾಡುತ್ತಿರಲಿಲ್ಲ.    ತಾವು ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಅವಧಿಯಲ್ಲಿ ಈ ಕಾಯಕ ಶರಣರ ಜನ್ಮ ದಿನಾಚರಣೆ  ಮಾಡುವ ಮೂಲಕ ಸಮುದಾಯವು ಒಗ್ಗೂಡಿ ಕಲ್ಯಾಣದತ್ತ ಸಾಗಲು ಎನ್ನುವ ಆಶಯದೊಂದಿಗೆ ಈ ದಿನಾಚರಣೆ ಮಾಡಲು  ನಿರ್ಧರಿಸಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಸ್ತಾವನೆಗೆ  ಅನುಮೋದಿಸಿದರು. ಅಲ್ಲದೇ 23 ಸಾವಿರ ವಚನಗಳುಳ್ಳ 15 ಸಂಪುಟಗಳನ್ನು ಪ್ರಕಟಿಸಲಾಗಿದೆ. ಬಸವಣ್ಣ ಅವರ ವಚನಗಳು ವಿಶ್ವದಾದ್ಯಂತ ಪಸರಿಸಬೇಕು. ಸರ್ವಜ್ಞ ಅವರು ಬಸವ ರಾಜ್ಯ ಉದಯವಾಗಲಿ ಎಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಸರ್ವಜ್ಞ ಈ  ವಚನ ಸುಳ್ಳಾಗದೇ, ಅಂತಹ ದಿನಗಳು ಬಹುಬೇಗ ಬರಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಉದಯ ಗರುಡಾಚಾರ್ ಅಧ್ಯಕ್ಷತೆ ವಹಿಸಿದ್ದರು. ಪರಮಪೂಜ್ಯ ಬಸವಹರಳಯ್ಯ ಸ್ವಾಮೀಜಿ ಮತ್ತು ಪರಮಪೂಜ್ಯ ಗುರುಮಾತಾ ನಂದಾತಾಯಿಯವರು ಸಾನಿಧ್ಯವಹಿಸಿದ್ದರು.

Advertisement

ಕಾರ್ಯಕ್ರಮದಲ್ಲಿ ಸಂಸದರಾದ ಹನುಮಂತಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮರಿಸ್ವಾಮಿ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗದ ಸದಸ್ಯ ಹೆಚ್. ವೆಂಕಟೇಶ ದೊಡ್ಡೇರಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next