ಬೆಂಗಳೂರು: ನಾಡಿನ ಹಿರಿಯ ವಿದ್ವಾಂಸ, ಪದ್ಮಶ್ರೀ, ಅಭಿನವ ಪಂಡಿತಾಚಾರ್ಯ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ವೇದ, ಪುರಾಣಗಳ ಕುರಿತ ಅವರ ಪ್ರವಚನಗಳು, ಕೃತಿಗಳು ಹಾಗೂ ಅಸಂಖ್ಯ ಬರಹಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಿದ್ದವು. ಪ್ರವಚನ, ಸಂಪಾದಿತ ಕೃತಿಗಳು, ಸಂಶೋದನೆಗಳ ಮೂಲಕ ಗ್ರಂಥಗಳ ಮೂಲಕ ಶ್ರೀ ವೇದವ್ಯಾಸ, ಶ್ರೀಕೃಷ್ಣ, ಮಧ್ವರನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನ ಡಾ. ಬನ್ನಂಜೆಬಗೋವಿಂದಾಚಾರ್ಯರು ಇಂದು ಶ್ರೀಹರಿಯ ಪಾದವನ್ನು ಸೇರಿದ್ದಾರೆ. ಅವರ ನಿಧನದಿಂದ ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ.
ಇದನ್ನೂ ಓದಿ ಹಿರಿಯ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ನಿಧನ
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಅಸಂಖ್ಯ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಉಪ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶ-ವಿದೇಶಗಳಲ್ಲಿ 30,000 ಗಂಟೆ ಉಪನ್ಯಾಸ ಪ್ರವಚನಗೈದ ದಾಖಲೆ: ಬನ್ನಂಜೆ ಸಾಧನೆಯ ಹಾದಿ !