Advertisement
ಇವರಿಗೆಲ್ಲ ಅಗತ್ಯ ವಸತಿ, ಸಾರಿಗೆ ಸೌಕರ್ಯ ಕಲ್ಪಿಸುವುದು ಸೇರಿ ನಾಡಿನಾದ್ಯಂತ ಬರುವ ಲಕ್ಷಕ್ಕೂ ಅಧಿಕ ಜನರಿಗೆ ಆತಿಥ್ಯ ಕಲ್ಪಿಸುವುದು ಸವಾಲಾಗಿದೆ. ಹೀಗಾಗಿ ಸಿದ್ಧತೆ ಸಮರೋಪಾದಿಯಲ್ಲಿ ಸಾಗಬೇಕಿದೆ. ಆದರೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಮ್ಮೇಳನ ನಡೆಯುವ ಗುಲ್ಬರ್ಗ ವಿವಿ ಆವರಣದ ಸ್ಥಳವನ್ನೇ ಇಂದಿಗೂ ವೀಕ್ಷಿಸಿಲ್ಲ.
Related Articles
Advertisement
ಮೆರವಣಿಗೆ 6 ಕಿ.ಮೀ. ಅಲ್ಲ, 3 ಕಿ.ಮೀ.!: ಸಮ್ಮೇಳನಾಧ್ಯಕ್ಷರಾಗಿ ಡಾ| ಎಚ್.ಎಸ್. ವೆಂಕಟೇಶಮೂರ್ತಿ ಆಯ್ಕೆಯಾದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳು ಸಮ್ಮೇಳನಾಧ್ಯಕ್ಷರಾಗಬೇಕಿತ್ತು ಎನ್ನುವ ಸಣ್ಣ ಅಪಸ್ವರ ಹಾಗೂ ಅಸಮಾಧಾನ ಉಂಟಾಗಿತ್ತು. ಒಂದು ಹಂತದಲ್ಲಿ ಸಮ್ಮೇಳನಾಧ್ಯಕ್ಷರ ಬದಲಾವಣೆಯಾದರೆ ಒಳಿತು ಎನ್ನುವ ಸಲಹೆಯೂ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಕೇಳಿ ಬಂದಿತ್ತು. ಈಗ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಎಲ್ಲಿಂದ ಪ್ರಾರಂಭವಾಗಬೇಕೆಂಬ ಗೊಂದಲ ಆರಂಭವಾಗಿದೆ.
ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಲಬುರಗಿ ನಗರದ ಸಾರ್ವಜನಿಕ ಉದ್ಯಾನವನದ ಡಾ| ಎಸ್.ಎಂ. ಪಂಡಿತ ರಂಗಮಂದಿರದಿಂದ ಆರಂಭವಾಗುವುದು ಎಂದು ಪ್ರಕಟವಾಗಿದೆ. ಆದರೆ ಸಮ್ಮೇಳನದ ಮೆರವಣಿಗೆ ಆರು ಕಿ.ಮೀ. ದೂರವಾಗುವುದರಿಂದ ಕಡಿತ ಮಾಡಿ ನಗರದ ಸೇಡಂ ರಸ್ತೆಯ ಚಂದ್ರಕಾಂತ ಪಾಟೀಲ ಶಾಲೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡಬೇಕೆಂಬ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆರು ಕಿ.ಮೀ. ದೂರವನ್ನು 3 ಕಿ.ಮೀ. ಸೀಮಿತಗೊಳಿಸಬೇಕೆಂಬ ಚರ್ಚೆ ಬಲವಾಗಿದೆ.
ನೌಕರರ ದೇಣಿಗೆಯೂ ಗೊಂದಲದಲ್ಲಿ: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಮ್ಮೇಳನಕ್ಕೆ ನೀಡಲಿರುವ ಮೂರು ಕೋಟಿ ರೂ.ಗೂ ಅಧಿಕ ದೇಣಿಗೆ ಗೊಂದಲದಲ್ಲಿ ಮುಳುಗಿದೆ. ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಮೂರು ಕೋಟಿ ರೂ. ದೇಣಿಗೆ ಚೆಕ್‌ನ್ನು ಜಿಲ್ಲಾಧಿಕಾರಿ ಬಿ. ಶರತ್ ಅವರಿಗೆ ನೀಡಲು ಮುಂದಾಗುತ್ತಿದ್ದಂತೆ ಸಂಘದ ರಾಜ್ಯಾಧ್ಯಕ್ಷರು ಇದಕ್ಕೆ ತಡೆಯೊಡ್ಡಿದ್ದಾರೆ. ಸಮ್ಮೇಳನ ಸಂಬಂಧ ತಮ್ಮನ್ನು ವಿಶ್ವಾಸಕ್ಕೆ ತೆಗೆದು ಕೊಂಡಿಲ್ಲ. ಸಮ್ಮೇಳನದುದ್ದಕ್ಕೂ ಎಲ್ಲೂ ತಮ್ಮ ಹೆಸರು ಪ್ರಸ್ತಾಪಿಸಿಲ್ಲ. ನಮ್ಮನ್ನೇ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದಾದ ಮೇಲೆ ದೇಣಿಗೆ ನೀಡುವುದನ್ನು ಕಾಯ್ದು ನೋಡೋಣ ಎಂದಿದ್ದಾರಂತೆ. ಹೀಗಾಗಿ ಜ.24ರಂದು ಸಲ್ಲಿಸಬೇಕೆಂ ದಿರುವ ದೇಣಿಗೆ ಚೆಕ್ ಮುಂದಕ್ಕೆ ಹೋಗಿದೆ.
* ಹಣಮಂತರಾವ ಭೈರಾಮಡಗಿ